Advertisement
ಲೋಕಸಭೆಗೆ ಸತತ ಎರಡನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾದ ರಾಜಸ್ಥಾನದ ಕೋಟಾ ಕ್ಷೇತ್ರದ ಸಂಸದ ಓಂ ಬಿರ್ಲಾ ಮಾತನಾಡಿ ಸದನದ ಸದಸ್ಯರು ದೇಶಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕಲಾಪಗಳಿಗೆ ಸದಸ್ಯರು ಗೈರಾಗದೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಸಂಸತ್ತು ಮತ್ತು ಬೀದಿಯಲ್ಲಿ ಪ್ರತಿಭಟಿಸುವುದರ ನಡುವಿನ ವ್ಯತ್ಯಾಸ ತಿಳಿದಿರಬೇಕು ಎಂದು ಹೇಳಿದರು.ಬಳಿಕ ತುರ್ತು ಪರಿಸ್ಥಿತಿಯ ಕರಾಳ ದಿನದ 50ನೇ ವರ್ಷಾಚರಣೆ ಕುರಿತು ಮಾತನಾಡಿ ತುರ್ತು ಪರಿಸ್ಥಿತಿಯ “ಕರಾಳ ಅವಧಿಯಲ್ಲಿ”ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ತುರ್ತು ಪರಿಸ್ಥಿತಿಯು ಭಾರತದ ಹಲವಾರು ನಾಗರಿಕರ ಜೀವನವನ್ನು ನಾಶ ಮಾಡಿದೆ. ಹಲವಾರು ಜನರು ಸಾವನ್ನಪ್ಪಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ಅವಧಿಯಲ್ಲಿ ಕಾಂಗ್ರೆಸ್ನ ಸರ್ವಾಧಿಕಾರಿ ಸರ್ಕಾರದ ಕೈಯಲ್ಲಿ ಪ್ರಾಣ ಕಳೆದುಕೊಂಡ ಭಾರತದ ಅಂತಹ ಕರ್ತವ್ಯನಿಷ್ಠ ಮತ್ತು ದೇಶಭಕ್ತಿಯ ನಾಗರಿಕರ ಸ್ಮರಣೆಗಾಗಿ ನಾವು 2 ನಿಮಿಷಗಳ ಮೌನವನ್ನು ಆಚರಿಸುತ್ತೇವೆʼ ಎಂದು ಬಿರ್ಲಾ ಹೇಳಿದರು.
ಸ್ಪೀಕರ್ ಭಾಷಣಕ್ಕೆ ಮೋದಿ ಮೆಚ್ಚುಗೆ
Related Articles
Advertisement
ವಿಪಕ್ಷಗಳ ಘೋಷಣೆಯ ಖಂಡಿಸಿದ ಬಿಜೆಪಿ ಸಂಸದ, ಪಕ್ಷದ ವಕ್ತಾರ ಸಂಬಿತ್ ಪಾತ್ರ ಮಾತನಾಡಿ ತುರ್ತು ಪರಿಸ್ಥಿತಿ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಪ್ರಸ್ತಾಪಸಿದ ನಿಲುವಳಿಯ ಖಂಡಿಸಿ . ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸದಸ್ಯರು ಆಸನದಲ್ಲೇ ಕುಳಿತಿದ್ದರು. ಕಾಂಗ್ರೆಸ್ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಬಂದ ಕೂಡಲೇ ಸಂವಿಧಾನ ರಕ್ಷಕರು ಆಗಲ್ಲ, ಹೃದಯಪೂರ್ವಕವಾಗಿ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಹೇಳಿದರು.