Advertisement

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

09:47 PM Jul 02, 2024 | Team Udayavani |

ನವದೆಹಲಿ: ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ.
ಲೋಕಸಭೆಯ ನಿಯಮ 377 ರಡಿ ಸರ್ಕಾರದ ಗಮನ ಸೆಳೆದಿರುವ ಅವರು, ಪುಷ್ಪ ಕೃಷಿಯು ಭಾರತದ ಪುರಾತನ ಕೃಷಿ ಪದ್ಧತಿಯಾಗಿದ್ದು, ಸಣ್ಣ ಮತ್ತು ಬಡ ರೈತರಿಗೆ ಲಾಭ ತರುವ ಜೊತೆಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ನೀಡುತ್ತದೆ. ಇಷ್ಟು ಮಹತ್ವವಿದ್ದರೂ ಭಾರತದಲ್ಲಿ ಪುಷ್ಪ ಕೃಷಿಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ್ದಾರೆ.
2022-23 ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಪುಷ್ಪ ಕೃಷಿಯಲ್ಲಿ 707.81 ಕೋಟಿ ರೂ.ರಫ್ತು ವಹಿವಾಟು ನಡೆದಿದೆ. ಈ ಪೈಕಿ ಹೆಚ್ಚು ಪಾಲು ಕರ್ನಾಟಕದ್ದೇ ಆಗಿದೆ. ಕೃಷಿಯಲ್ಲಿ ಬದಲಾವಣೆ ತರುವ ಹಾಗೂ ರೈತರ ಬದುಕು ಬದಲಿಸುವ ಸಾಮರ್ಥ್ಯ ಹೊಂದಿರುವ ಪುಷ್ಪ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಡಾ.ಕೆ.ಸುಧಾಕರ್‌ ಸಲಹೆ ನೀಡಿದ್ದಾರೆ. ಪುಷ್ಪ ಮಂಡಳಿ ಸ್ಥಾಪನೆಯಿಂದ ರಾಷ್ಟ್ರಾದ್ಯಂತ ಪುಷ್ಪ ಕೃಷಿಗೆ ಉತ್ತೇಜನ ದೊರೆತರೆ, ಕರ್ನಾಟಕ ಹಾಗೂ ಎಲ್ಲ ರಾಜ್ಯಗಳ ರೈತರಿಗೆ ಪ್ರಯೋಜನವಾಗುತ್ತದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next