Advertisement

Lokapur: ರಾಘವೇಂದ್ರ ಸ್ವಾಮಿ ಸತ್ಯ-ಧರ್ಮದ ಸಂರಕ್ಷಕ

02:43 PM Sep 04, 2023 | Team Udayavani |

ಲೋಕಾಪುರ: ರಾಘವೇಂದ್ರ ಸ್ವಾಮಿಗಳು ಸತ್ಯ, ಧರ್ಮದ ಸಂರಕ್ಷಕರಾಗಿದ್ದಾರೆ. ವಿಶ್ವದಲ್ಲಿ ಜಾತಿ, ಭಾಷೆ, ಅತೀತರಾದ
ಗುರುಗಳು ತಮ್ಮ ಯೋಗ ಶಕ್ತಿಯ ಮೂಲಕ ಭಕ್ತರ ಹೃದಯದಲ್ಲಿ ಆಸೀನರಾಗಿದ್ದಾರೆ ಎಂದು ಬಾಗಕೋಟೆಯ ಪಂ. ಬಿಂಧು
ಮಾಧವಾಚಾರ್ಯ ನಾಗಸಂಪಿಗಿ ಹೇಳಿದರು.

Advertisement

ಪಟ್ಟಣದ ರಾಘವೇಂದ್ರ ಸೇವಾ ಸಮಿತಿ, ಗುರುಸಾರ್ವಭೌಮ ಯುವಕ ಮಂಡಳ, ಗಾಯತ್ರಿ ಭಜನಾ ಮಂಡಳಿ ಆಶ್ರಯದಲ್ಲಿ
ನಡೆದ ಮೂರು ದಿನಗಳ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ನಿಮಿತ್ತ ನಡೆದ ಪ್ರವಚನದಲ್ಲಿ ಮಾತನಾಡಿದ ಅವರು, ರಾಘವೇಂದ್ರರೆಂಬ ಹೆಸರು ಮನುಕುಲದ ಮಹಾ ಉಸಿರು ಲೋಕದಲ್ಲಿ ಅನೇಕ ಗುರುಗಳಿದ್ದಾರೆ.

ಆದರೆ, ಗುರುರಾಯರಂಥ ಗುರುಗಳು ದೊರೆಯುವುದು ವಿರಳ. ಭಕ್ತರಲ್ಲಿನ ದುಗುಡ, ದುಮ್ಮಾನಗಳನ್ನು ನಿವಾರಿಸಿ ಸನ್ಮಾರ್ಗದಲ್ಲಿ ನಡೆಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಶಾಂತಿ, ಸೌಹಾರ್ದವನ್ನು ಸಾರಿ ರಾಯರು ಭಕ್ತರ ಹೃದಯದಲ್ಲಿ ಶಾಶ್ವತ ಸ್ಥಾನ
ಪಡೆದಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಹಾಗೂ ವಿಪ್ರ ಸಮಾಜದ ಮುಖಂಡ ಗುರುರಾಜ ಜೋಶಿ ಮಾತನಾಡಿ, ಗುರು
ಸಾರ್ವಭೌಮರೆಂದೂ, ಕಲಿಯುಗದ ಕಲ್ಪತರು ಕಾಮಧೇನುಗಳೆಂದೂ ಆಸ್ತಿಕ ಭಕ್ತರದಲ್ಲಿ ಮನೆ ಮಾತಾಗಿರುವ ಶ್ರೀ ರಾಘವೆಂದ್ರ ಸ್ವಾಮಿಗಳ ಬಗ್ಗೆ ನೂರಾರು ಗ್ರಂಥಗಳಿವೆ ಎಂದರು. ಮಠದಲ್ಲಿ ಉತ್ತರಾಧನೆ ಮತ್ತು ರಥೋತ್ಸವ ಅಂಗವಾಗಿ ಮಠದಲ್ಲಿ ನೂರಾರು ಭಕ್ತರು ಸೇರಿಕೊಂಡು ಮಠದ ತೇರನ್ನು ಶೃಂಗಾರ ಮಾಡಿ ಅದನ್ನು ಭಕ್ತಿಯಿಂದ ಎಳೆದು ಕೃತಾರ್ಥರಾದರು.

ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು. ಶ್ರೀವಿಷ್ಣು ಸಹ್ರಸನಾಮ ವೆಂಕಟೇಶ ಸ್ತೋತ್ರ ಹಾಗೂ ರಾಘವೇಂದ್ರ ಅಷ್ಟೋತ್ತರ ನಡೆಯಿತು. ನಂತರ ಮಹಾಮಂಗಳಾರತಿ ನೈವೇದ್ಯ ಅನ್ನ ಸಂತರ್ಪಣೆ ನಡೆಯಿತು. ವಿವಿಧ ಸಂಗೀತ, ದಾಸರ ಪದಗಳ ಮೂಲಕ ಹಾಡುತ್ತ ಕುಣಿಯುತ್ತ ವೃಂದಾವನ ಸುತ್ತು ಹಾಕಿ ಮಂಗಳರಾತಿ ಪುಷ್ಪಾರ್ಪಣೆ
ಮಾಡುವ ಮೂಲಕ ರಾಯರ ಆರಾಧನೆ ಸಂಪನ್ನಗೊಂಡಿತು. ಆರಾಧನಾ ಮಹೋತ್ಸವಕ್ಕೆ ವಿವಿಧ ಸೇವೆಗಳನ್ನು ಗೈದ
ಮಹನೀಯರಿಗೆ ಸನ್ಮಾನಿಸಲಾಯಿತು.

ವಿಪ್ರ ಸಮಾಜದ ಅಧ್ಯಕ್ಷ ವ್ಹಿ.ಎನ್‌. ಕುಲಕರ್ಣಿ, ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಮುಖಂಡರಾದ ಬಿ.ಎಲ್‌.
ಬಬಲಾದಿ, ಆರ್‌.ಎಸ್‌.ಜೋಶಿ, ಬಿ.ಡಿ.ಚಿನಗುಂಡಿ, ಶ್ರೀನಿವಾಸ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ಭೀಮಣ್ಣ ಜೋಶಿ,
ಲಕ್ಷ್ಮೀಕಾಂತ ದೇಶಪಾಂಡೆ, ರಮೇಶ ಕುಲಕರ್ಣಿ, ಗೋಪಾಲಕೃಷ್ಣ ದೇಶಪಾಂಡೆ, ಸಂತೋಷ ದೇಶಪಾಂಡೆ, ಅರ್ಚಕ
ಆನಂದಚಾರ್ಯ ಜಂಬಗಿ, ಪವನ ಸೋಮಾಪುರ ರಾಹುಲ್‌ ಗೂಡುರ, ಗೋವಿಂದ ಕುಲಕರ್ಣಿ, ವಿಜಯ ದೇಶಪಾಂಡೆ, ಅಣ್ಣಾರಾವ ದೇಶಪಾಂಡೆ, ನಾಗರಾಜ ಕುಲಕರ್ಣಿ, ರಂಗನಾಥ ಮುರಗೋಡ, ಸಂತೋಷ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ, ರಾಘವೇಂದ್ರ ಸೇವಾ ಸಮಿತಿ, ಗುರುಸಾರ್ವಭೌಮ ಯುವಕ ಮಂಡಳ, ಗಾಯತ್ರಿ ಭಜನಾ ಮಂಡಳಿ ಸರ್ವಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next