Advertisement

ಡಿಸೆಂಬರ್‌ನಲ್ಲೇ ಲೋಕ ಚುನಾವಣೆ?

06:00 AM Aug 16, 2018 | Team Udayavani |

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಯನ್ನು ಒಟ್ಟಿಗೆ ನಡೆಸುವುದಕ್ಕೆ ಸಂಬಂಧಿಸಿದ ಚರ್ಚೆ ತೀವ್ರಗೊಂಡಿರುವಾಗಲೇ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಜತೆಗೇ ನಡೆಸಬಹುದು ಎಂದಿದ್ದಾರೆ  ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌. ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆ ಅವಧಿ ಡಿಸೆಂಬರ್‌-ಜನವರಿಯಲ್ಲಿ, ಲೋಕಸಭೆ ಅವಧಿಯು 2019ರ ಮೇಯಲ್ಲಿ ಮುಕ್ತಾಯವಾಗಲಿದೆ. ಲೋಕಸಭೆ ಚುನಾವಣೆಯನ್ನು ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಸಲು ನಿರ್ಧರಿಸಿದರೆ, ಈ ನಾಲ್ಕು ರಾಜ್ಯಗಳ ಚುನಾವಣೆಯೊಂದಿಗೇ ಮಾಡಬಹುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್‌, ಖಂಡಿತವಾಗಿಯೂ ಮಾಡಬಹುದು. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ. ಈ ಸಂಬಂಧ ರೂಪುರೇಷೆಯನ್ನು ಕಾನೂನು ಸಮಿತಿ ಶೀಘ್ರ ಮಂಡಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next