Advertisement

ಲೋಕಸಭಾ ಚುನಾವಣ ಕಾವು ಮರೆಯಾಯಿತೇ ಬೋಟ್‌ ಪ್ರಕರಣ?

01:00 AM Mar 21, 2019 | Team Udayavani |

ಮಲ್ಪೆ: ಲೋಕಸಭಾ ಚುನಾವಣೆಯ ಕಾವು ಏರತೊಡ ಗಿದ್ದು, ಸೀಟಿಗಾಗಿ ಕಾದಾಟ, ಮೇಲಾಟ ನಡೆಯುತ್ತಿದೆ. ಈ ಮಧ್ಯೆ ಮೂರು ತಿಂಗಳ ಹಿಂದೆ ನಡೆದ 7 ಮಂದಿ ಮೀನುಗಾರರು ನಾಪತ್ತೆ ಪ್ರಕರಣ ಆಡಳಿತ ವರ್ಗ ಮತ್ತು ಜನಮಾನಸದಿಂದ ಮೆಲ್ಲನೆ ಮರೆಯಾಗುತ್ತಿದೆ.

Advertisement

ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಏಳು ಮಂದಿ ಮೀನುಗಾರರ ಮನೆಗಳಲ್ಲಿ ಮಾತ್ರ ಮೌನ ಆವರಿಸಿದೆ.

ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮನೆಯವರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.

ಡಿ. 13ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಮತ್ತು ಅದರಲ್ಲಿ 7 ಮಂದಿ ಮೀನುಗಾರರು ನಾಪತ್ತೆ ಯಾಗಿ ಇಂದಿಗೆ 95 ದಿನಗಳು ಕಳೆದಿವೆ. ಕಣ್ಮರೆಯಾದ ಸಮಯದಲ್ಲಿ ಜನಪ್ರತಿನಿಧಿಗಳು ಸಾಲು ಸಾಲಾಗಿ ಮನೆಗಳಿಗೆ ಭೇಟಿ ನೀಡುವ, ಸಾಂತ್ವನ ಹೇಳುವ ಕಾರ್ಯ ನಡೆಸು ತ್ತಿದ್ದರು. ಆದರೆ ಈಗ ಎಲ್ಲವೂ  ಸ್ಥಗಿತವಾಗಿದೆ. 
ಊಹಾಪೋಹದಿಂದ ಗೊಂದಲ
ಒಂದು ಸಲ ಅಪಹರಿಸಲಾಗಿದೆ, ಮತ್ತೂಂದು ಸಲ ಯುದ್ಧ ನೌಕೆ ಢಿಕ್ಕಿ ಹೊಡೆದಿದೆ ಎನ್ನಲಾಯಿತು. ಅನಂತರ ನಾಪತ್ತೆಯಾದವರ ಮೊಬೈಲಿಗೆ ಕರೆ ಹೋಯಿತು; ಇಬ್ಬರ ಪೋನ್‌ ರಿಂಗಣಿಸಿತು ಎನ್ನುವುದಾಗಿ ಸುದ್ದಿಯಾಯಿತು. ಮತ್ತೂಮ್ಮೆ ಸಮುದ್ರದಡಿಯಲ್ಲಿ ಬೋಟ್‌ ಮಾದರಿಯ ವಸ್ತು ಪತ್ತೆಯಾಗಿದೆ ಎಂದೂ ಕೆಲವು ದಿನಗಳ ಬಳಿಕ ಅದು ಕಲ್ಲು ಎಂದೂ ಹೇಳಲಾಯಿತು. ಶ್ರೀಲಂಕದಲ್ಲಿ ಇದ್ದಾರೆ, ದುಬಾೖಯಲ್ಲಿ ಇರುವ ಸಾಧ್ಯತೆ ಇದೆ ಎಂಬೆಲ್ಲ ಊಹಾಪೋಹಗಳು ನಮಗೆ ಗೊಂದಲಕ್ಕೆ ಕಾರಣವಾಗಿತ್ತು ಎಂದು ಮೀನುಗಾರರ ಮನೆಯವರು ತಿಳಿಸುತ್ತಾರೆ.
ಚುನಾವಣೆಯೊಳಗೆ ಸುಳಿವು ನೀಡಿ
ಚುನಾವಣೆ ದಿನಾಂಕದ ಒಳಗೆ ನಮ್ಮವರ ಸುಳಿವು ಸಿಗುವಂತೆ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಮುಂದೆ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೂ ಮನವಿ ನೀಡಿ ಆಗ್ರಹಿಸುತ್ತೇವೆ ಎಂದು ನಾಪತ್ತೆಯಾದ ಮೀನುಗಾರ ಕುಮಟಾದ ಲಕ್ಷ್ಮಣ ಅವರ ಸಹೋದರ ಗೊವಿಂದ ಹರಿಕಂತ್ರ ತಿಳಿಸಿದ್ದಾರೆ.

ನಾಪತ್ತೆಯಾದ ನಮ್ಮ ಉ.ಕ.ದ ಮೀನುಗಾರರ ಮನೆಯಲ್ಲಿ ಎಲ್ಲರೂ ಕಷ್ಟದಲ್ಲಿದ್ದಾರೆ. ಎರಡು ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ. ಜನಪ್ರತಿನಿಧಿಗಳೆಲ್ಲರು ಬಡಪಾಯಿ ಮೀನುಗಾರರನ್ನು ಮರೆತಿದ್ದಾರೆ. ಚುನಾವಣಾ ಬಹಿಷ್ಕಾರದ ಚಿಂತನೆ ನಡೆಸಿದ್ದೇವೆ. ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ನೀಡಲಿದ್ದು, ಸೂಕ್ತ ಸ್ಪಂದನೆ ಸಿಗದಿದ್ದರೆ ಧರಣಿ ಕೂರುವುದೆಂದು ನಿರ್ಧರಿಸಿದ್ದೇವೆ.
– ಗಣಪತಿ ಮಾಂಗ್ರೆ ಕಾರವಾರ, 
ಮೀನುಗಾರ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next