Advertisement

Live Updates::ಲೋಕಸಮರ: ಮೂರನೇ ಹಂತದಲ್ಲಿ ದೇಶಾದ್ಯಂತ 51.41% ಮತದಾನ

08:35 AM Apr 24, 2019 | Team Udayavani |

ಉತ್ತರ ಕರ್ನಾಟಕ: ಪ್ರಜಾಪ್ರಭುತ್ವದ ಅತೀ ದೊಡ್ಡ 2ನೇ ಹಂತದ ಮತ ಸಂಭ್ರಮ ಉತ್ತರಾರ್ಧದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಕರ್ನಾಟಕ ಸೇರಿದಂತೆ ದೇಶದ 157 ಲೋಕಸಭಾ ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿದೆ. ಕೆಲವು ಕಡೆ ಇವಿಎಂಗಳಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಸ್ಥಗಿತಗೊಂಡಿದೆ.

ಮಧ್ಯಾಹ್ನ 04 ಗಂಟೆಯವರೆಗಿನ ಲೆಕ್ಕಾಚಾರದಂತೆ ದೇಶಾದ್ಯಂತ 51.41%
ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ 68.25% ಮತದಾನವಾಗಿದ್ದರೆ ಅಸ್ಸಾಂನಲ್ಲಿ 62.13% ಮತದಾನವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅತೀ ಕಡಿಮೆ ಅಂದರೆ 11.22% ಮತದಾನವಾಗಿದೆ. ಇನ್ನುಳಿದಂತೆ ಉತ್ತರಪ್ರದೇಶದಲ್ಲಿ 47.41%, ಮಹಾರಾಷ್ಟ್ರದಲ್ಲಿ 44.63%, ದಾದ್ರಾ ಮತ್ತು ನಗರ ಹವೇಲಿಗಳಲ್ಲಿ 56.81%, ಛತ್ತೀಸ್‌ ಗಢದಲ್ಲಿ 55.29%, ಗುಜರಾತ್‌ ನಲ್ಲಿ 50.34%, ಕರ್ನಾಟಕದಲ್ಲಿ 50.03% ಮತದಾನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನು ಬಿಹಾರದಲ್ಲಿ 46.94%, ಗೋವಾದಲ್ಲಿ 58.92%, ಕೇರಳದಲ್ಲಿ 55.95%, ಒಡಿಸ್ಸಾದಲ್ಲಿ 46.44%, ತ್ರಿಪುರಾದಲ್ಲಿ 66.25% ಹಾಗೂ ದಾಮನ್‌ ಮತ್ತು ದಿಯೂನಲ್ಲಿ 55.02% ಮತದಾನವಾಗಿದೆ.

Advertisement

ಮಧ್ಯಾಹ್ನ 03 ಗಂಟೆಯವರೆಗಿನ ವರದಿಗಳ ಪ್ರಕಾರ ಶಿವಮೊಗ್ಗದಲ್ಲಿ 54.88% ಮತದಾನವಾಗಿದೆ. ಇನ್ನುಳಿದಂತೆ, ಬಳ್ಳಾರಿಯಲ್ಲಿ 51.86%, ಉತ್ತರ ಕನ್ನಡದಲ್ಲಿ 53.48%, ಚಿಕ್ಕೋಡಿ 53.50%, ಧಾರವಾಡದಲ್ಲಿ 51.59% ಮತದಾನವಾಗಿದೆ. ಹಾವೇರಿಯಲ್ಲಿ 50.24% ಹಾಗೂ ಗುಲ್ಬರ್ಗಾದಲ್ಲಿ 42.01% ಮತದಾನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನುಳಿದಂತೆ ಬೆಳಗಾವಿ 48.66%, ಬಾಗಲಕೋಟೆ 52.09%, ಬಿಜಾಪುರ 43.83%, ರಾಯಚೂರು 44.86%, ಬೀದರ್‌ 47.07%, ಕೊಪ್ಪಳ 52.17%, ದಾವಣಗೆರೆ 53.90% ಮತದಾನವಾಗಿದೆ.

ರಾಜ್ಯ ಹಾಗೂ ದೇಶದ ಮತದಾನ ಪ್ರಕ್ರಿಯೆಯ ಹೈಲೈಟ್ಸ್ ನ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…

Advertisement

Udayavani is now on Telegram. Click here to join our channel and stay updated with the latest news.

Next