Advertisement

ಬೆಲೆ ಏರಿಕೆ: ಲೋಕಸಭೆಯಲ್ಲಿ ಸೋಮವಾರ ಗಂಭೀರ ಚರ್ಚೆ ಸಾಧ್ಯತೆ

09:56 PM Jul 29, 2022 | Team Udayavani |

ನವದೆಹಲಿ: ಎರಡು ವಾರಗಳ ಕಾಲ ಸದನದ ಕಲಾಪವನ್ನು ಬಹುತೇಕ ಗದ್ದಲದಲ್ಲೇ ಕಳೆದ ನಂತರ, ಲೋಕಸಭೆಯಲ್ಲಿ ಸೋಮವಾರ ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ, ನಂತರ ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

Advertisement

ಜುಲೈ 18 ರಂದು ಅಧಿವೇಶನದ ಆರಂಭದಿಂದಲೂ, ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬೆಲೆ ಏರಿಕೆ ಮತ್ತು ಜಿಎಸ್‌ಟಿ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದವು, ಇದು ಕಲಾಪದ ಸಮಯ ಬಹುತೇಕ ಗದ್ದಲದಲ್ಲೇ ಕಳೆಯಲು ಕಾರಣವಾಯಿತು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿಯವರ “ರಾಷ್ಟ್ರಪತ್ನಿ” ಹೇಳಿಕೆ ಮತ್ತು ನಂತರದ ಲೋಕಸಭೆಯ ಸಭಾಂಗಣದಲ್ಲಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವಿನ ಮುಖಾಮುಖಿಯಿಂದಾಗಿ ಕಳೆದ ಎರಡು ದಿನಗಳ ಸದನದ ಕಲಾಪಗಳು ಕಳೆದಿದ್ದವು. .

ಚೌಧುರಿ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಅವರ “ರಾಷ್ಟ್ರಪತ್ನಿ” ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.

ಇರಾನಿ ಮತ್ತು ಬಿಜೆಪಿ ಸಂಸದರು ಗಾಂಧಿಯವರನ್ನು ನಿಂದಿಸಿರುವ ಆರೋಪದ ಮೇಲೆ ಕಾಂಗ್ರೆಸ್ ಇರಾನಿಯವರ ಮೇಲೆ ಮುಗಿಬಿದ್ದಿದ್ದು, ಮತ್ತು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆಗಳನ್ನು ಆಯೋಜಿಸಿ, ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದೆ.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಸಂಸತ್ತಿಗೆ ಹಾಜರಾಗುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ವಾರ ಲೋಕಸಭೆಗೆ ತಿಳಿಸಿದ್ದರು. ಹೀಗಾಗಿ ಕೂಡಲೇ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿತ್ತು. ಸರ್ಕಾರ ಮತ್ತು ಪ್ರತಿಪಕ್ಷಗಳೆರಡೂ ಈ ವಿಷಯದ ಚರ್ಚೆಯಿಂದ ಓಡಿಹೋಗುತ್ತಿವೆ ಎಂದು ಪರಸ್ಪರ ಆರೋಪಿಸಿದ್ದಾರೆ.

ಆದರೆ ಸೋಮವಾರದಿಂದ ಸಾಮಾನ್ಯ ಸದನದ ಕಲಾಪಗಳು ಪುನರಾರಂಭಗೊಳ್ಳಲಿದ್ದು, ಮೊದಲು ಕೆಳಮನೆಯಲ್ಲಿ ಚರ್ಚೆ ನಡೆಯಲಿದ್ದು, ನಂತರ ಮೇಲ್ಮನೆಯಲ್ಲಿ ಚರ್ಚೆ ನಡೆಯಬಹುದು ಎಂದು ರಾಜಕೀಯ ಮೂಲಗಳು ಶುಕ್ರವಾರ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next