Advertisement

Lok Sabha Elections: ಇಂದೂ ನಡೆಯದು ಸಭೆ,ಕಾಂಗ್ರೆಸ್‌ ಪಟ್ಟಿ ವಿಳಂಬ

10:49 PM Mar 14, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ 7 ಕ್ಷೇತ್ರಗಳಿಗೆ ಮೊದಲ ಪಟ್ಟಿ ಬಿಡುಗಡೆ ಮಾಡಿ 8 ದಿನಗಳು ಕಳೆದರೂ ಬಾಕಿ ಉಳಿದಿರುವ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಗ್ರಹಣ ಹಿಡಿದಿದೆ. ಈ ಮಧ್ಯೆ ಶುಕ್ರವಾರ ನಡೆಯಬೇಕಿದ್ದ ಕೇಂದ್ರ ಚುನಾವಣ ಸಮಿತಿ ಸಭೆ ಸೋಮವಾರಕ್ಕೆ ಮುಂದೂಡಿಕೆ ಆಗಿದ್ದು, ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ.

Advertisement

ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆಯ ಸಮಾರೋಪ ಸಮಾರಂಭವು  ರವಿವಾರ ಮುಂಬಯಿಯಲ್ಲಿ ನಡೆಯಲಿರುವುದರಿಂದ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕ ನಾಯಕರು ಅಲ್ಲಿಗೆ ತೆರಳುತ್ತಿದ್ದಾರೆ. ಜತೆಗೆ ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್‌ ನಾಯಕರ ದಂಡು ಸೇರಲಿದೆ. ಹೀಗಾಗಿ  ಶುಕ್ರವಾರ ನಡೆಯಬೇಕಿದ್ದ ಸಿಇಸಿ ಸಭೆ ರದ್ದಾಗಿದೆ.

ಬಾಕಿ ಉಳಿದಿರುವ 21 ಕ್ಷೇತ್ರಗಳ ಪೈಕಿ ಕ್ಷೇತ್ರಗಳಲ್ಲಿ ಇಬ್ಬಿಬ್ಬರ ಹೆಸರು ಹಾಗೂ ಉಳಿದ ಕ್ಷೇತ್ರಗಳಿಗೆ ಈಗಾಗಲೇ ಒಂದೊಂದೇ ಹೆಸರು (ಸಿಂಗಲ್‌ ನೇಮ್‌) ಗಳನ್ನು ಕೇಂದ್ರ ಚುನಾವಣ ಸಮಿತಿಗೆ ಶಿಫಾರಸು ಮಾಡಲಾಗಿದೆ. ಸೋಮವಾರ ಸಮಿತಿಯು ಸಭೆ ಸೇರಿ ಈ ಸಂಭವನೀಯ ಪಟ್ಟಿಗೆ ಅಧಿಕೃತ ಮುದ್ರೆ ಹಾಕಲಿದೆ.

ಸಂಭವನೀಯ ಅಭ್ಯರ್ಥಿಗಳು:

ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ

Advertisement

ಬೆಂಗಳೂರು ಉತ್ತರ- ಪ್ರೊ| ರಾಜೀವ್‌ ಗೌಡ

ಬೆಂಗಳೂರು ಕೇಂದ್ರ- ಮನ್ಸೂರ್‌ ಅಲಿಖಾನ್‌

ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ

ಬಳ್ಳಾರಿ- ವೆಂಕಟೇಶ್‌ ಪ್ರಸಾದ್‌

ಕೋಲಾರ- ಕೆ.ಎಚ್‌.ಮುನಿಯಪ್ಪ/ ಡಾ| ಎಲ್‌.ಹನುಮಂತಯ್ಯ

ಚಾಮರಾಜನಗರ-ದರ್ಶನ್‌ ಧ್ರುವನಾರಾಯಣ/ಸುನಿಲ್‌ ಬೋಸ್‌

ಮೈಸೂರು- ಎಂ.ಲಕ್ಷ್ಮಣ್‌

ಚಿಕ್ಕಮಗಳೂರು-ಉಡುಪಿ- ಜಯಪ್ರಕಾಶ್‌ ಹೆಗ್ಡೆ

ದಕ್ಷಿಣ ಕನ್ನಡ- ಪದ್ಮರಾಜ್‌

ಚಿತ್ರದುರ್ಗ- ಬಿ.ಎನ್‌.ಚಂದ್ರಪ್ಪ

ಬೆಳಗಾವಿ- ಮೃಣಾಲ್‌ ಹೆಬ್ಟಾಳ್ಕರ್‌

ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ

ಹುಬ್ಬಳ್ಳಿ ಧಾರವಾಡ- ವಿನೋದ್‌ ಅಸೂಟಿ

ಬಾಗಲಕೋಟೆ- ಸಂಯುಕ್ತ ಪಾಟೀಲ್‌

ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್‌

ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ

ಕೊಪ್ಪಳ- ರಾಜಶೇಖರ ಹಿಟ್ನಾಳ್‌/ ಅಮರೇಗೌಡ ಬಯ್ನಾಪುರ

ರಾಯಚೂರು -ಕುಮಾರ ನಾಯಕ್‌

ಬೀದರ್‌- ರಾಜಶೇಖರ ಪಾಟೀಲ್‌  ಹುಮ್ನಾಬಾದ್‌/ ಸಾಗರ್‌ ಬಿ. ಖಂಡ್ರೆ

 ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ

ಪಟ್ಟಿ ಬಿಡುಗಡೆಗೆ ಒತ್ತಡ ಹಾಕಿದ್ದೇವೆ:  ಸತೀಶ:

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಎಲ್ಲ ಕ್ಷೇತ್ರಗಳಿಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೇಗ ಅಂತಿಮಗೊಳಿಸಿ, ಪಟ್ಟಿ ಬಿಡುಗಡೆ ಮಾಡಲು ಒತ್ತಡ ಹಾಕಿದ್ದೇವೆ. ಅಭ್ಯರ್ಥಿ ಬೇಗ ಆಯ್ಕೆಯಾದರೆ ಚುನಾವಣೆ ಕಾರ್ಯಕ್ಕೆ ಸಹಕಾರವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕ್ಷೇತ್ರಗಳಿಗೆ ಇನ್ನೂ ಚರ್ಚೆ ಹಂತದಲ್ಲಿದ್ದು,  ಕೆಲವು ಅಂತಿಮವಾಗಿವೆ. ಇನ್ನೊಂದು ವಾರದಲ್ಲಿ ಅಂತಿಮ ಪಟ್ಟಿ ಘೋಷಣೆ ಆಗಲಿದೆ ಎಂದರು.  ಬೆಳಗಾವಿಗೆ ನನ್ನ ಪುತ್ರಿಗೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ  ಗೊತ್ತಿಲ್ಲ. ಯಾರಿಗೆ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಇಡೀ ರಾಜ್ಯದಲ್ಲೂ ಕೆಲಸ ಮಾಡಬೇಕಷ್ಟೇ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next