ಗ್ರಾಮ-ನಗರಗಳ ವ್ಯತ್ಯಾಸವಿಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆ ಸಂಬಂಧ ಕಳೆದ ಅನೇಕ ಕಾಲಗಳಿಂದ ನಡೆದುಬರುತ್ತಿರುವ ಬಿಸಿ ಚರ್ಚೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡ ಕೂಡಲೇ ಕೊನೆಬೀಳಲಿದೆ.
Advertisement
ಮತಗಣನೆ ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್ ವಿಧಾನಸಭೆ ಕ್ಷೇತ್ರಗಳ ತಲಾ 14 ಗಣನೆಯ ಮೇಜುಗಳು ಸಿದ್ಧವಾಗಿವೆ. ಉದುಮಾಕ್ಕೆ 10, ತ್ರಿಕರಿಪುರಕ್ಕೆ 13, ಪಯ್ಯನ್ನೂರು, ಕಲ್ಯಾಶೇರಿಗೆಗಳಿಗೆ ತಲಾ 12 ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರತಿ ಎಣಿಕೆ ಮೇಜಿನಲ್ಲೂ ಕೌಂಟಿಂಗ್ ಸೂಪರ್‌ವೈಸರ್‌ಗಳು, ಕೌಂಟಿಂಗ್ ಅಸಿಸ್ಟೆಂಟ್‌ಗಳು, ಮೈಕ್ರೋ ಅಬ್ಸರ್ವರ್‌ಗಳು ಇರುವರು. ಮೈಕ್ರೋ ಆಬ್ಸರ್ವರ್‌ಗಳ ನಿಗಾದಲ್ಲಿ ಕೌಂಟಿಂಗ್ ಸೂಪರ್‌ವೈಸರ್ ಮತ್ತು ಕೌಂಟಿಂಗ್ ಅಸಿಸ್ಟೆಂಟ್‌ಗಳು ಪ್ರತಿ ಮೇಜಿನಲ್ಲಿ ಮತಗಳ ಎಣಿಕೆ ನಡೆಸಲಿದ್ದಾರೆ. ಪ್ರತಿ ಗಣನೆಯ ಮೇಜಿನ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇರುವರು.
Related Articles
Advertisement
ಬೆಳಗ್ಗೆ 6 ಗಂಟೆಗೆ ಅಭ್ಯರ್ಥಿಗಳ ಏಜೆಂಟರು ಮತಎಣಿಕೆಯ ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿಗೆ ಹಾಜರಾಗ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಬಿಗಿ ಸುರûಾ ತಪಾಸಣೆಯ ಅನಂತರ ಇವರಿಗೆ ಕೇಂದ್ರದೊಳಗೆ ಪ್ರವೇಶಾತಿ ನೀಡಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಕೆ ಸಲ್ಲದು. ತರುವವರ ಮೊಬೈಲ್ ಫೋನ್ ಹಿಡಿದಿರಿಸಲಾಗುವುದು. ಆಹಾರ ಮತ್ತು ನೀರು ಹೊರಗಡೆಯಿಂದ ತರಬಾರದು.
ಮತ ಎಣಿಕೆ ಹೀಗಿರುವುದು ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆ ಒಂದು ಸುತ್ತಿನಲ್ಲಿ 89 ಮತಗಟ್ಟೆಗಳ ಮತಗಳ ಎಣಿಕೆ ನಡೆಯಲಿದೆ. ಒಟ್ಟು 15 ಸುತ್ತುಗಳಲ್ಲಿ ಮತ ಎಣಿಕೆ ಇರುವುದು. ಮಂಜೇಶ್ವರ, ಕಾಸರಗೋಡು, ಉದುಮಾ, ಕಾಂಞಂಗಾಡ್, ತ್ರಿಕರಿಪುರ, ಕಲ್ಯಾಶೇರಿ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳಿಗಾಗಿ ಪ್ರತ್ಯೇಕ ಮತ ಎಣಿಕೆ ಕೊಠಡಿಗಳಲ್ಲಿ ಎಣಿಕೆಗೆ ಮೇಜುಗಳು ಇರುವುವು. ಪ್ರತಿ ವಿಧಾನಸಭೆ ಕ್ಷೇತ್ರದ ಮತಗಣನೆಯ ಕೊಠಡಿಗಳಲ್ಲಿ ಸಹಾಯಕ ರಿಟರ್ನಿಂಗ್ ಆಫೀಸರ್ (ಎ.ಆರ್.ಒ.) ನೇತೃತ್ವದಲ್ಲಿ ಒಂದು ಟೇಬಲ್, ಜತೆಗೆ ನಿಗದಿತ ಗಣನೆಯ ಮೇಜೂ ಇರುವುದು. ಪ್ರತಿ ಕೌಂಟಿಂಗ್ ಟೇಬಲ್‌ನಲ್ಲಿ ಕೌಂಟಿಂಗ್ ಸೂಪರ್ ವೈಸರ್‌ಗಳು, ಕೌಂಟಿಂಗ್ ಅಸಿಸ್ಟೆಂಟ್, ಮೈಕ್ರೋ ಅಬ್ಸರ್ವರ್‌ಗಳು ಇರುವರು. ಎ.ರ್.ಒ. ನ ಟೇಬಲ್ ಸಹಿತ ಸಮೀಪ ಅಭ್ಯರ್ಥಿಗಳ ಏಜೆಂಟರಿಗೂ ಪ್ರತ್ಯೇಕ ಜಾಗ ಇರುವುದು. ಅಂಚೆ ಮತಗಳ ಮತ್ತು ವಿವಿಪ್ಯಾಟ್ ಮತಗಳ ಗಣನೆ ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ. ಹಿಂದೆ ಅಂಚೆ ಮತಗಳನ್ನು ಮೊದಲಿಗೆ ಎಣಿಕೆ ಮಾಡಲಾಗುತ್ತಿತ್ತು. ಈ ಮತಗಳನ್ನೂ ಪೂರ್ಣರೂಪದಲ್ಲಿ ಎಣಿಕೆ ನಡೆಸಿದ ಅನಂತರ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗುವುದು. ವಿವಿಪ್ಯಾಟ್ ಎಣಿಕೆ ರೀತಿ
ಕಳೆದ ಬಾರಿಯ ಲೋಕಸಭೆ ಚುನಾವಣೆಗಿಂತ ವಿಭಿನ್ನ ರೀತಿ ಈ ಬಾರಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ 5 ಬೂತ್‌ಗಳ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಗಣನೆ ಮಾಡಲಾಗುವುದು. 4 ರೀತಿ ವಿವಿಪ್ಯಾಟ್ ಸ್ಲಿಪ್‌ಗ್ಳ ಗಣನೆ ನಡೆಯಲಿದೆ:
– ಪ್ರತಿ ವಿಧಾನಸಭೆ ಕ್ಷೇತ್ರಗಳಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದ 5
ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್ ಗಳ ಗಣನೆ.
– ಇವಿಎಂ ನ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣದಿದ್ದರೂ ವಿವಿಪ್ಯಾಟ್‌ನ ಗಣನೆ
ನಡೆಸಲಾಗುವುದು.
– ಮತದಾನಕ್ಕೆ ಮೊದಲು ನಡೆಸಿದ ಮೋಕ್‌ಪೋಲ್ ರದ್ದುಗೊಳಿಸದೇ ಇರುವ
ಇವಿಎಂ ನ ವಿವಿಪ್ಯಾಟ್ ಸ್ಲಿಪ್ ಗಣನೆ ಮಾಡಲಾಗುವುದು.
– ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಇವಿಎಂ ಕ್ಲೋಸ್ ಬಟನ್ ಬಳಸದೇ
ಸೀಲ್ ನಡೆಸಿದ ಇವಿಎಂಗಳ ವಿವಿಪ್ಯಾಟ್ ಸ್ಲಿಪ್ ಗಣನೆ ಮಾಡಲಾಗುವುದು.