Advertisement

Lok Sabha Election Results ಕಡಿಮೆ ಸೀಟು: ರಾಹುಲ್‌ ಗಾಂಧಿ ಸಿಟ್ಟು

11:09 PM Jun 07, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರು ರಾಜ್ಯದಲ್ಲಿ ಕಾಂಗ್ರೆಸ್‌ ಗಳಿಸಿದ ಸಾಮಾನ್ಯ ಫ‌ಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ್ದಾರೆ.

Advertisement

ಕರ್ನಾಟಕದಲ್ಲಿ ನಾವು ಈ ರೀತಿಯ ಫ‌ಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಇದು ನಮಗೆ ತುಂಬ ನಿರಾಸೆ ಉಂಟುಮಾಡಿದೆ. ಚುನಾವಣೆಗೆ ಮುನ್ನ ನೀವು ಕಟ್ಟಿಕೊಟ್ಟ ಚಿತ್ರಣವೇ ಬೇರೆ ಆಗಿತ್ತು. ಅದರಂತೆಯೇ ಲೆಕ್ಕ ಹಾಕಿದರೂ ಕನಿಷ್ಠ 17ರಿಂದ 18 ಸ್ಥಾನಗಳನ್ನು ಗೆದ್ದು ತರಬಹುದು ಅಂದುಕೊಂಡಿದ್ದೆವು. ಆದರೆ ಚುನಾವಣೆ ಅನಂತರ ಚಿತ್ರಣ ಸಂಪೂರ್ಣ ತಿರುವುಮುರುವು ಆಗಿದೆ. ಹೊಣೆಗಾರಿಕೆ ಇರಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾದ ಬಳಿಕ ರಾಹುಲ್‌ ಅವರು ಚುನಾವಣೆಯಲ್ಲಿ ರಾಜ್ಯದ ಪ್ರದರ್ಶನದ ಬಗ್ಗೆ ಸೋತ ಮತ್ತು ಗೆದ್ದ ಅಭ್ಯರ್ಥಿಗಳು, ಸಚಿವ ರೊಂದಿಗೆ ಪರಾಮರ್ಶೆ ನಡೆಸಿದರು.

ರಾಜ್ಯದ ಗ್ಯಾರಂಟಿಗಳು ದೇಶಕ್ಕೆ ಮಾದರಿ ಎಂದು ಬಿಂಬಿಸಿದ್ದೀರಿ. ನೀವೇ ಹೇಳಿ ದಂತೆ ಸಚಿವರ ಮಕ್ಕಳು, ಸಂಬಂಧಿಕರಿಗೆ ಟಿಕೆಟ್‌ ನೀಡಿದ್ದೇವೆ. ಇದೆಲ್ಲದರ ನಡುವೆ ಈ ರೀತಿಯ ಪ್ರದರ್ಶನ ನೀಡಲಾಗಿದೆ ಎಂದರು.

ವಿಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರ ಸಹಿತ ಹಲವು ಕಾರಣಗಳಿರಬಹುದು. ಆದರೂ ಇನ್ನಷ್ಟು ಸೀಟುಗಳನ್ನು ಗೆಲ್ಲುವ ಅವಕಾಶಗಳಿದ್ದವು ಎಂದು ಸೂಚ್ಯವಾಗಿ ರಾಜ್ಯ ನಾಯಕರ ಕಿವಿ ಹಿಂಡಿದರು ಎನ್ನಲಾಗಿದೆ.

Advertisement

ಸೋತ ಸಚಿವರಿಗೆ ರಾಹುಲ್‌ ಪಾಠ
ಸೋತ ಕ್ಷೇತ್ರಗಳ ಸಚಿವರನ್ನು ಭೇಟಿ ಮಾಡಿದ ರಾಹುಲ್‌, ರಾಜ್ಯದಲ್ಲಿ ಇನ್ನೂ 5-6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಎಲ್ಲರಿಗೂ ಹೊಣೆಗಾರಿಕೆ ಇರಬೇಕು. ಹಿನ್ನಡೆಯಾದಲ್ಲಿ ಸರಿಪಡಿಸಿಕೊಳ್ಳಬೇಕು ಎಂದರು. ಜತೆಗೆ ಎಲ್ಲ ನಾಯಕರೊಂದಿಗೆ ಚರ್ಚಿಸಿ, ಕಾರ್ಯಸೂಚಿ ಸಿದ್ಧಪಡಿಸಿ ಸಲ್ಲಿಸುವಂತೆ ಸಿಎಂ-ಡಿಸಿಎಂಗೆ ನಿರ್ದೇಶನ ನೀಡಿದರು ಎನ್ನಲಾಗಿದೆ.

ಸಂಸತ್ತಿನಲ್ಲಿ ನಿಮ್ಮ ಕ್ಷೇತ್ರಗಳ ಸಹಿತ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಬೇಕು. ಭವಿಷ್ಯದ ದೃಷ್ಟಿಯಿಂದ ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಪಕ್ಷದ ಚೌಕಟ್ಟಿನಲ್ಲಿ ಹೇಳಿಕೆಗಳನ್ನು ನೀಡಬೇಕು. ನಿಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೇಳಿಕೆಗಳನ್ನು ನೀಡಬಾರದು. ಉತ್ತಮವಾಗಿ ಕಾರ್ಯನಿರ್ವ ಹಿಸುವ ಮೂಲಕ ಜನಮನ್ನಣೆ ಪಡೆಯಬೇಕು.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next