Advertisement

Lok Sabha Result 2024: ಬೆಂ. ಗ್ರಾಮಾಂತರ, ಮಂಡ್ಯದಲ್ಲಿ BJPಗೆ ಮುನ್ನಡೆ, ಕೈ ಗೆ ಹಿನ್ನಡೆ

09:13 AM Jun 04, 2024 | Team Udayavani |

ಶಿವಮೊಗ್ಗ/ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಮತಎಣಿಕೆ ಮಂಗಳವಾರ(ಜೂನ್‌ 04) ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಪ್ರಾಥಮಿಕ ಹಂತದ ಫಲಿತಾಂಶದ ಪ್ರಕಾರ ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಮುನ್ನಡೆ ಸಾಧಿಸಿದ್ದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಎಸ್‌ ಈಶ್ವರಪ್ಪ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

Advertisement

ಇದನ್ನೂ ಓದಿ:Counting; ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪೊಲೀಸರ ವಾಗ್ವಾದ

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಹಿನ್ನಡೆ ಅನುಭವಿಸಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್‌ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ನ ಎಂ.ಲಕ್ಷ್ಮಣ ಹಿನ್ನಡೆ ಅನುಭವಿಸಿದ್ದಾರೆ.

ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿಯಲ್ಲಿ ಬಿಜೆಪಿಯ ಡಾ.ಉಮೇಶ್‌ ಜಾಧವ್‌, ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ನ ಡಿಕೆ ಸುರೇಶ್‌ ಹಿನ್ನಡೆ ಕಂಡಿದ್ದಾರೆ.

ಉತ್ತರ ಕನ್ನಡದಲ್ಲಿ ಬಿಜೆಪಿಯ  ವಿಶ್ವೇಶ್ವರ ಹೆಗಡೆ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ಪಕ್ಷದ ಅಂಜಲಿ ನಿಂಬಾಳ್ಕರ್‌ ಹಿನ್ನಡೆ ಕಂಡಿದ್ದಾರೆ. ಕಾಗೇರಿ ಅವರು 19,000 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next