Advertisement

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

03:24 PM Mar 16, 2024 | Team Udayavani |

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ, ಈಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬಹುದು ಎಂಬುದು ಅತ್ಯಂತ ಕುತೂಹಲ ಮೂಡಿಸಿದೆ.

Advertisement

ಬಿಜೆಪಿ ಹೈಕಮಾಂಡ್‌ ಕ್ಷೇತ್ರದಲ್ಲಿದ್ದ ಒಂದು ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಲ್ಲಿ ಫಿಲ್ಟರ್‌ ಮಾಡಿ ಸ್ಥಳೀಯ ಅಭ್ಯರ್ಥಿ ಮಾಜಿ ಶಾಸಕ ಎಸ್‌.ಬಾಲರಾಜ್‌ ಅವರನ್ನು ಆಖೈರುಗೊಳಿಸಿದೆ. ಕೊನೆಯ ಕ್ಷಣದವರೆಗೂ ಬಾಲರಾಜ್‌ ಅವರೊಂದಿಗೆ ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಅಳಿಯ ಡಾ. ಎನ್‌. ಎಸ್‌‌ನ್‌ ಅವರ ಹೆಸರು ಚಾಲ್ತಿಯಲ್ಲಿತ್ತು. ಬಿ.ಎಸ್‌. ಯಡಿಯೂರಪ್ಪ ಅವರ ಜೊತೆ ಹಿಂದಿನಿಂದಲೂ ಗುರುತಿಸಿಕೊಂಡಿದ್ದ ಕಾರಣ ಬಾಲರಾಜ್‌ ಅವರನ್ನು ಆಯ್ಕೆಮಾಡಲಾಯಿತು.

ಮುಂಚೆಯೇ ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ: ಬಿಜೆಪಿಯೇನೋ ಸಾರಾ ಸಗಟಾಗಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಘೋಷಿಸಿತು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಘೋಷಣೆಯಾಗುವ ಮುಂಚೆಯೇ ಯಾವ ಪ್ರಮುಖ ಪಕ್ಷವೂ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿರಲಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶ್ರೀನಿವಾಸಪ್ರಸಾದ್‌ ಅವರ ಹೆಸರು ನಾಮಪತ್ರ ಸಲ್ಲಿಕೆಗೆ ಬೆರಳೆಣಿಕೆಯಷ್ಟು ದಿನವಿರುವಾಗ ಘೋಷಣೆಯಾಗಿತ್ತು. ಆದರೆ ಈ ಬಾರಿ ಬಹಳ ಮುಂಚೆಯೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.

ಆದರೆ ಇಷ್ಟು ಸಲೀಸಿನ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿಲ್ಲ. 8ಕ್ಕೆ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಶಾಸಕರನ್ನು ಹೊಂದಿರುವ ಕಾಂಗ್ರೆಸ್‌, ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಬಿಟ್ಟುಕೊಡಬಾರದೆಂಬ ಉದ್ದೇಶದಿಂದ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿಯ ಆಯ್ಕೆಗಾಗಿ ಕಸರತ್ತು ನಡೆಸಿದೆ.

ಮೂವರ ಹೆಸರು ದೆಹಲಿಗೆ: ಕೆಲವು ತಿಂಗಳ ಹಿಂದೆಯೇ ಕಾಂಗ್ರೆಸ್‌ನಲ್ಲಿ 8-9 ಆಕಾಂಕ್ಷಿಗಳು ತಮ್ಮ ಹೆಸರುಗಳನ್ನು ಆಯ್ಕೆ ಸಮಿತಿಗೆ ಸಲ್ಲಿಸಿದ್ದರು. ಈ 9 ಜನರಲ್ಲಿ ಮೂವರ ಹೆಸರನ್ನು ಕೆಪಿಸಿಸಿಯು ದೆಹಲಿಗೆ ರವಾನಿಸಿದೆ. ಈ ಮೂವರೆಂದರೆ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಅವರ ಪುತ್ರ ಸುನೀಲ್‌ ಬೋಸ್‌ ಮತ್ತು ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ.

Advertisement

ಆದರೆ ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ರಾಷ್ಟ್ರರಾಜಕಾರ ಣಕ್ಕೆ ಹೋಗುವುದು ಇಷ್ಟವಿಲ್ಲ. ತಮ್ಮ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಮಹದೇವಪ್ಪ ಅವರಿಗಿರುವ ನೇಮು, ಫೇಮು ಅವರ ಪುತ್ರನಿಗಿಲ್ಲ, ಹೀಗಾಗಿ ಅವರಿಗೆ ಟಿಕೆಟ್‌ ಕೊಟ್ಟರೆ ಕಷ್ಟವಾಗಬಹುದು ಎಂದು ಪಕ್ಷದೊಳಗೆ ಅಳುಕಿದೆ. ಹೀಗಾಗಿ ಮಾಜಿ ಸಂಸದ ಆರ್‌. ಧ್ರುವನಾರಾಯಣ ಪುತ್ರ ದರ್ಶನ್‌ ಅವರಿಗೆ ಟಿಕೆಟ್‌ ಕೊಟ್ಟರೆ ವಕೌìಟ್‌ ಆಗುತ್ತದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿದೆ. ಎರಡು ಬಾರಿ ಸಂಸದರಾಗಿ ತಮ್ಮ ಅಭಿವೃದ್ಧಿ ಕೆಲಸಗಳಿಂದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ವರ್ಚಸ್ಸು ಗಳಿಸಿದ್ದ ಧ್ರುವನಾರಾಯಣ ಅವರ ಪುತ್ರನಿಗೆ ಟಿಕೆಟ್‌ ನೀಡಿದರೆ, ಜನರು ತಂದೆಯ ಮೇಲಿನ ಅಭಿಮಾನದಿಂದ ಮಗನನ್ನು ಗೆಲ್ಲಿಸಬಹುದೆಂಬ ಲಾಜಿಕ್‌ ಕೆಲವು ಮುಖಂಡರಲ್ಲಿದೆ.

ಆದರೆ, ದರ್ಶನ್‌ ಧ್ರುವನಾರಾಯಣ ಅವರಿಗೆ ಲೋಕಸಭೆಗೆ ಸ್ಪರ್ಧಿಸುವುದು ಸುತರಾಂ ಇಷ್ಟವಿಲ್ಲ. ತಾನು ಮಾತ್ರ ಲೋಕಸಭೆಗೆ ಸ್ಪರ್ಧಿಸಲಾರೆ ಎಂದು ಹಲವು ಬಾರಿ ಪತ್ರಕರ್ತರಿಗೆ ಹೇಳಿದ್ದಾರೆ. ಪಕ್ಷದ ನಾಯಕರಿಗೂ ಇದನ್ನು ಒತ್ತಿ ಹೇಳಿದ್ದಾರೆ. ತಾನು

ರಾಜಕೀ ಯಕ್ಕೆ ಹೊಸಬ. ಈಗ ತಾನೇ ಗೆದ್ದು ಕ್ಷೇತ್ರ ಪರಿಚಯ ಮಾಡಿಕೊಳ್ಳು ತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಲೋಕಸಭೆಗೆ ಸ್ಪರ್ಧಿಸುವುದು ತನಗೆ ತುಂಬ ಕಷ್ಟವಾಗುತ್ತದೆ. ದಯಮಾಡಿ ನನ್ನನ್ನು ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇಷ್ಟರ ಮೇಲೂ ಹೈಕಮಾಂಡ್‌ ಸ್ಪರ್ಧಿಸಲು ಪಟ್ಟು ಹಿಡಿದರೆ ದರ್ಶನ್‌ ನಿಲುವೇನು? ಎಂಬುದು ಪ್ರಶ್ನೆ.

ಹೈಕಮಾಂಡ್‌ ಮುಂದೆ ಈಗ ಸುನೀಲ್‌ಬೋಸ್‌, ದರ್ಶನ್‌, ಜಿ.ಎನ್‌. ನಂಜುಂಡಸ್ವಾಮಿ ಆಯ್ಕೆಗಳಿವೆ. ಈ ಮೂವರಲ್ಲಿ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಎಂಬ ಕುತೂಹಲ ಇದೆ.

ಡಿಕೆಶಿ, ಸಿದ್ದು ಭೇಟಿಯಾದ ಪ್ರಸಾದ್‌ ಅಳಿಯ ಮೋಹನ್‌ :

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನಿರೀಕ್ಷಿಸಿದ್ದ ಡಾ. ಎನ್‌. ಎಸ್‌. ಮೋಹನ್‌ ಅವರು ಬಿಜೆಪಿ ಟಿಕೆಟ್‌ ದೊರಕದ ಕಾರಣ, ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ಮೈಸೂರು ಪ್ರದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರ ಅಂತಿಮ. ಹಾಗಾಗಿ ನೀವು ಅವರನ್ನೇ ಕೇಳಿ ಎಂದು ಡಿಕೆಶಿ ಹೇಳಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಶುಕ್ರವಾರ ಎನ್‌. ಎಸ್‌. ಮೋಹನ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮತ್ತು ಶಾಸಕ ಅನಿಲ್‌ ಚಿಕ್ಕಮಾದು ಅವರೊಡನೆ ಶುಕ್ರವಾರ ಮೈಸೂರಿನ ತಮ್ಮ ನಿವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾವ ಮಾತುಕತೆ ನಡೆಯಿತು ಎಂಬುದು ತಿಳಿದುಬಂದಿಲ್ಲ. ದಿಢೀರ್‌ ಬೆಳವಣಿಗೆಗಳು ನಡೆದರೆ ಮೋಹನ್‌ ಅವರಿಗೆ ಅವಕಾಶವಿದೆಯೇ? ಎಂಬ ಪ್ರಶ್ನೆಗಳು ಮೂಡಿವೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದಾದ್ದರಿಂದ ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

 -ಕೆ.ಎಸ್‌.ಬನಶಂಕರ ಆರಾಧ್ಯ

 

Advertisement

Udayavani is now on Telegram. Click here to join our channel and stay updated with the latest news.

Next