Advertisement

L.S. Election: ರವೀಂದ್ರನಾಯ್ಕ ಹೆಸರು ಕೈಬಿಟ್ಟ ಕಾಂಗ್ರೆಸ್… ಅರಣ್ಯವಾಸಿಗಳ ತೀವ್ರ ಆಕ್ರೋಶ

12:42 PM Mar 21, 2024 | Team Udayavani |

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರ ಹೆಸರನ್ನ ಸಂಭಾವ್ಯ ಪಟ್ಟಿಯಲ್ಲಿ ಕೈ ಬಿಟ್ಟಿರುವ ಕುರಿತು ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ತೀವ್ರ ನಿರಾಶೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯವಾಸಿಗಳ ಕುರಿತು ಕಳೆದ ಮೂರುವರೆ ದಶಕಗಳಿಂದ ನಿರಂತರ ಹೋರಾಟ ಮಾಡಿಕೊಂಡಿರುವ ಹಾಗೂ ಪಕ್ಷದ ಅನುಭವದ ಹಿನ್ನೆಲೆಯಲ್ಲಿ ಅವರು ಪಕ್ಷದ ಟಿಕೇಟಿಗೆ ಆಕಾಂಕ್ಷಿಗಳಾಗಿದ್ದರು. ಅಲ್ಲದೇ, ಜಿಲ್ಲಾದ್ಯಂತ ಅವರಿಗೆ ಟಿಕೇಟ್ ನೀಡಲು ಅರಣ್ಯವಾಸಿಗಳ ಒತ್ತಾಸೆಯು ಆಗಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು.

ನೆನೆಗುಂದಿಗೆ ಬಿದ್ದಿರುವ ಅರಣ್ಯವಾಸಿಗಳ ಸಮಸ್ಯೆಗೆ ಇಂದು ರವೀಂದ್ರ ನಾಯ್ಕ ಅನಿವಾರ್ಯವಾಗಿರುವುದರಿಂದ, ಕಾಂಗ್ರೇಸ್ ಪಕ್ಷ ರವೀಂದ್ರ ನಾಯ್ಕರನ್ನ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಮಾಡುವಲ್ಲಿ ಗಂಭೀರವಾಗಿ ಚಿಂತಿಸಬೇಕೆಂದು ತಿಳಿಸಿದೆ.

ಅರಣ್ಯವಾಸಿಗಳ ಧ್ವನಿ:
ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಸಂಪೂರ್ಣ ಕಾನೂನು ಜ್ಞಾನ, ತಿಳುವಳಿಕೆ ಮೂಲಕ ಜಿಲ್ಲೆಯ ಅರಣ್ಯವಾಸಿಗಳಿಗೆ ಬೆನ್ನೆಲುಬಾಗಿ, ನಿರಂತರ ಮೂರುವರೆ ದಶಕ ಕಾರ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅರಣ್ಯವಾಸಿಗಳ ಧ್ವನಿಯಾಗಿರುವ ರವೀಂದ್ರ ನಾಯ್ಕರಿಗೆ ಟಿಕೇಟ್ ನೀಡಬೇಕೆಂದು ಹೋರಾಟಗಾರರ ವೇದಿಕೆಯು ಆಗ್ರಹಿಸಿತು ಎಂದು ಹೋರಾಟಗಾರ ವೇದಿಕೆಯ ಸಂಚಾಲಕರಾದ ಸಿತಾರಾಮ ಗೌಡ, ಇಬ್ರಾಹಿಂ ಇಮಾಮ್ ಸಾಬ್ ಮತ್ತು ಭೀಮ್ಸಿ ವಾಲ್ಮೀಕಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Apology: ಸುಳ್ಳು ಜಾಹಿರಾತು… ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ ಪತಂಜಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next