Advertisement

Lok Sabha Election: ದೆಹಲಿಯ 4, ಹರ್ಯಾಣದ 1 ಕ್ಷೇತ್ರಕ್ಕೆ ಆಪ್‌ ಅಭ್ಯರ್ಥಿಗಳ ಘೋಷಣೆ

10:51 PM Feb 27, 2024 | Team Udayavani |

ನವದೆಹಲಿ: ದೆಹಲಿಯ 4 ಲೋಕಸಭಾ ಕ್ಷೇತ್ರಗಳು ಮತ್ತು ಹರ್ಯಾಣದ 1 ಕ್ಷೇತ್ರಕ್ಕೆ ಆಮ್‌ ಆದ್ಮಿ ಪಕ್ಷ ಮಂಗಳವಾರ ಅಭ್ಯರ್ಥಿಗಳನ್ನು ಘೋಷಿಸಿದೆ.

Advertisement

ಆಪ್‌ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್‌ ಅವರ ನೇತೃತ್ವದಲ್ಲಿ ನಡೆದ ಆಪ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯ ಬಳಿಕ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.

ಹಿರಿಯ ನಾಯಕ, ಮಾಳ ವೀಯ ನಗ ರದ ಶಾಸಕ ಸೋಮನಾಥ್‌ ಭಾರ್ತಿ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪೂರ್ವ ದೆಹಲಿಯಿಂದ ಕುಲದೀಪ್‌ ಕುಮಾರ್‌, ದಕ್ಷಿಣ ದೆಹಲಿಯಿಂದ ಸಾಯಿರಾಂ ಪೆಹಲ್ವಾನ್‌, ಪಶ್ಚಿಮ ದೆಹಲಿಯಿಂದ ಮಹಾಬಲ ಮಿಶ್ರಾ ಸ್ಪರ್ಧಿಸಲಿದ್ದಾರೆ. ಹರ್ಯಾಣದ ಕುರುಕ್ಷೇತ್ರದಿಂದ ರಾಜ್ಯಸಭೆ ಮಾಜಿ ಸದಸ್ಯ ಸುಶೀಲ್‌ ಗುಪ್ತಾ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next