Advertisement
2011 ರ ಅಸಲು ದಾವೆ ಪ್ರಕರಣದಲ್ಲಿ ಲೋಕ್ ಅದಾಲತ್‌ನಲ್ಲಿ ಭಾಗಿಯಾಗಲು ಆಟೋ ರಿಕ್ಷಾದಲ್ಲಿ ಬಂದಂತಹ 81 ವರ್ಷದ ವೃದ್ಧೆ ದೇವಕಿ ಶೆಡ್ತಿ ತಮ್ಮ ಮಗಳಾದ ಜಯಂತಿಯವರಿಗೆ ಜಿ.ಪಿ.ಎ. ನೀಡಿದ್ದರು. ಅವರು ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೇ ಆಟೋದಲ್ಲಿ ಕುಳಿತ್ತಿದ್ದರು. ಆ ಸಂದರ್ಭದಲ್ಲಿ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸಂಧಾನಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಉಭಯ ಕಕ್ಷಿದಾರರ ನ್ಯಾಯವಾದಿಗಳು ದೇವಕಿ ಶೆಡ್ತಿರವರ ಬಳಿ ಬಂದು ಜಿ.ಪಿ.ಎ. ನೀಡಿದ್ದರ ಬಗ್ಗೆ ಪರಿಶೀಲಿಸಿ ಅನಂತರ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿಯಲ್ಲಿದ್ದ ನಾಲ್ಕು ಜನ ಕಕ್ಷಿದಾರರ ಭಾಗಿಯಾದ ಅನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.
Related Articles
ಪ್ರಧಾನ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯದಲ್ಲಿ ಮೂರು ವರ್ಷಗಳ ಹಿಂದೆ ವೈಮನಸ್ಸಿನಿಂದ ದೂರವಾಗಿದ್ದ 4 ದಂಪತಿಗಳ ಸಮ್ಮಿಲನ ನಡೆಯಿತು.
ಕಾರ್ಕಳದ ನ್ಯಾಯಾಲಯದಲ್ಲಿ 98 ಜನ ಪ್ರತಿವಾದಿಗಳ ಹಾಗೂ ಇಬ್ಬರು ವಾದಿಗಳಿದ್ದ ಅಸಲು ದಾವೆಯಲ್ಲಿ ಉಭಯ ಕಕ್ಷಿದಾರರು ಪಾಲು ದಾವೆಯನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿ¨ªಾರೆ.
Advertisement
ಒಂದೇ ದಿನ 2 ವಾಜ್ಯ ಇತ್ಯರ್ಥಪಡಿಸಿಕೊಂಡ ಅತ್ತೆ, ಸೊಸೆ2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಹಾಗೂ 4ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದಿದ್ದ ಎರಡೂ ದಾವೆಗಳಲ್ಲಿ ಅತ್ತೆ ಮತ್ತು ಸೊಸೆ ಹಾಗೂ ಇತರರು ಭಾಗಿಯಾಗಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡಿದ್ದು ಈ ಅದಾಲತ್‌ನ ವಿಶೇಷವಾಗಿತ್ತು. ಅಣ್ಣ-ತಂಗಿ ಸಂಧಾನ
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ 2014 ರಲ್ಲಿ ಅಣ್ಣ ಮತ್ತು ತಂಗಿಯ ನಡುವೆ ದಾಖಲಾದ ಪಾಲು ವಿಭಾಗದ ದಾವೆ ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿದೆ. ಅದೇ ರೀತಿ 2004 ರಲ್ಲಿ ದಾಖಲಾದ ಅಸಲು ದಾವೆ ಪ್ರಕರಣ ಅಫಿಲು ಸಂಖ್ಯೆ 48/2018 ರಲ್ಲಿ ಉಭಯ ಕಕ್ಷಿದಾರರ ನಡುವೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ.
ಕುಂದಾಪುರದಲ್ಲಿ 31 ವರ್ಷಗಳ ಹಿಂದೆ ಶುರುವಾದ ವೈಮನಸ್ಸು ಈ ಬಾರಿಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಸಂಧಾನಕಾರರ ಮಧ್ಯಸ್ಥಿಕೆಯಿಂದ ಎಫ್.ಡಿ.ಪಿ. 11/2008 ರ ಹಳೆಯ ಪ್ರಕರಣದಲ್ಲಿ ಕಕ್ಷಿದಾರರ ನಡುವೆ ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿದೆ. ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಯಾಗಿ ನಡೆಯಿತು.