Advertisement

Holalkere: ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಒಗ್ಗೂಡಿಸಿದ ಲೋಕ ಅದಾಲತ್

01:17 PM Sep 09, 2023 | Team Udayavani |

ಹೊಳಲ್ಕೆರೆ: ನ್ಯಾಯಾಲಯದ ಲೋಕ ಅದಾಲತ್ ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿ ಜೀವನ ನಡೆಸಲು ಪ್ರೋತ್ಸಾಹಿಸಿದ ಘಟನೆ ತಾಲೂಕಿನಲ್ಲಿ ನಡೆಯಿತು.

Advertisement

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ಶರಣ್ ಹಾಗೂ ವಕೀಲರಾದ ಎನ್.ಹೆಚ್. ಶಾಂತವೀರಪ್ಪ ಮತ್ತು ಬಿ.ಎಸ್.ಪ್ರಭಾಕರ್ ದಂಪತಿಗಳಿಗೆ ಪ್ರೋತ್ಸಾಹಿಸಿದವರು.

ಹೊಳಲ್ಕೆರೆ ತಾಲೂಕಿನ ತಾಳಿಕಟ್ಟಿಯ ಬಸವರಾಜ್- ವಿಜಯ ದಂಪತಿಗಳು ಪಟ್ಟಣದ ಹಿರಿಯ ಸಿವಿನ್ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚ್ಛೇದನದ ಅರ್ಜಿಯನ್ನು ಸೆ.9ರ ಶನಿವಾರ ನಡೆದ ಲೋಕದಲತ್ ನಲ್ಲಿ ದಂಪತಿಗಳನ್ನು ಪರಸ್ಪರ ಪ್ರೀತಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂಬ ತಿಳುವಳಿಕೆ ನೀಡಿದ ಹಿನ್ನೆಲೆ ನ್ಯಾಯಾಧೀಶ ಶರವಣನ್ ನೇತೃತ್ವದಲ್ಲಿ ಹಾಗೂ ವಕೀಲರಾದ ಎನ್.ಎಸ್. ಶಾಂತವೀರಪ್ಪ ಮತ್ತು ಬಿ.ಎಸ್.ಪ್ರಭಾಕರ್ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಕೊಳ್ಳುವುದರ ಮೂಲಕ ಜೀವನವನ್ನು ನಡೆಸಲು ದಂಪತಿಗಳು ಮುಂದಾಗಿದ್ದಾರೆ.

ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳಾದ ಜಿ.ಈ. ಬಸವರಾಜಪ್ಪ ಹಾಗೂ ವಿಜಯಮ್ಮ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ವಾಸಿಗಳಾಗಿದ್ದು, ಸುಮಾರು 2017ರಲ್ಲಿ ಇವರು ವಿವಾಹ ನಡೆದಿತ್ತು.

Advertisement

ಬಸವರಾಜ್ ಹಾಗೂ ವಿಜಯಮ್ಮ ದಂಪತಿಗಳು 2021ರಲ್ಲಿ ನ್ಯಾಯಾಲಯಕ್ಕೆ ಬಂದಿದ್ದು, ಮೊದಲಿಗೆ ಬಸವರಾಜ್ ಹಾಗೂ ವಿಜಯಮ್ಮ ನಡುವೆ ಉಂಟಾದ ಸಮಸ್ಯೆಯಿಂದ ಹೆಂಡತಿ ವಿಜಯಮ್ಮ ಬಿಟ್ಟುಹೋಗಿದ್ದು, ವಿಜಯಮ್ಮ ಬೇಕು ಎನ್ನುವ ಅರ್ಜಿಯನ್ನು ಸಲ್ಲಿಸಿದ್ದರು. ನಂತರ ವಿಜಯಮ್ಮ ಜೀವನ ಅಂಶ ಕೋರಿ ನ್ಯಾಯಾಲಯಕ್ಕೆ 2021 ರಲ್ಲಿ ಅರ್ಜಿ ಸಲ್ಲಿಸಿದರು.

ತದನಂತರ ಬಸವರಾಜ್, ವಿಜಯಮ್ಮ ವಿರುದ್ಧ ವಿವಾಹ ವಿಚ್ಛೇದನಗೊಳಿಸುವಂತೆ ಕೋರಿ 2023ರಲ್ಲಿ ವಿವಾಹ ವಿಚ್ಛೇದನಕ್ಕೆ ವಿವಾಹ ಕಾಯ್ದೆ 1955 ಕಲಂ 13 ರನ್ವಯ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ನ್ಯಾಯಾಲಯದಲ್ಲಿ ಹಲವಾರು ಬಾರಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಮಧ್ಯಸ್ಥಿಕೆಯಿಂದಾಗಿ ದಂಪತಿ ಜೀವನ ಮುಂದುವರಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು ಶನಿವಾರದ ಲೋಕದಲತ್ ನಲ್ಲಿ ಪುನಃ ವಿವಾಹವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಹೊಸ ಜೀವನ ಆರಂಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ರಾಜಿ ಮಾಡಿಕೊಂಡಿದ್ದಾರೆ.

ಇದೆ ಸಮಯದಲ್ಲಿ ಇವರ ನಡುವೆ ಇದ್ದ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಿದ್ದು, ಮಧ್ಯಸ್ಥಿಕೆ ವಕೀಲರಾದ ಪ್ರೇಮಾ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್ ಸೇರಿದಂತೆ ಹಲವಾರು ವಕೀಲರ ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next