Advertisement

ರಬಕವಿ-ಬನಹಟ್ಟಿ : ಎರಡು ವರ್ಷಗಳಿಂದ ಬೇರೆಯಾಗಿದ್ದ ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ್

05:45 PM Jun 25, 2022 | Team Udayavani |

ರಬಕವಿ-ಬನಹಟ್ಟಿ: ಸ್ಥಳೀಯ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಎರಡು ವರ್ಷಗಳಿಂದ ಬೇರೆಯಾಗಿದ್ದ ದಂಪತಿಗಳು ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ ಘಟನೆ ನಡೆಯಿತು.

Advertisement

2017ರಲ್ಲಿ ಮದುವೆಯಾದ ದಂಪತಿಗಳು 2019 ರಲ್ಲಿ ಬೇರೆಯಾಗಿ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ದಾವೆ ಮಾಡಿದ್ದರು. ಆದರೆ ಶನಿವಾರ ನಡೆದ ಲೋಕ ಅದಾಲತನಲ್ಲಿ ನ್ಯಾಯಾಧೀಶರು, ವಕೀಲರ ಮತ್ತು ಹಿರಿಯರ ಸಮ್ಮುಖದಲ್ಲಿ ರಾಜಿಯಾಗಿ ಮತ್ತೆ ಒಂದಾದರು. ಅರ್ಜಿದಾರ ಪರ ಎ.ಎನ್. ಜಿಡ್ಡಿಮನಿ. ವಿ.ಬಿ.ಖೇಮನ್ನವರ ಮತ್ತು ಎದುರುದಾರ ಪರ ಹರ್ಷವರ್ಧನ ಪಟವರ್ಧನ ಮತ್ತು ಶಿವಕುಮಾರ ಷಣ್ಮುಖ ವಕಾಲತ್ತು ವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಮಾತನಾಡಿ, ಲೋಕ ಅದಾಲತನಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಂಡರೆ ಕಕ್ಷಿದಾರರಲ್ಲಿ ಉತ್ತಮ ಬಾಂಧವ್ಯ ಮೂಡುತ್ತದೆ. ಆದ್ದರಿಂದ ಲೋಕ ಅದಾಲತನಲ್ಲಿ ಹೆಚ್ಚು ಕಕ್ಷಿದಾರರು ನ್ಯಾಯಾಲಯದಲ್ಲಿರುವ ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ : ಠಾಕ್ರೆ ಗೂಂಡಾಗಿರಿ ಕೊನೆಗಾಣಬೇಕು : ಸಂಸದೆ ನವನೀತ್ ರಾಣಾ ಮನವಿ

ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ 69 ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 781 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು ಎಂದು ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ಮಾತನಾಡಿ, ಐದು ಹಳೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಲಾಗುವುದು. ಇನ್ನೂ ಅನೇಕ ಪ್ರಕರಣಗಳು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಎಂ.ಎನ್. ಕೋಪರ್ಡೆ, ಹಿರಿಯ ನ್ಯಾಯಾವಾದಿಗಳಾದ ಎಂ.ಜಿ.ಕೆರೂರ, ಅರವಿಂದ ವ್ಯಾಸ್, ಭೀಮಶಿ ಯಲ್ಲಟ್ಟಿ, ಜಿ.ಡಿ.ಪಾಟೀಲ ಸೇರಿದಂತೆ ಅನೇಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next