Advertisement

ಲೋಕಪಾಲ್‌ಗೆ ಲೋಗೋ 25,000 ರೂ. ಬಹುಮಾನ

11:57 PM May 28, 2019 | Team Udayavani |

ಹೊಸದಿಲ್ಲಿ: ನೂತನವಾಗಿ ರಚನೆಯಾಗಿ ರುವ ಲೋಕಪಾಲ್‌ ಸಂಸ್ಥೆ, ತನ್ನ ಧ್ಯೇಯಗಳನ್ನು ಸೂಚ್ಯವಾಗಿ ಹೇಳುವಂಥ ಸಾಲುಗಳನ್ನು, ತನಗೆ ಸೂಕ್ತವಾದ ಚಿಹ್ನೆ ನೀಡುವಂತೆ ಆಗ್ರಹಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆ ಆರಂಭಿಸಿದೆ. ದೇಶದ ನಾನಾ ಕಲಾವಿದರು ಇದರಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಜೂ. 13 ರೊಳಗೆ ತಮ್ಮ ಚಿಹ್ನೆಗಳನ್ನು ಸಲ್ಲಿಸಲು ಕಾಲಾವಕಾಶವಿದೆ.

Advertisement

ಒಬ್ಬರು ಮೂರು ವಿನ್ಯಾಸಗಳ ಚಿಹ್ನೆ ಮತ್ತು ಧ್ಯೇಯಗಳನ್ನು ಕಳಿಸಬಹುದು. ಅಂತಿಮವಾಗಿ, ಆಯ್ಕೆಯಾಗುವ ಚಿಹ್ನೆಗೆ 25,000 ರೂ. ನಗದು ಪುರಸ್ಕಾರ ನೀಡಲಾಗುತ್ತದೆ. ಚಿಹ್ನೆ ಮತ್ತು ಧ್ಯೇಯಗಳ ಸಾಲುಗಳನ್ನು ಹಿಂದಿ, ಸಂಸ್ಕೃತ ಅಥವಾ ಇಂಗ್ಲಿಷ್‌ನಲ್ಲಿ ರಚಿಸಲು ಅವಕಾಶವಿದೆ. ಮಂಗಳವಾರದ ಹೊತ್ತಿಗೆ, ಅದಾಗಲೇ 1,239 ಧ್ಯೇಯವಾಕ್ಯಗಳು ಹಾಗೂ 365 ಚಿಹ್ನೆಗಳು ಸಂಸ್ಥೆಗೆ ಸಲ್ಲಿಕೆಯಾಗಿವೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next