Advertisement

MP: ಬೆಂಗಳೂರಿನಿಂದಲೂ ಸಂಸದೆ ಮೊಯಿತ್ರಾ ಖಾತೆಗೆ ಲಾಗ್‌ಇನ್‌

09:52 PM Nov 24, 2023 | Pranav MS |

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಲೋಕಸಭೆಯ ವೆಬ್‌ಸೈಟ್‌ಗೆ ನೀಡಲಾಗಿದ್ದ ಲಾಗ್‌ಇನ್‌ ಐಡಿ, ಪಾಸ್‌ವರ್ಡ್‌ ಮೂಲಕ ಬೆಂಗಳೂರು, ಅಮೆರಿಕದ ನ್ಯೂಜೆರ್ಸಿ, ನವದೆಹಲಿಯಿಂದ ಮಾಹಿತಿ ವೀಕ್ಷಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಲೋಕಸಭೆಯ ಎಥಿಕ್ಸ್‌ ಕಮಿಟಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಶಿಫಾರಸು ಮಾಡಿರುವಂತೆಯೇ ಹೊಸ ಅಂಶ ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ, ಪ್ರಶ್ನೆಗಾಗಿ ಲಂಚ ಎನ್ನುವುದು ಬಲುದೊಡ್ಡ ಸಂಚು ಎಂದು ಆರೋಪಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿ ದರ್ಶನ್‌ ಹಿರಾನಂದಾನಿ ಅವರಿಗೆ ಮಾತ್ರವಲ್ಲ. ಬೆಂಗಳೂರು, ನವದೆಹಲಿ, ಸ್ಯಾನ್‌ಫ್ರಾನ್ಸಿಸ್ಕೋದಿಂದಲೂ ಏಕಕಾಲಕ್ಕೆ ಲೋಕಸಭೆಯ ವೆಬೆಸೈಟ್‌ನಲ್ಲಿರುವ ಸಂಸದೆ ಮಹುವಾ ಮೊಯಿತ್ರಾರ ಖಾತೆಗೆ ಲಾಗ್‌ಇನ್‌ ಮಾಡಲಾಗಿದೆ ಎಂದು ದುಬೆ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಅದಾನಿ ಗ್ರೂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ಪ್ರಶ್ನೆ ಕೇಳುವ ವಿಚಾರ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next