Advertisement

ಮಹಾರಾಷ್ಟ್ರ ವಲಸಿಗರ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ

02:07 PM Jun 16, 2020 | Suhan S |

ಚಡಚಣ: ಹೀಗೆ ಕೆಲಸವನ್ನರಿಸಿ ಮುಂಬೈಗೆ ಹೋಗಿದ್ದ ರೇವತಗಾಂವ ಗ್ರಾಮದ ವ್ಯಕ್ತಿ ತನ್ನ ಅಕ್ಕ, ಮಾವ, ಅಕ್ಕನ ಮಗಳ ಜೊತೆ ವಾಪಸ್‌ ಗ್ರಾಮಕ್ಕೆ ಬಂದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ ಇರಲು ತೆರಳಿದ್ದ. ಆದರೆ ಆತನ ಅಕ್ಕ, ಮಾವ, ಅಕ್ಕನ ಮಗಳು ಮಹಾರಾಷ್ಟ್ರ ಮೂಲದವರಾದ ಕಾರಣ ಅವರನ್ನು ನಮ್ಮೂರ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಬಾರದೆಂದು ಗ್ರಾಮಸ್ಥರು ಹಠ ಹಿಡಿದ ಪ್ರಸಂಗ ಸೋಮವಾರ ನಡೆದಿದೆ.

Advertisement

ಚಡಚಣ ಎಎಸೈ ಡಿ.ವೈ. ಇಂಗಳೆ ಹಾಗೂ ಪೊಲೀಸ್‌ ಸಿಬ್ಬಂದಿ ಎಸ್‌. ಎನ್‌. ವಾಲೀಕಾರ, ಎಲ್‌.ಎಸ್‌. ರಾಠೊಡ, ಸಿದ್ದನಗೌಡ ದೊಡ್ಡಮನಿ ಸ್ಥಳಕ್ಕಾಗಮಿಸಿ ವಲಸಿಗರ ಮನವೊಲಿಸಲು ಯತ್ನಿಸಿದರು. ಈಗಾಗಲೇ ಮಹಾರಾಷ್ಟ್ರೀಗರಿಂದಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರ ಬೆನ್ನಲ್ಲೇ ತಾಯ್ನಾಡಿಗೆ ವಾಪಸ್‌ ಬರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅವರ ಆರೋಗ್ಯ ಸುರಕ್ಷತೆ ಬಗ್ಗೆ ಕೋವಿಡ್ ವಾರಿಯರ್ಸ್‌ ಹಗಲಿರುಳು ಶ್ರಮಿಸುತ್ತಿದ್ದು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಾವು ತಮ್ಮೂರಲ್ಲಿಯೇ ಇರುವುದು ಉತ್ತಮ ಎಂದು ಮನವೊಲಿಸಿ ವಾಪಸ್‌ ಕಳುಹಿಸಿದರು.

ಈ ವೇಳೆ ಆಶಾ ಕಾರ್ಯಕರ್ತೆಯರಾದ ಮಂದಾಕಿನಿ ಕಂಠಿಗೊಂಡ, ಶೋಭಾ ಪೂಜಾರಿ, ಸುವರ್ಣ ಅಂಕಲಗಿ, ಗ್ರಾಮ ಸಹಾಯಕ ಅಮಸಿದ್ಧ ಬನ್ನೆ, ಗ್ರಾಪಂ ಸಿಬ್ಬಂದಿ ಲಾಯಪ್ಪ ಲೋಣಿ, ಸುರೇಶ ಹಕ್ಕೆ, ಗ್ರಾಪಂ ಸದಸ್ಯರಾದ ರಾಮಚಂದ್ರ ಹಕ್ಕೆ, ಅಡವೆಪ್ಪ ನಡಗೇರಿ, ಬಸವರಾಜ ಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next