Advertisement

ಲಾಕ್‌ ಡೌನ್, ವೀಕೆಂಡ್ ಕರ್ಫ್ಯೂ ಸಿಎಂ ತೀರ್ಮಾನವಲ್ಲ: ಸಚಿವ ಸೋಮಶೇಖರ್

11:42 AM Jan 20, 2022 | Team Udayavani |

ಮೈಸೂರು: ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ ಗಳು ಮುಖ್ಯಮಂತ್ರಿಗಳ ತೀರ್ಮಾನವಲ್ಲ. ತಜ್ಞರ ಸಲಹೆ ಮೇರೆಗೆ ಸಚಿವ ಸಂಪುಟದ ತೀರ್ಮಾನ ಮಾಡುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್‌ ಸಿಂಹ ಜನಾಭಿಪ್ರಾಯವನ್ನು ಹೇಳಿದ್ದಾರೆ. ಶುಕ್ರವಾರ ಸಿಎಂ ಮತ್ತೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಮೂರನೇ ಅಲೆ ಗಂಭೀರವಲ್ಲದಿದ್ದರೂ ಸ್ವಲ್ಪಮಟ್ಟಿಗೆ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಸಿಎಂಗೂ ಜನಾಭಿಪ್ರಾಯದ ಬಗ್ಗೆ ಮಾಹಿತಿಯಿದೆ ಎಂದರು.

ವಾರಕ್ಕೆ ಒಮ್ಮೆಯಾದರೂ ಕೆಲ ಕ್ರಮ ಕೈಗೊಳ್ಳುವುದು ಸೂಕ್ತವೆಂದು ತಜ್ಞರು ಹೇಳಿದ್ದಾರೆ. ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಸಂಬಂಧ ಇಂದು ಸಂಜೆ ಸಭೆ ಕರೆದಿದ್ದೇನೆ ಎಂದರು.

ಇದನ್ನೂ ಓದಿ:5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

ಫೆಬ್ರವರಿ ಮೊದಲ ವಾರದಿಂದ ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಲಿದೆ. ಫೆಬ್ರವರಿ ನಂತರದಲ್ಲಿ ಆ ಕೇಸ್‌ ಗಳು ಇಳಿಕೆಯಾಗುತ್ತವೆ. ಮೈಸೂರಿನಲ್ಲಿ ಪೊಲೀಸರು, ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರಲ್ಲೂ ಸೋಂಕು ಬಂದಿದೆ. ಸೋಂಕಿನ ಗುಣಲಕ್ಷಣ ಇರುವವರನ್ನು ಮಾತ್ರ ನಾವು ಟೆಸ್ಟ್ ಮಾಡುತ್ತಿದ್ದೇವೆ. ಬೇರೆ ಕಡೆಗಳಲ್ಲಿ ಎಲ್ಲಾ ಜನರನ್ನು ಟೆಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ನಮ್ಮಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಿದೆ. ಸಂಜೆ ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇನೆ. ಸಭೆಯಲ್ಲಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next