Advertisement

ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಮೇ.31ರವರೆಗೆ ಕಂಟಿನ್ಯೂ: ಹೊಸ ಮಾರ್ಗಸೂಚಿ ಶೀಘ್ರ ಪ್ರಕಟ

08:36 AM May 18, 2020 | Hari Prasad |

ನವದೆಹಲಿ: ಇಂದು ಮುಕ್ತಾಯಗೊಳ್ಳಬೇಕಿದ್ದ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಈ ತಿಂಗಳಿನ ಅಂತ್ಯದವರೆಗೆ ಮುಂದುವರೆಸಿ ಆದೇಶ ಹೊರಡಿಸಿದೆ.

Advertisement

ಈ ಮೂಲಕ ಲಾಕ್ ಡೌನ್ 4.0 ಸೋಮವಾರದಿಂದ ಜಾರಿಗೆ ಬರಲಿದೆ. ಮಾರ್ಚ್ 25ರಂದು ದೇಶದಲ್ಲಿ ಮೊದಲನೇ ಹಂತದ ಲಾಕ್ ಡೌನ್ ವಿಧಿಸಲಾಗಿತ್ತು.

ಮತ್ತು ದೇಶದ ವಿವಿಧ ಕಡೆಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಈ ಲಾಕ್ ಡೌನ್ ಅವಧಿಯಲ್ಲಿ ಇವುಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹಸಚಿವಾಲಯ ಸದ್ಯದಲ್ಲೇ ಪ್ರಕಟಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಲಾಕ್ ಡೌನ್ 4.0ಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯೊಂದು ಶನಿವಾರ ನಡೆದಿತ್ತು ಎಂದು ಉನ್ನತ ಮೂಲಗಳನ್ನು ಆಧರಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಈ ಬಾರಿಯ ಲಾಕ್ ಡೌನ್ ಹೊಸ ಸುಧಾರಿತ ನಿಯಮಗಳೊಂದಿಗೆ ತೀರಾ ಭಿನ್ನ ಸ್ವರೂಪದಲ್ಲಿರಲಿದೆ ಎಂಬ ಸೂಚನೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದ ಸಂದರ್ಭದಲ್ಲಿ ನೀಡಿದ್ದರು.

Advertisement

ಇದಕ್ಕೂ ಮೊದಲು, ಲಾಕ್ ಡೌನ್ ಸಂಬಂಧಿತ ಕ್ರಮಗಳ ಕುರಿತಾಗಿರುವಂತೆ ಶುಕ್ರವಾರದೊಳಗೆ ತಮ್ಮ ತಮ್ಮ ಪ್ರಸ್ತಾವನೆಗಳನ್ನು ಹಾಗೂ ವಿನಂತಿಗಳನ್ನು ಕೇಂದ್ರಕ್ಕೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಲಾಗಿತ್ತು.

ಸಚಿವ ಸಂಪುಟ ಕಾರ್ಯದರ್ಶಿ ರಾಜೀವ ಗೌಬಾ ಅವರು ಇಂದು ರಾತ್ರಿ 9 ಗಂಟೆಗೆ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು/ಡಿ.ಜಿ,ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಮತ್ತು ಈ ಸಭೆಯಲ್ಲಿ ಲಾಕ್ ಡೌನ್ 4.0ದ ಮಾರ್ಗಸೂಚಿಗಳ ಕುರಿತಾಗಿ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.

ಹೆಚ್ಚುವರಿ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next