Advertisement

ಡೆಡ್ಲಿ ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ನಿಂದ ಮಾತ್ರ ಸಾಧ್ಯವಿಲ್ಲ: ವಿಶ್ವಸಂಸ್ಥೆ

11:07 AM Mar 27, 2020 | Nagendra Trasi |

ನವದೆಹಲಿ:ಕೋವಿಡ್ 19 ಜಾಗತಿಕವಾಗಿ ತಲ್ಲಣ, ಆತಂಕಕ್ಕೆ ದೂಡಿರುವ ನಡುವೆಯೇ ಇದೀಗ ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಮಾತ್ರವೇ ಪರಿಹಾರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಜನರಲ್ ಟೆಡ್ರಫಸ್ ಅಧಾನೋಮ್ ಗೇಬ್ರೈಸುಸ್ ತಿಳಿಸಿದ್ದಾರೆ.

Advertisement

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಈಗಾಗಲೇ ಕೋವಿಡ್ 19 ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ತಂತ್ರಕ್ಕೆ ಮೊರೆ ಹೋಗಿವೆ. ಭಾರತ ಕೂಡಾ 21 ದಿನಗಳ ಕಾಲ ಲಾಕ್ ಡೌನ್ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಕೋವಿಡ್ 19 ವೈರಸ್ ನಿಧಾನಗತಿಯಲ್ಲಿ ಹರಡುತ್ತಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಲಾಕ್ ಡೌನ್ ಘೋಷಿಸಿವೆ. ಆದರೆ ಜನರು ಸ್ವಯಂ ಆಗಿ ಹೋಮ್ ಕ್ವಾರಂಟೈನ್ ಆಗದೆ ಸೋಂಕು ತಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳು ಕೋವಿಡ್ 19 ತಡೆಯಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಎರಡನೇ ಹಂತದ ಅವಕಾಶ ಬಳಸಿಕೊಳ್ಳಬೇಕು ಎಂದು ತಿಳಿಸಿದೆ.

ಜನರು ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು. ಜನರ ಖರೀದಿಸುವ ವಸ್ತುಗಳ ಸಮಯವನ್ನು ಕಡಿತಗೊಳಿಸಬೇಕು. ಇದಕ್ಕಾಗಿ ಕೆಲವೊಂದು ಮಾರ್ಗಸೂಚಿ ಅನುಸರಿಸಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next