Advertisement

ಜನರೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಅವಶ್ಯಕತೆಯಿಲ್ಲ: ಸಚಿವ ಸುಧಾಕರ್

11:52 AM Apr 12, 2021 | Team Udayavani |

ಬೆಂಗಳೂರು: ಜನರು ಅನಗತ್ಯವಾಗಿ ಸೇರುವುದು ಬಿಡಬೇಕು. ನಾವೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಮಾಡುವ ಅವಶ್ಯಕತೆಯಿಲ್ಲ. ಸರ್ಕಾರ ಏನೆಲ್ಲ ಮಾಡಬೇಕು, ಪೂರ್ವಯೋಜಿತವಾಗಿ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮಾಡುತ್ತೇವೆಂದು ಸಿಎಂ ಆಗಲಿ, ನಾನಾಗಲಿ ಹೇಳಿಲ್ಲ. ಲಾಕ್ ಡೌನ್ ಮಾಡಲು ನಮಗೆ ಸುತಾರಾಂ ಇಷ್ಟ ಇಲ್ಲ. ಲಾಕ್ ಡೌನ್‌ನಿಂದ ಎಷ್ಟು ಆರ್ಥಿಕ ಕಷ್ಟ ಇದೆ ಎನ್ನುವುದು ಗೊತ್ತಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ರಾತ್ರಿ ಕರ್ಫ್ಯೂ ಸಮಯ ಬದಲಾವಣೆಗೆ ಹೊಟೇಲ್ ಸಂಘದ ಒತ್ತಾಯ: ಸಾಧ್ಯವೇ ಇಲ್ಲ ಎಂದ ಸಚಿವ ಸುಧಾಕರ್

ಈಗ ಫನಾ ಅಸೋಸಿಯೇಷನ್ ಜೊತೆ ವಿಡಿಯೋ ಸಂವಾದ ಮಾಡಿದ್ದೇನೆ. ಕೋವಿಡ್ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ನಾನ್ ಕೋವಿಡ್ ಇದ್ದರೂ ತುರ್ತು ಪರಿಸ್ಥಿತಿ ಇರುವುದಿಲ್ಲ. ನಾನ್ ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡಲು ಮನವಿ ಮಾಡಿದ್ದೇವೆ. ಒಂದು ವಾರದ ಒಳಗೆ ಶೇ.50 ರಷ್ಟು ಹಾಸಿಗೆ ಕೊಡಲು ಒಪ್ಪಿದ್ದಾರೆ. ಅಲ್ಪ ರೋಗದ ಲಕ್ಷಣ ಅಥವಾ ಯಾವುದೇ ರೋಗದ ಲಕ್ಷಣ ಇಲ್ಲದವರು ಆಸ್ಪತ್ರೆಯಲ್ಲಿ ಇರಬೇಕು ಎಂದರು.

ಇದನ್ನೂ ಓದಿ:ದೇಶದಲ್ಲಿ ದಾಖಲೆಯ 12 ಲಕ್ಷ ಸಕ್ರಿಯ ಕೋವಿಡ್ ಪ್ರಕರಣ, 24ಗಂಟೆಯಲ್ಲಿ 1.68 ಲಕ್ಷ ಕೇಸ್ ಪತ್ತೆ 

Advertisement

ಇಡೀ ದೇಶದಲ್ಲಿ ಚಿಕಿತ್ಸೆಗೆ ರೆಮಿಡಿಸೀವರ್ ಅವಶ್ಯಕತೆ ಇದೆ. ಅದರ ತಯಾರಿಕೆ ಕಡಿಮೆಯಾಗಿದೆ. ರಾಜ್ಯದಲ್ಲಿ ರೆಮಿಡಿಸೀವರ್ ಲಭ್ಯತೆ ಇದೆ. ಆದರೆ ಖಾಸಗಿ ಆಸ್ಪತ್ರೆಯವರು ಇಲ್ಲ ಅಂತ ಹೇಳಿದ್ದಾರೆ. ಎಷ್ಟು ಬೇಕಿದೆಯೆಂದು ಖಾಸಗಿ ಆಸ್ಪತ್ರೆಯಿಂದ ಲೆಕ್ಕ ಪಡೆಯಲಾಗುವುದು. ಸರ್ಕಾರದಿಂದ ನಾವು ಪಡೆದ ದರದಲ್ಲೇ, ಅವರಿಗೆ ಪೂರೈಸುತ್ತೇವೆ ಎಂದರು.

ಬೇವು ಕೋವಿಡ್, ಬೆಲ್ಲ ಲಸಿಕೆ: ಯುಗಾದಿ ಎಲ್ಲರಿಗೂ ದೊಡ್ಡ ಹಬ್ಬ. ಕೋವಿಡ್ ಬಂದಿದ್ದು, ಲಸಿಕೆ ಎಲ್ಲರೂ ಪಡೆಯಿರಿ. ಬೇವು ಕೋವಿಡ್, ಬೆಲ್ಲ ಲಸಿಕೆ. ಎಲ್ಲರೂ ಲಸಿಕೆ ಪಡೆಯಿರಿ. ಹಳ್ಳಿಗೆ ಹೋಗುವುದು ಕಡಿಮೆ ಮಾಡಿ. ಹಳ್ಳಿಯವರು ಸುರಕ್ಷಿತವಾಗಿ ಇರಲಿ, ಇಲ್ಲಿಂದ ರೋಗ ತೆಗೆದುಕೊಂಡು ಹೋಗುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next