Advertisement
ಆದಷ್ಟು ಅದಷ್ಟು ಕಡಿಮೆ ಕಾರ್ಯಕರ್ತರು ಸ್ವಚ್ಛತೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುತ್ತಿದ್ದಾರೆ. ಗಾಂಧಿ ಆಸ್ಪತ್ರೆಯ ಎಂಡಿ ಎಂ. ಹರಿಶ್ಚಂದ್ರ ಮತ್ತು ವೈದ್ಯಕೀಯ ನಿರ್ದೇಶಕ ಡಾ| ವ್ಯಾಸರಾಜ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಸೇವೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ನರಸಿಂಹಮೂರ್ತಿ ಅವರು ನಿರಂತರವಾಗಿ ಭಾಗವಹಿಸುತ್ತಿದ್ದು, ರಾಜೇಶ್ ಭಟ್ ಪಣಿಯಾಡಿ, ಲಕ್ಷ್ಮೀ ಹರಿಶ್ಚಂದ್ರ, ಆಸ್ಪತ್ರೆಯ ಸಿಬಂದಿ ಭಾಗವಹಿಸುತ್ತಿದ್ದಾರೆ.
ಗುಟ್ಕಾ, ಪಾನ್‌ಮಸಾಲ ಮತ್ತು ಸಿಗರೇಟ್‌ನಂತಹ ಆರೋಗ್ಯಕ್ಕೆ ಹಾನಿಕರಕವಾದ ವಸ್ತುಗಳ ತ್ಯಾಜ್ಯವೇ ಯಾವಾಗಲೂ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುತ್ತಿವೆ. ಲಾಕ್‌ಡೌನ್‌ನಿಂದಾಗಿ ಅಂತಹ ಕಸ ಬಹಳಷ್ಟು ವಿರಳವಾಗಿ ಕಾಣುತ್ತಿದ್ದು, ಜನರ ಆರೋಗ್ಯ ಮತ್ತು ದೇಶದ ಸ್ವಚ್ಛತೆಯ ದೃಷ್ಟಿಯಿಂದಲೂ ಮುಂದಿನ ದಿನಗಳಲ್ಲಿ ಇಂತಹವುಗಳನ್ನು ನಿಷೇಧಿಸಿದರೆ ಸ್ವಚ್ಛತೆ ಕಾಪಾಡಬಹುದು.
-ಸ್ವಯಂಸೇವಕರು.