Advertisement

ಸಕಲೇಶಪುರದಲ್ಲೂ ಲಾಕ್‌ಡೌನ್

04:01 PM Apr 23, 2021 | Team Udayavani |

ಸಕಲೇಶಪುರ: ರಾಜ್ಯ ಸರ್ಕಾರ ಕೋವಿಡ್‌ಮಾರ್ಗಸೂಚಿ ಅನ್ವಯ ಪಟ್ಟಣವನ್ನು ಲಾಕ್‌ಡೌನ್‌ ಮಾಡಲಾಗುತ್ತಿದ್ದು, ನಿಯಮಪಾಲನೆಗೆಜನರು ಸಹಕರಿಸಬೇಕು ಎಂದು ತಹಶೀಲ್ದಾರ್‌ಜಯ್‌ ಕುಮಾರ್‌ ಮನವಿ ಮಾಡಿದರು.

Advertisement

ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಅಗತ್ಯವಸ್ತು ಅಂಗಡಿಗಳನ್ನು ಬಿಟ್ಟು ಉಳಿದ ಅಂಗಡಿಗಳನ್ನು ಲಾಕ್‌ಡೌನ್‌ ಮಾಡಿಸಿದ ನಂತರ ಮಾತನಾಡಿ, ಜನರ ಜೀವನಕ್ಕಿಂತ ಜೀವ ಮುಖ್ಯಎಂಬ ಚಿಂತನೆ ಇದೆ.

ಕೂಲಿ ಕಾರ್ಮಿ ಕರು, ಕೃಷಿಚಟುವಟಿಕೆ, ಕೈಗಾರಿಕೆ, ಕಚೇರಿ ಯಲ್ಲಿ ಕೆಲಸಮಾಡುವವರಿಗೆ ತೊಂದರೆ ಮಾಡುತ್ತಿಲ್ಲ.ಜನರು ಗುಂಪುಗೂಡುವುದನ್ನು ಹಾಗೂಸೋಂಕು ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ಸರ್ಕಾರದ ಮಾ ರ್ಗಸೂಚಿಯಂತೆ ನಿರ್ಬಂಧಿಸಲಾಗಿದೆ.

ತಾ ಲೂಕಿನಲ್ಲಿ ತಕ್ಷಣವೇ ಲಾಕ್‌ಡೌನ್‌ ಜಾರಿ ಮಾಡಿಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಗ ತ್ಯವಸ್ತುಗಳ ಹೊರತಾಗಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು ಬಂದ್‌ ಮಾಡಲಾಗಿದೆ.ತಾಲೂಕಿನಲ್ಲಿ ಕಠಿಣ ರೂಲ್ಸ್ ಜಾರಿಮಾಡಲಾಗಿದ್ದು, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್‌ಶಾಪ್‌ ಗಳು ಸೇರಿ ಜೀವನಾವಶ್ಯಕ ಅಲ್ಲದಎಲ್ಲಾ ಅಂಗಡಿಗಳ ಬಂದ್‌ ಮಾಡುವಂತೆಆದೇಶಿಸಲಾಗಿದೆ.

ದಿನಸಿ, ಹಾಲು, ಮಾಂಸ,ಮೀನು ಮಾರಾಟ ಹಾಗೂ ಕೃಷಿ ಮತ್ತು ಕಟ್ಟಡನಿರ್ಮಾಣ ಸಂಬಂಧ ಅಗತ್ಯ ವಸ್ತುಗಳಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆಹೋಟೆಲ್‌ಗ‌ಳಲ್ಲಿ ಕೇವಲ ಪಾರ್ಸೆಲ್‌ ಅವಕಾಶನೀಡಲಾಗಿದೆ.

Advertisement

ಜಿಲ್ಲಾಧಿಕಾರಿಗಳ ಮುಂದಿನಆದೇಶದವರೆಗೂ ಇದು ಮುಂದುವರಿಯಲಿದೆ ಎಂದರು. ದಿಢೀರ್‌ ಲಾಕ್‌ಡೌನ್‌ನಿಂದ ವಿವಿಧ ಊರುಗಳಿಂದ ಪಟ್ಟಣಹಾಗೂ ಬಾಳ್ಳುಪೇಟೆ ಸಂತೆಯಲ್ಲಿ ಮಾರಾಟಮಾಡಲು ತಂದಿದ್ದ ತರಕಾರಿಗಳನ್ನು ಪೂರ್ತಿಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಸ್ಟೀಫ‌ನ್‌ ಪ್ರಕಾಶ್‌,ಪರಿಸರ ಎಂಜಿನಿಯರ್‌ ಸಹನ, ಕಂದಾಯಇಲಾ ಖೆಯ ಸುರೇಶ್‌ ಪ್ರವೀಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next