Advertisement
ಆರ್ಥಿಕ ಚಟುವಟಿಕೆಗಳನ್ನು ತ್ವರಿತವಾಗಿ ಮರುಪ್ರಾರಂಭಿಸುವ ಪ್ರಯತ್ನಗಳಲ್ಲಿ ಎರಡು ನೆಲೆಯಲ್ಲಿ ಯೋಚಿಸಬೇಕಾಗಿದೆ. ಒಂದು ಕೋವಿಡ್ ವೈರಸ್‌ನ ಹಾನಿಯನ್ನು ಸಹಿಸುತ್ತಲೇ ಮುಂದುವರಿಯುವುದು, ಇನ್ನೊಂದು ಅನಾರೋಗ್ಯ ಸವಾಲು ಇದ್ದರೂ ಆರ್ಥಿಕ ಚಟುವಟಿಕೆ ಆರಂಭಿಸುವುದು.
Related Articles
Advertisement
ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದ ಗವರ್ನರ್‌ಗಳು ಕೂಡ ಕೆಲವು ವ್ಯವಹಾರಗಳನ್ನು ಪುನರಾರಂಭಿಸಲು ಅನುಮತಿಸಿದ್ದಾರೆ. ಇಲ್ಲಿ ಸೋಂಕು ಈಗಲೂ ಅಪಾಯದ ಮಟ್ಟದಲ್ಲಿದೆ. ಇಂಥ ಸಂದರ್ಭಗಳಲ್ಲಿ ವ್ಯವಹಾರ ಪುನರಾರಂಭಿಸುವ ನಿರ್ಧಾರವು ಮತ್ತಷ್ಟು ಮಂದಿಯನ್ನು ಅಪಾಯಕ್ಕೆ ತಳ್ಳಬಹುದು ಎಂದು ಎಚ್ಚರಿಸಿದ್ದಾರೆ ಆರೋಗ್ಯ ತಜ್ಞರು.
ಜಾರ್ಜಿಯಾ ಶುಕ್ರವಾರ ಹೇರ್ ಕಟ್ಟಿಂಗ್ ಸೆಲೂನ್, ಜಿಮ್ ಮುಂತಾದವುಗಳನ್ನು ತೆರೆಯಲು ಅವಕಾಶ ನೀಡಿದೆ. ಮುಂದಿನ ಸೋಮವಾರದಿಂದ ರೆಸ್ಟೋರೆಂಟ್‌ಗಳು ಮತ್ತು ಚಿತ್ರಮಂದಿರಗಳೂ ಕಾರ್ಯಾರಂಭ ಮಾಡಬಹುದು. ಕೊಲೊರಾಡೊ, ಮಿನ್ನೆಸೊಟ, ಮಿಸ್ಸಿಸ್ಸಿಪಿ ಮತ್ತು ಓಹಿಯೋ ಮುಂತಾದ ಕಡೆಗಳಲ್ಲೂ ಕೆಲವು ವ್ಯವಹಾರಗಳ ಆರಂಭಕ್ಕೆ ಸಮ್ಮತಿಸಲಾಗಿದೆ.ಹೆಚ್ಚಿನ ಕಡೆಗಳಲ್ಲಿ ಸಂಸ್ಥೆಯವರೇ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ವರ್ಗದ ಗ್ರಾಹಕರೂ ಇದೇ ಭಯದಲ್ಲಿದ್ದಾರೆ. ಆದರೆ ವ್ಯಾಪಾರ ವಹಿವಾಟು ನಡೆಸುವವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅನುಮತಿ ನೀಡಿದ ಮೇಲೂ ಬಾಗಿಲು ಮುಚ್ಚಿದರೆ ನಿರುದ್ಯೋಗ ಸೌಲಭ್ಯ ಸಿಗದು, ಇತ್ತ ವ್ಯಾಪಾರದ ಆದಾಯವೂ ಸಿಗದು ಎಂಬ ಸ್ಥಿತಿ ಅವರದ್ದು. ಈಚೆಗೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವವರಲ್ಲಿ 1.50 ಲಕ್ಷ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗಿಂತ 50 ಸಾವಿರ ಡಾಲರ್ ವೇತನ ಪಡೆಯುವವರು ದುಪ್ಪಟ್ಟಾಗಿದ್ದಾರೆ. ಕಪ್ಪು ಮತ್ತು ಲ್ಯಾಟಿನ್ ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಬದುಕುವುದು ಕಷ್ಟ. ಏಕೆಂದರೆ ಅವರಿಗೆ ಸಿಗುವ ಸಂಬಳ ಕಡಿಮೆ. ಹಾಗಾಗಿ ಆರ್ಥಿಕವಾಗಿ ಸದೃಢರಾಗಿಲ್ಲ. ಇದರಿಂದ ಕೆಲಸವಿಲ್ಲದೇ ಬದುಕುವುದು ಕಷ್ಟ. ಎಷ್ಟೇ ಕಷ್ಟವಾದರೂ ಉದ್ಯೋಗ ಮಾಡಲೇಬೇಕಾದ ಅನಿವಾರ್ಯ ಇದೆ. ಫೆಡರಲ್ ರಿಸರ್ವ್ ಅಂಕಿಅಂಶಗಳ ಪ್ರಕಾರ, ಸರಾಸರಿ ಕಾರ್ಮಿಕ ಕುಟುಂಬವೊಂದು 2016ರಲ್ಲಿ ಕೇವಲ 18,000 ಡಾಲರ್ ಸಂಪತ್ತನ್ನು ಹೊಂದಿತ್ತು. ಇದು ಹಿಸ್ಪಾ³ನಿಕ್ ಕುಟುಂಬದಲ್ಲಿ 21,000 ಡಾಲರ್ ಆಸುಪಾಸಿನಲ್ಲಿತ್ತು. ಆದರೆ ಬೇರೆಯವರು ಇದಕ್ಕಿಂತ ಸುಮಾರು 10 ಪಟ್ಟು ಹೆಚ್ಚು ಆದಾಯ ಹೊಂದಿದ್ದರು ಎಂದಿದೆ. ಹೀಗೆ ಅಮೆರಿಕದ ಆರ್ಥಿಕ ಶಕ್ತರು ಮತ್ತು ಅಶಕ್ತರ ನಡುವಿನ ಅಂತರ ಹಾಗೂ ಪಕ್ಷಪಾತವು ದೊಡ್ಡ ಸವಾಲಾಗಿ ಎದ್ದು ನಿಲ್ಲುತ್ತಿದೆ. ಈಗ ಅದು ಮತ್ತಷ್ಟು ಪರಾಕಾಷ್ಠೆಗೇರಲಿದ್ದು, ಹೊಸ ಸಮಸ್ಯೆಗಳನ್ನೂ ಸೃಷ್ಟಿಸಬಹುದು ಎಂದಿದೆ ದಿ ನ್ಯೂಯಾರ್ಕ್ ಟೈಮ್ಸ್.