Advertisement

ಕೋವಿಡ್ 19 ಸೋಂಕು ಹೆಚ್ಚಳ; ಮಾರ್ಚ್ 15ರಿಂದ 21ರವರೆಗೆ ನಾಗ್ಪುರದಲ್ಲಿ ಲಾಕ್ ಡೌನ್ ಜಾರಿ

03:33 PM Mar 11, 2021 | Team Udayavani |

ಮುಂಬೈ: ಕೋವಿಡ್ 19 ಸೋಂಕು ಪ್ರಕರಣ ದಿನಂಪ್ರತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನಾಗ್ಪುರದಲ್ಲಿ ಮಾರ್ಚ್ 15ರಿಂದ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಲಾಕ್ ಡೌನ್ ಮಾರ್ಚ್ 21ರವರೆಗೆ ಮುಂದುವರಿಯಲಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ನಾಗ್ಪುರ್ ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ಹೇಳಿದೆ.

ಮೆಡಿಕಲ್ ಸ್ಟೋರ್ ಮತ್ತು ಇತರ ತುರ್ತು ಸೇವೆಗಳಿಗೆ ಲಾಕ್ ಡೌನ್ ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಮಾರ್ಚ್ 15ರಿಂದ 21ರವರೆಗೆ ನಾಗ್ಪುರದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ ಎಂದು ಸಚಿವ ನಿತಿನ್ ರಾವತ್ ತಿಳಿಸಿದ್ದಾರೆ.

ಏತನ್ಮಧ್ಯೆ ಕೋವಿಡ್ ಪ್ರಕರಣ ಹೆಚ್ಚಳವಾಗಿರುವ ಕಲ್ಯಾಣ್ ದೊಂಬಿವಲಿ ನಂದುರ್ಬರ್ ಮತ್ತು ಧುಲೆ ಜಿಲ್ಲೆಗಳಲ್ಲಿ ಮಾರ್ಚ್ 10ರಿಂದ ನಾಲ್ಕು ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next