Advertisement

ಲಾಕ್‌ಡೌನ್‌: ವಾಕಿಂಗ್‌ ಇಲ್ಲದಿದ್ದರೇನು? ಸ್ಕಿಪ್ಪಿಂಗ್‌ ಇಲ್ಲವೇ?

06:22 PM Apr 19, 2020 | sudhir |

ಲಂಡನ್‌: ಲಾಕ್‌ಡೌನ್‌ ನಲ್ಲಿರುವ ಈ ಅಜ್ಜನ ಕಥೆ ಕೇಳಿ. ತಮ್ಮ ದೈನಂದಿನ ಚಟುವಟಿಕೆಯನ್ನು ಇಳಿವಯಸ್ಸಿನಲ್ಲಿಯೂ ನಿಲ್ಲಿಸಿಲ್ಲ. ಪ್ರತಿ ವಾರ ಪಾರ್ಕ್‌ನಲ್ಲಿ ಐದು ಕಿ.ಮೀ ಓಟದಲ್ಲಿ 73 ವರ್ಷದ ರಾಜಿಂದರ್‌ ಸಿಂಗ್‌ ಅವರು ಭಾಗವಹಿಸುತ್ತಿದ್ದರು, ಆದರೆ ಲಾಕ್‌ಡೌನ್‌ ಕಾರಣಕ್ಕೆ ಪಾರ್ಕ್‌ಗೆ ತೆರಳುವಂತಿಲ್ಲ.

Advertisement

ಮೊದಲೇ ಹಿರಿಯ ನಾಗರಿಕರಾಗಿರುವ ಕಾರಣ ಅವರನ್ನು ಮನೆಯಲ್ಲಿಯೇ ಇರುವಂತೆ ಸರಕಾರ ಸ್ಪಷ್ಟವಾಗಿ ಹೇಳಿದೆ. ಈಗ ವಾಕಿಂಗ್‌ ಬದಲು ಸಿಂಗ್‌ ಅವರು ಸ್ಕಿಪ್ಪಿಂಗ್‌ ಕಡೆಗೆ ಗಮನ ಹರಿಸಿದ್ದಾರಂತೆ. ಈ ಕುರಿತಂತೆ ಇನ್‌ಸ್ಟಾಗ್ರಾಂಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು “ನಾನು ಪರಿಣಿತನಲ್ಲ, ಆದರೆ ನೀವು ಐದು ನಿಮಿಷ ಸ್ಕಿಪ್ಪಿಂಗ್‌ ಅನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ಮೂರು ಕಿಲೋಮೀಟರ್‌ ಓಟಕ್ಕೆ ಸಮ’ ಎಂದಿದ್ದಾರೆ. ನಿಮ್ಮ ಮನೆಯೊಳಗೆ ಅಥವಾ ನಿಮ್ಮ ತೋಟದಲ್ಲಿ ಸ್ಕಿಪ್ಪಿಂಗ್‌ ಮಾಡಬಹುದು. ತರಬೇತುದಾರರೂ ಅಗತ್ಯವಿಲ್ಲ ಎಂದಿದ್ದಾರೆ ಸಿಂಗ್‌.

ಲಾಕ್‌ಡೌನ್‌ ಸಮಯದಲ್ಲಿ ಸಕ್ರಿಯವಾಗಿರುವಂತೆ ಇತರರನ್ನು ಪ್ರೋತ್ಸಾಹಿಸಲು ಸಿಂಗ್‌ ತನ್ನ ದೈನಂದಿನ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಜತೆಗೆ ಅವರು ಬ್ರಿಟಿಷ್‌ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ (ಎನ್‌ಎಚ್‌ಎಸ್‌) ಹಣವನ್ನು ಸಂಗ್ರಹಿಸುವ ಆಶಯದೊಂದಿಗೆ ನಿಧಿಸಂಗ್ರಹಿಸುತ್ತಿದ್ದಾರೆ.

ನ್‌ಎಚ್‌ಎಸ್‌ ಅದ್ಭುತವಾಗಿ ಕೆಲಸ ಮಾಡುತ್ತಿದ್ದು, ಸದ್ಯದ ಮಟ್ಟಿಗೆ ಯಾವ ಸಂಸ್ಥೆಯೂ ಇದಕ್ಕೆ ಸರಿಸಾಟಿ ಇಲ್ಲ. ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಇತರ ರಾಷ್ಟ್ರಗಳು ಈ ಸಂಸ್ಥೆಯನ್ನು ಅನುಸರಿಸಬೇಕು ಎಂದಿದ್ದಾರೆ. 73 ವರ್ಷದ ರಾಜಿಂದರ್‌ ಸಿಂಗ್‌ ಅವರು ಎನ್‌ಎಚ್‌ಎಸ್‌ಗಾಗಿ ದೇಣಿಗೆ ಸಂಗ್ರಹಿಸುತ್ತಿದ್ದು, ದಕ್ಷಿಣ ಇಂಗ್ಲೆಂಡ್‌ನ‌ ಬರ್ಕ್‌ ಶೈರ್‌ನಲ್ಲಿ ವಾಸಿಸುತ್ತಿದ್ದಾರೆ. ಸರಕಾರದ ಆದೇಶವನ್ನು ಪಾಲಿಸುವ ಜತೆಗೆ ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next