Advertisement
ಅಂಥದ್ದೇ ಒಂದು ಸುದ್ದಿ ಬ್ರಿಟನ್‌ನದ್ದು. ಮೃಗಾಲಯ ನೋಡಿಕೊಳ್ಳುವವರಿಗೆ ವರ್ಕ್ ಫ್ರಾಮ್ ಹೋಂ ಎಂದರೆ ಹೇಗಿರಬಹುದು? ಅವರೇನೋ ಖುಷಿಯಿಂದ ಮನೆಗೇ ಹೋಗಿ ಕುಳಿತುಕೊಳ್ಳಬಹುದು ಎನ್ನೋಣ. ಆದರೆ ಮೃಗಾಲಯದಲ್ಲಿರುವ ವನ್ಯಜೀವಿಗಳ, ಪ್ರಾಣಿಗಳ ಕಥೆ? ದೇವರೇ ಕೇಳಬೇಕು.
ಇನ್ನು ಮೃಗಾಲಯದ ಪ್ರಾಣಿಗಳ ಹಾರೈಕೆಗೂ ಕೋವಿಡ್-19 ಬಿಸಿ ತಟ್ಟಿದೆ. ಅವುಗಳ ಸಂರಕ್ಷಣೆ ಹಾಗೂ ಪಾಲನೆಯೇ ಸವಾಲಾಗಿ ಪರಿಣಮಿಸಿದೆ.
Related Articles
ಕೊರೊನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟಿನಿಂದ ವಿಶ್ವದೆಲ್ಲೆಡೆ ಸಂಪೂರ್ಣ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಮೃಗಾಲಯದ ನಾಲ್ವರು ಸಿಬಂದಿ ಕೋವಿಡ್-19 ತಡೆಗಾಗಿ ಪ್ರಾಣಿಗಳ ಪಾಲನೆ ಹೊತ್ತು ಅಲ್ಲಿಯೇ ಉಳಿದಿದ್ದಾರೆ ಎಂದು ಬಿಬಿಸಿ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.
Advertisement
ಪ್ರಾಣಿಗಳ ಸರಂಕ್ಷಣೆ ಆದ್ಯ ಕರ್ತವ್ಯನಾವು ಹಸಿವಾದರೆ ಬಾಯಿ ಬಿಟ್ಟು ಕೇಳುತ್ತೇವೆ. ಆದರೆ ಮೂಕ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ನಾವು ತಿನ್ನಲು ನೀಡಿದರೆ ಅವು ತಿನ್ನುತ್ತವೆ. ಇಲ್ಲವಾದರೆ ಇಲ್ಲ. ಅದರಲ್ಲೂ ಮೃಗಾಲಯ ಪ್ರಾಣಿಗಳು ಒಂದು ವಿಭಿನ್ನವಾದ ವಾತಾವರಣಕ್ಕೆ ಒಗ್ಗಿ ಹೋಗಿರುತ್ತವೆ. ಪ್ರತಿದಿನ ನೂರಾರು ಜನ ಮಧ್ಯೆ ಓಡಾಡಿಕೊಂಡ ಸಾರ್ವಜನಿಕರನ್ನು ಮನೆಯಲ್ಲಿಯೇ ಇರಿ ಎಂದು ಹೇಳಿದಾಗ ಹೇಗೆ ಕಸಿವಿಸಿ ಅಗುತ್ತದೆಯೋ, ಪ್ರತಿನಿತ್ಯ ಅವುಗಳನ್ನು ಬಂದು ಮಾತನಾಡಿಸುತ್ತಿದ್ದ ಸಾವಿರಾರು ಜನ ಒಮ್ಮೆಲೇ ಮಾಯಾವಾದರೆ ಅವುಗಳಲ್ಲಿಯೂ ಬದಲಾವಣೆ ಉಂಟಾಗುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಸಂರಕ್ಷಣೆಯೂ ಆದ್ಯ ಕರ್ತವ್ಯ ಎನ್ನುತ್ತಾರೆ ಈ ಸಿಬಂದಿ ಮೃಗಾಲಯದಲ್ಲಿಯೇ ವಾಸ
ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ಸತತ 12 ವಾರ ಮೃಗಾಲಯದಲ್ಲಿಯೇ ನಾವು ಇರಲು ತೀರ್ಮಾನಿಸಿದ್ದು, ಅಲ್ಲಿಯೇ ಒಂದು ಗುಡಿಸಲು ಕಟ್ಟಿಕೊಂಡಿದ್ದೇವೆ. ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ತಮ್ಮ ಸ್ನೇಹಿತರ ಬಳಿ ಮತ್ತು ಇತರೆ ಸಿಬಂದಿ ಮೂಲಕ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. 12 ಸಾವಿರ ಪಕ್ಷಿಗಳು
ಈ ಅಭಯಾರಣ್ಯದಲ್ಲಿ ಸುಮಾರು 12 ಸಾವಿರ ಪಕ್ಷಿಗಳಿದ್ದು, ಕೆಂಪು ಪಾಂಡಾಗಳು, ಅಳಿಲುಗಳು ಸೇರಿದಂತೆ ಹಲವಾರು ಪ್ರಾಣಿಗಳಿವೆ. ಅವುಗಳಿಗೆ ಆಹಾರ ಒದಗಿಸುವುದು, ಶುಚಿತ್ವ ನೋಡಿಕೊಳ್ಳುವುದು ಮತ್ತು ಔಷಧಿ ನೀಡುವುದು ಇತ್ಯಾದಿ ಕೆಲಸದಲ್ಲಿ ಸಿಬಂದಿ ತೊಡಗಿಕೊಂಡಿದ್ದಾರೆ.