Advertisement
ಬುಧವಾರ ಬೆಳಗ್ಗೆ 7ರಿಂದ ಸಂಜೆ 7ವರೆಗೆ ಎಲೆಕ್ಟ್ರಾನಿಕ್, ಚಿನ್ನಾಭರಣ ಮಳಿಗೆ, ಬಟ್ಟೆ ಮಳಿಗೆ ತೆರೆಯಲು ಅವಕಾಶ ನೀಡಿರುವುದರಿಂದ ಜನರು ಸರತಿ ಸಾಲಿನಲ್ಲಿ ಕಾದು ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ಒಂದೂವರೆ ತಿಂಗಳಲ್ಲಿ ಲಾಕ್‌ಡೌನ್ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ನಗರದಲ್ಲಿ ದಿನಸಿ ಹಾಗೂ ತರಕಾರಿ ಖರೀದಿಸುವವರ ಸಂಖ್ಯೆ ಕಡಿಮೆ ಇತ್ತು. ಜಿಲ್ಲಾಡಳಿತ ಖರೀದಿಯ ಸಮಯವನ್ನು ವಿಸ್ತರಿಸಿರುವುದರಿಂದ ಇದಕ್ಕೆ ಕಾರಣವಿರಬಹುದು ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ವಾಹನ ಓಡಾಟ ಹೆಚ್ಚಳ
ನಗರದಲ್ಲಿ ಬಸ್ ವ್ಯವಸ್ಥೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನರು ಬೆಳಗ್ಗೆಯಿಂದ ದ್ವಿಚಕ್ರ, ಕಾರು, ಆಟೋಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂತು. ನಗರದ ವಿವಿಧ ಕಡೆಗಳ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ಬೇರೆ ಜಿಲ್ಲೆಯ ನಂಬರ್ ಹೊಂದಿರುವ ಪ್ರತಿಯೊಂದು ವಾಹನಗಳ ಮಾಹಿತಿಯನ್ನು ಪಡೆಯುತ್ತಿದ್ದರು.
Related Articles
ಇತ್ತ ನಗರದಲ್ಲಿ ಹೆಚ್ಚಿನ ಹೊಟೇಲ್‌ಗಳು ಕಾರ್ಯಾಚರಿಸಲಾರಂಭಿಸಿವೆ. ಗ್ರಾಹಕರಿಗೆ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಕೆಲವು ಹೊಟೇಲ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಸೆಲ್ ಪಡೆಯುತ್ತಿದ್ದರು.
Advertisement
ತೆರೆದ ಸರ್ವಿಸ್ ಸೆಂಟರ್ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ನಗರದ ಸಣ್ಣ ಪುಟ್ಟ ವಾಹನ ಸರ್ವಿಸ್ ಸೆಂಟರ್ ತೆರೆದಿದ್ದು, ಸಾರ್ವಜನಿಕರು ಒಂದೂವರೆ ತಿಂಗಳ ಬಳಿಕ ವಾಹನಗಳನ್ನು ಸರ್ವಿಸ್‌ಗೆ ನೀಡುತ್ತಿರುವ ದೃಶ್ಯಗಳು ಕಂಡು ಬಂದವು.