ಹಾಸನ: ಜಿಲ್ಲೆಯ ಕೊರೊನಾ ನಿಯಂತ್ರಣಕ್ಕೆಬಾರದ ಹಿನ್ನೆಲೆಯಲ್ಲಿ ಮತ್ತೂಂದು ವಾರ ಹಾಸನಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರಿಸಲುಸರ್ಕಾರ ನಿರ್ಧರಿಸಿದೆ.
ಯಥಾಸ್ಥಿತಿ:ಹಾಸನ ಜಿಲ್ಲೆಯಲ್ಲಿ ಜೂ.14 ರನಂತರವೂ ಒಂದು ವಾರ ಲಾಕ್‌ಡೌನ್‌ಮುಂದುವರಿಸುವ ನಿರ್ಧಾರ ವನ್ನುಬೆಂಗಳೂರಿನಲ್ಲಿ ಮುಖ್ಯಮಂತ್ರಿ ಪ್ರಕಟಿಸಿದ್ದು,ಜೂ.21 ರವರೆಗೂ ಲಾಕ್‌ಡೌನ್ ಜಿಲ್ಲೆಯಲ್ಲಿಮುಂದುವರಿಯಲಿದೆ. ಈಗಿರುವಂತೆಯೇ ವಾರದಲ್ಲಿ 3 ದಿನ ಬೆಳಿಗ್ಗೆ 6 ರಿಂದ 10 ಗಂಟೆವರೆಗೆಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು,ಇನ್ನು 4 ದಿನ ಸಂಪೂರ್ಣ ಲಾಕ್‌ಡೌನ್‌ಈಗಿನಂತೆಯೇ ಮುಂದುವರಿಯಲಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿಯವರು ಗುರುವಾರವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿಸ್ಥಳೀಯ ಪರಿಸ್ಥಿತಿ ಆಧರಿಸಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಂಡು ಯಾವ ವ್ಯವಹಾರಗಳಿಗೆ ಲಾಕ್‌ಡೌನ್‌ನಿಂದ ವಿನಾಯತಿ ನೀಡಬಹುದೆಂಬ ಬಗ್ಗೆ ಸರ್ಕಾರಕ್ಕೆ ತಿಳಿಸಬೇಕು ಎಂದುಸೂಚನೆ ನೀಡಿದ್ದರು.
ಆದರೆ ಸಂಜೆ ಹಾಸನ ಸೇರಿಪಾಸಿಟಿವ್ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿಮತ್ತೂಂದು ವಾರ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಮುಖ್ಯ ಮಂತ್ರಿ ಪ್ರಕಟಿಸಿದ್ದಾರೆ.
ಶುಕ್ರವಾರ ಹಾಸನ ಜಿಲ್ಲೆಗೆ ಮುಖ್ಯಮಂತ್ರಿಯವರುಭೇಟಿ ನೀಡಿ ಶಾಸಕರು ಹಾಗೂ ಅಧಿಕಾರಿಗಳ ಸಭೆನಡೆಸಲಿದ್ದು, ಶಾಸಕ ಸಲಹೆ ಆಧರಿಸಿ ಲಾಕ್‌ಡೌನ್‌ನಿಂದ ಯಾವ್ಯಾವ ವ್ಯಹಾರಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ಕೊಡಬಹುದೆಂಬ ನಿರ್ಧಾರಪ್ರಕಟವಾಗಬಹುದು.