Advertisement

ಶುಕ್ರವಾರ ಬೆಳಿಗ್ಗೆಯಿಂದಲೇ ವಿಜಯಪುರ ವಹಿವಾಟು ಲಾಕ್

03:46 PM Apr 23, 2021 | Adarsha |

ವಿಜಯಪುರ: ಸರ್ಕಾರ ಕೋವಿಡ್ ನಿಗ್ರಹಕ್ಕಾಗಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ ವರೆಗೆ ಕರ್ಪ್ಯೂ ಜಾರಿ ಮಾಡಿದೆ. ಆದರೆ ವಿಜಯಪುರ ನಗರದಲ್ಲಿ ವ್ಯಾಪಾರಿಗಳು ಶುಕ್ರವಾರ ಬೆಳಿಗ್ಗೆ ಅಂಗಡಿ ತೆರೆಯದೇ ಸ್ವಯಂ ಪ್ರೇರಿತ ಕರ್ಫ್ಯೂ ಪಾಲನೆಗೆ ಮುಂದಾಗಿದ್ದು, ಬೀದಿ ವ್ಯಾಪಾರದ ಹೊರತಾಗಿ ಗುಮ್ಮಟ ನಗರ ಸ್ತಬ್ಧವಾಗಿದೆ.

Advertisement

ಗುರುವಾರ ಮಧ್ಯಾಹ್ನ ರಾಜ್ತದ ಹಲವು ನಗರಗಳಲ್ಲಿ ಸರ್ಕಾರಿ ಪೂರ್ವ ಸೂಚನೆ ಇಲ್ಲದೇ ಪೊಲೀಸರನ್ನು ಬಳಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿತ್ತು. ಮಾಧ್ಯಮಗಳಲ್ಲಿ ಇದನ್ನು ಗಮನಿಸಿದ ನಗರದ ಕೆಲ ವ್ಯಾಪಾರಿಗಳು ತಾವೇ ಸ್ವಯಂ ಪ್ರೇರಿತವಾಗಿ ಅಂಗಡಿ ಬಾಗಿಲು ಹಾಕಿ ಮನೆಗೆ ಮರಳಿದ್ದರು.

ಇದರ ಪರಿಣಾಮ ಎಂಬಂತೆ ಶುಕ್ರವಾರ ವಿಜಯಪುರ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ಕಿತ್ತೂರ ಚನ್ನಮ್ಮ ಮಾರುಕಟ್ಟೆ, ಸರಾಫ್ ಬಜಾರ ಪರಿಸರದ ಬಹುತೇಕ ವ್ಯಾಪಾರಿಗಳು ಶುಕ್ರವಾರ ಬೆಳಿಗ್ಗೆ ಅಂಗಡಿ ತೆರೆಯಲೇ ಇಲ್ಲ. ಅಗತ್ಯ ವಸ್ತುಗಳಾದ ಔಷಧ, ದಿನಸಿ ಅಂಗಡಿ ಹೊರತಾಗಿ ಇತರೆ ಅಂಗಡಿಗಳು ತೆರೆದಿರಲಿಲ್ಲ.

ಇನ್ನು ಮಾಧ್ಯಮಗಳಲ್ಲಿ ಗುರುವಾರ ಮಧ್ಯಾಹ್ನದ ದಿಢೀರ್ ಲಾಕಡೌನ್  ಗಮನಿಸಿರುವ ಗ್ರಾಹಕರು, ಅದರಲ್ಲೂ ಗ್ರಾಮೀಣ ಜನರು ನಗರದತ್ತ ಬರಲು ಹಿಂದೇಟು ಹಾಕಿದ್ದಾರೆ‌. ಹೀಗಾಗಿ ನಗರದ ಬಹುತೇಕ ವ್ಯಾಪಾರಿ ಪರಿಸರಗಳು, ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ಕೋವಿಡ್ ಎರಡನೇ ಅಲೆಯನ್ನು ನಿಗ್ರಹಿಸುವುದಕ್ಕಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರಿಷ್ಕೃತ ಮಾರ್ಗಸೂಚಿ ರೂಪಿಸಿದೆ. ಇದರ ಅನ್ವಯ ವಿಜಯಪುರ ಜಿಲ್ಲಾಡಳಿತ ನಗರದ ಮಾರುಕಟ್ಟೆಯಲ್ಲಿ ಪೊಲೀಸರು ಲಾಠಿ ಹಿಡಿದು ಸಂಚರಿಸಿದ್ದರು. ಇದನ್ನು ಗಮನಿಸಿದ ನಗರದ ವ್ಯಾಪಾರಿಗಳು ಶುಕ್ರವಾರ ತಮ್ಮ ಅಂಗಡಿ ಬಾಗಿಲು ತೆರೆಯದೇ ಮನೆಯಲ್ಲಿ ಉಳಿದಿದ್ದಾರೆ.

Advertisement

ಕಿರಾಣಿ, ಹಾಲು, ತರಕಾರಿ, ಹಣ್ಣು, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ನಗರದ ಮಾರುಕಟ್ಟೆಯಲ್ಲಿ ಆಟೋ, ಕಾರ್, ಬೈಕ್, ಬಸ್ ಸಂಚಾರ ಸಹಜವಾಗಿಯೇ ನಡೆಯುತ್ತಿದ್ದರೂ ಜನರ ಓಡಾಟದಲ್ಲಿ ಕ್ಷೀಣತೆ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next