Advertisement

“ಊರಿನ ಸಮಸ್ಯೆ ಶೀಘ್ರ ಪರಿಹಾರಕ್ಕೆ ಯುವಕರು ಅಗತ್ಯ’

04:41 PM May 05, 2020 | sudhir |

ಮಲ್ಪೆ: ಗ್ರಾಮದಲ್ಲಿ ಸಶಕ್ತ ಯುವಕರ ತಂಡವಿದ್ದರೆ ಆ ಗ್ರಾಮಕ್ಕೆ ಆನೆಬಲ ಇದ್ದ ಹಾಗೆ. ಯುವಕರು ಮುಂದೆ ಬಂದರೆ ಊರಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುತ್ತದೆ. ಆ ನಿಟ್ಟಿನಲ್ಲಿ ಯುವ ಜನಾಂಗ ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಹೇಳಿದರು. ಅವರು ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರದ ಗೆಳೆಯರ ಬಳಗದಲ್ಲಿ ಟ್ರಸ್ಟ್‌ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಟ್ರಸ್ಟ್‌ ವತಿಯಿಂದ 37ನೇ ದಿನದಲ್ಲಿ ಕೆಳಾರ್ಕಳಬೆಟ್ಟು, ಕಲ್ಯಾಣಪುರ, ಚೇರ್ಕಾಡಿ, ಕೋಟ, ಅಂಬಲಪಾಡಿ 320 ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು.

Advertisement

ತೆಂಕನಿಡಿಯೂರು ಗ್ರಾ. ಪಂ. ಅಧ್ಯಕ್ಷ ಕೃಷ್ಣ ಶೆಟ್ಟಿ, 17ನೇ ಚೇರ್ಕಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಹರೀಶ್‌ ಶೆಟ್ಟಿ, ಕಲ್ಯಾಣಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್‌, ಗೆಳೆಯರ ಬಳಗದ ಅಧ್ಯಕ್ಷ ರಾಜೇಶ್‌, ಗೌರವಾಧ್ಯಕ್ಷ ಪ್ರಕಾಶ್‌, ಗಾಯತ್ರಿ, ಗೀತ ಶೆಟ್ಟಿ, ಸಂದೇಶ್‌, ರೋಹಿತ್‌, ಸ್ಥಾನೀಯ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಪಂಚಾಯತ್‌ ಸದಸ್ಯರಾದ ನಾಗರಾಜ್‌, ಇಂದುಮತಿ, ಯಶೋದಾ, ನವೀನ್‌ ಕುಮಾರ್‌, ಸತೀಶ್‌ ನಾಯಕ್‌, ವಿಷ್ಣು ಕುಮಾರ್‌, ಸಂಧ್ಯಾ ರಮೇಶ್‌, ರಾಧಾಕೃಷ್ಣ ಮೆಂಡನ್‌ ಮಲ್ಪೆ, ರಾಮ್‌ರಾಜ್‌ ಕಿದಿಯೂರು, ಜಗದೀಶ್‌ ಶೆಟ್ಟಿ, ಗಿರೀಶ್‌ ಅಮೀನ್‌, ಸುಂದರ್‌ ಪೂಜಾರಿ, ರಾಜೀವ ಪೂಜಾರಿ, ನವೀನ್‌ ಕುಂದರ್‌, ಅಕ್ಷಯ್‌, ಮಹೇಶ್‌, ನಿತಿನ್‌ ಬಂಗೇರ, ಅನಿಲ್‌ ತಿಂಗಳಾಯ, ಆಕಾಶ್‌ ಪೆರಂಪಳ್ಳಿ, ಪ್ರಜ್ವಲ್‌ ಕೋಟ್ಯಾನ್‌, ವಿಷ್ಣು ಪೂಜಾರಿ, ಸುಜಿತ್‌ ಕಪ್ಪೆಟ್ಟು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next