Advertisement

ಪಲಿಮಾರು: ಗಡಿ ದಾಟಲು ಯತ್ನ, ಗೋಡೆ ಕಟ್ಟಲು ನಿರ್ಧಾರ

01:03 PM Apr 13, 2020 | sudhir |

ಪಡುಬಿದ್ರಿ: ಜಿಲ್ಲಾ ಗಡಿಭಾಗವನ್ನು ದಾಟಿ ಬರಲು ಕರ್ನಿರೆ(ದ.ಕ.) ಜಿಲ್ಲಾ ಭಾಗದ ದ್ವಿಚಕ್ರ ಸವಾರ ಯುವಕರು ಹವಣಿಸುತ್ತಿರುವುದು ವರದಿಯಾಗಿದೆ.

Advertisement

ಕೆಂಪು ಮಣ್ಣ ರಾಶಿಯನ್ನೇ ಸರಿಸಿ ಅದನ್ನೇರಿ ಉಡುಪಿಯ ಭಾಗವಾದ ಪಲಿಮಾರು ಗ್ರಾಮವನ್ನು ಪ್ರವೇಶಿಸಲು ಆತುರಾಗಿರುವುದನ್ನು ಮನಗಂಡ ಕಾಪು ತಹಶೀಲ್ದಾರ್‌ಮಹಮ್ಮದ್‌ ಐಸಾಕ್‌ ಮತ್ತೆ ಗೋಡೆ ಕಟ್ಟಲು ಪಲಿಮಾರು ಗ್ರಾ. ಪಂ. ಗೆ ಸೂಚಿಸಿದ್ದಾರೆಂದು ಪಲಿಮಾರು ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಹೇಳಿದರು.

ಹೆದ್ದಾರಿ ಮೂಲಕ ಸಂಚರಿಸಲು ಹಲವರಿಗೆ ಕಷ್ಟವೆನಿಸಿದ್ದು ಹಲವಾರು ಘನವಾಹನಗಳ ಸಹಿತ ವಾಹನ ಸವಾರರು ಕರ್ನಿರೆ ಸೇತುವೆ ದಾಟಿ ಉಡುಪಿ ಜಿಲ್ಲೆಗೆ ಬರುತ್ತಿದ್ದು ರಸ್ತೆ ಹಾನಿ ಗೊಳಗಾಗುವುದೆನ್ನುವ ಭೀತಿಯಿಂದ ಇದೀಗ ಉಭಯ ಜಿಲ್ಲೆಯ ಈ ಗಡಿಯನ್ನು ಮಣ್ಣು ಪೇರಿಸಿ ಬಂದ್‌ ಮಾಡಲಾಗಿದೆ. ಆದರೆ ಅದರ ನಡುವೆಯೂ ತಮ್ಮ ದ್ವಿಚಕ್ರವಾಹನದ ಮೂಲಕ ನುಸುಳಲು ಯತ್ನಿಸಿದ ಪರಿಣಾಮವಾಗಿ ನಾಳೆ ಪಲಿಮಾರು ಗ್ರಾ. ಪಂ. ಹೊಲೋ ಬ್ಲಾಕ್‌ಗಳ ಗೋಡೆಯನ್ನು ಕಟ್ಟಬೇಕಾಗಿದೆ ಎಂದೂ ಜಿತೇಂದ್ರ ಫುರ್ಟಾಡೋ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next