ಕೆಜಿಎಫ್: ಕೊರೊನಾ ಸೋಂಕು ನಿಗ್ರಹಿಸಲು ಸಾಧ್ಯವಾಗದೆ ಆಸ್ಟ್ರೇಲಿಯಾ, ಅಮೆರಿಕ, ಇಂಗ್ಲೆಂಡ್ ಲಾಕ್‌ಡೌನ್ ಆಗುತ್ತಿವೆ. ಇದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕುಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಮತ್ತು ವಿಧಾನ ಪರಿಷತ್ ಸದಸ್ಯರವಿಕುಮಾರ್ ಹೇಳಿದರು.
ನಗರದ ಬಿಜಿಎಂಎಲ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿಮಾತನಾಡಿ, ಎಲ್ಲರೂ ಮಾಸ್ ತೆಗೆದುಮನೆ ಒಳಗೆ ಇಟ್ಟಿದ್ದಾರೆ. ಅದಕ್ಕೆ ರೋಗಉಲ½ಣಗೊಳ್ಳುತ್ತಿದೆ. ಸಾರ್ವಜನಿಕವಾಗಿಅವರು ಮಾಸ್ಕ್ ಬಳಕೆ ಬಿಟ್ಟಿದ್ದಾರೆ.ಗುಂಪುಗಳಲ್ಲಿ ಸಂಚರಿಸಿದ್ದರ ಪರಿಣಾಮವಾಗಿ ಮೂರನೇ ಅಲೆ ಬೇರೆ ದೇಶದಲ್ಲಿಹೆಚ್ಚಾಗುತ್ತಿದೆ. ಆದ್ದರಿಂದ ಲಾಕ್‌ಡೌನ್‌ಆಗಿದೆ ಎಂದು ವಿವರಿಸಿದರು.
ವೈದ್ಯರಿಗೆ ಆಸ್ಪತ್ರೆಯೇ ಮನೆ: ಒಂದನೇಬಾರಿಗೆ ಲಾಕ್‌ಡೌನ್ ಆದಾಗ ನಾವುರೇಷನ್ ಕಿಟ್ ಕೊಡಬೇಕಾಯಿತು.ಒಂದು ವೇಳೆ ನಮ್ಮ ದೇಶಕ್ಕೆ ಕೂಡಮೂರನೇ ಅಲೆ ಬಂದರೆ, ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಅರಿಯಬೇಕು.ಕೊರೊನಾ ನಿಗ್ರಹಿಸಲು ವೈದ್ಯಕೀಯಸಿಬ್ಬಂದಿಯ ಪಾಲು ದೊಡ್ಡದು. ಅವರನ್ನುದೇವರಂತೆ ಪೂಜಿಸಬೇಕು. ಮನೆಯನ್ನುಮರೆತು, ಆಸ್ಪತ್ರೆಯನ್ನೇ ಮನೆಯನ್ನಾಗಿಮಾಡಿಕೊಂಡಿದ್ದರು ಎಂದು ಹೇಳಿದರು.
ಮೈಮರೆಯುವುದು ಬೇಡ: ಎರಡನೇಅಲೆ ಬಂದಾಗ ಕೊಂಚ ನಿರಾಳವಾದರು.ಇಡೀ ದೇಶದಲ್ಲಿ44.74ಕೋಟಿ ಜನರಿಗೆಲಸಿಕೆ ಹಾಕಲಾಗಿದೆ. ಇನ್ನೂ 45 ಕೋಟಿಆಗುವ ತನಕ ನಾವು ಎಚ್ಚರಿಕೆವಹಿಸಬೇಕು. 135 ಕೋಟಿ ಜನರ ಪೈಕಿಶೇ.60 ಲಸಿಕೆ ಹಾಕಿಸಿಕೊಳ್ಳುವ ತನಕಮೈಮರೆಯಬಾರದು ಎಂದರು.ಬಿಜಿಎಂಎಲ್ ಆಸ್ಪತ್ರೆ 21 ವರ್ಷನಂತರ ಕೋವಿಡ್‌ನಿಂದ ಪುನರಾರಂಭವಾಯಿತು.
ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರುಅಭಿನಂದನೆಗೆ ಅರ್ಹರು ಎಂದರು.ಹಳ್ಳಿಗೆ ಹೋಗಿ ಪ್ರಚಾರ ಮಾಡಿ:ಒಬ್ಬರು ನಾಲ್ಕು ನೂರು ಜನರಿಗೆಸೋಂಕು ಹರಡಬಹುದು. ಆದ್ದರಿಂದಹುಷಾರಾಗಿರಬೇಕು. ಮಕ್ಕಳು ಶಾಲಾವಂಚಿತರಾಗಿದ್ದಾರೆ. ಶಿಕ್ಷಕರಿಂದ ವಿಮುಖರಾದರೆ, ಶಾಲೆಗೆ ಹೋಗದೆ ಪಾಸ್‌ಆಗುತ್ತೇವೆ ಎಂಬ ಭಾವನೆ ಮಕ್ಕಳಲ್ಲಿಬಂದಿದೆ. ಪದೇ ಪದೆ ಪುಸ್ತಕ ಓದುತ್ತಿದ್ದರೆಜ್ಞಾನ ಬೆಳೆಯುತ್ತದೆ. ಇದು ದೊಡ್ಡ ಪರಿಣಾಮ ಬೀರುತ್ತಿದೆ. ಕೋವಿಡ್ ಲಸಿಕೆದೊಡ್ಡ ಪ್ರಮಾಣದಲ್ಲಿ ಹಾಕಿಸಿಕೊಳ್ಳಬೇಕು. ಪ್ರತಿ ಹಳ್ಳಿಗೆ ಕಾರ್ಯಕರ್ತರು ಹೋಗಿ ಪ್ರಚಾರ ಮಾಡಬೇಕುಎಂದು ಹೇಳಿದರು.