Advertisement

2ನೇ ದಿನವೂ ಗ್ರಾಪಂ ಕಚೇರಿಗೆ ಬೀಗ ಹಾಕಿ ಧರಣಿ

06:22 PM Jun 17, 2022 | Team Udayavani |

ಬಾಗೇಪಲ್ಲಿ: ತಾಲೂಕಿನ ಗೊರ್ತಪಲ್ಲಿ ಗ್ರಾಪಂನ ವಿವಿಧ ಯೋಜನೆಗಳ ಅನುದಾನದಲ್ಲಿ ನಡೆದಿರುವ ಅವ್ಯವಹಾರವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಗ್ರಾಪಂ ಸದಸ್ಯರು ಹಾಗೂ ನಾಗರಿಕರು ಗ್ರಾಪಂ ಕಾರ್ಯಾಲಯಕ್ಕೆ 2ನೇ ದಿನವೂ ಬೀಗ ಜಡಿದು ಪ್ರತಿಭಟನೆ ಮುಂದುವರಿಸಿ ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧನು ರೇಣುಕಾಗೆ ಮನವಿಪತ್ರ ಸಲ್ಲಿಸಿದರು.

Advertisement

ಕೆಡಿಪಿ ಸದಸ್ಯ ಆರ್‌.ವೆಂಕಟೇಶ್‌ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ತಾಲೂಕಿನ ಗೂಳೂರು ಹೋಬಳಿಯ ಗೊರ್ತಪಲ್ಲಿ ಗ್ರಾಪಂ 15ನೇ ಹಣಕಾಸು ಯೋಜನೆ, ನಿರ್ಬಂಧಿತ, ಅನಿರ್ಬಂಧಿತ, ವಿದ್ಯುತ್‌ ದೀಪಗಳ ಖರೀದಿ, ಚರಂಡಿ ಅವ್ಯವಸ್ಥೆ ಹಾಗೂ ನರೇಗಾ ಸೇರಿದಂತೆ ವಿವಿಧ ಯೋಜನೆಯಡಿಯಲ್ಲಿ ಕಳೆದ 2 ವರ್ಷಗಳಿಂದ 65 ಲಕ್ಷ ರೂಗಳ ಅವ್ಯವಹಾರ ನಡೆದಿದೆ. ಅನುದಾನ ಕರ್ಚು ಮಾಡಿರುವ ಬಗ್ಗೆ ಲೆಕ್ಕ ಪುಸ್ತಕ ಹಾಗೂ ರಸೀದಿಗಳನ್ನು ನೀಡುವಂತೆ
ಗ್ರಾಪಂ ಸದಸ್ಯರು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ನಮ್ಮ ಯಾವುದೇ ಲೆಕ್ಕಪುಸ್ತುಕ ಹಾಗೂ ರಸೀದಿಗಳು ಇಲ್ಲವೆಂದು ಮಾಹಿತಿ ನೀಡಿದ್ದಾರೆ. 2 ವರ್ಷದಿಂದ ಆಡಿಟ್‌ ಮಾಡಿಸಿಲ್ಲ.

ಗ್ರಾಪಂ ಅನುದಾನದಲ್ಲಿ ಅವ್ಯವಹಾರ ನಡೆದಿರುವ ದಾಖಲೆ ಸಮೇತ ಜಿಪಂ ತಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ತನಿಖೆಗೆ ಮುಂದಾಗಿಲ್ಲ ಅದ್ದರಿಂದ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಬೇಕಾಯಿತು ಎಂದು ಪ್ರತಿಭಟನಾ ಕಾರರು ಅಧಿಕಾರಿಗಳನ್ನು ಎಚ್ಚರಿಕೆ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರರೆಡ್ಡಿ, ಗ್ರಾಪಂ ಸದಸ್ಯರಾದ ಅಂಜಿನಪ್ಪ, ಉಮಾ ನಾಗಭೂಷಣ, ಮುಖಂಡರಾದ ಈಶ್ವರಪ್ಪ, ಸುರೇಂದ್ರ, ರಂಗಪ್ಪ, ರಾಮಚಂದ್ರಪ್ಪ,
ವೆಂಟಕರಾಮಪ್ಪ, ಜಿ.ವಿ.ನರಸಿಂಹಪ್ಪ, ವಿ.ಗಂಗಪ್ಪ, ರಾಜು, ರಂಗಾರೆಡ್ಡಿ ಮತ್ತಿತರರು ಇದ್ದರು.

10 ದಿನದೊಳಗೆ ಜಿಪಂ ಸಿಇಒಗೆ ವರದಿ
ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧುನುರೇಣುಕಾ ಮನವಿಪತ್ರ ಸ್ವೀಕರಿಸಿ ಮಾತನಾಡಿ, ಜಿಪಂ ಸಿಇಒ ಪರವಾಗಿ ನಾವು ಬಂದಿದ್ದು, ಗ್ರಾಪಂ ಸದಸ್ಯರು ಸಲ್ಲಿಸಿರುವ ದೂರಿನಂತೆ ಕಚೇರಿಯ ದಾಖಲೆಗಳನ್ನು ಪರೀಶಿಲಿಸಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು 2020 ಮತ್ತು 2021 ನೇ ಸಾಲಿನಲ್ಲಿ ನಡೆದಿರುವ ಹಣಕಾಸು ವ್ಯವಹಾರದ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಲು ವಿಫಲರಾಗಿದ್ದು, ತನಿಖೆ ನಡೆಸಿ 10 ದಿನದೊಳಗೆ ಜಿಪಂ ಸಿಇಒಗೆ ವರದಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next