Advertisement
ಜು. 31ರ ವರೆಗೆ ಶಾಲಾ-ಕಾಲೇಜು, ತರಬೇತಿ ಸಂಸ್ಥೆಗಳು ತೆರೆಯುವುದಿಲ್ಲ. ಚಿತ್ರಮಂದಿರ, ಜಿಮ್, ಈಜುಕೊಳ, ಮೆಟ್ರೋ ಸೇವೆಯೂ ಇರುವುದಿಲ್ಲ. ಲಾಕ್‌ಡೌನ್ ಇಲ್ಲದ ಸಮಯದಲ್ಲಿ ವಿವಾಹ ಸಮಾರಂಭಕ್ಕೆ ಅವಕಾಶ ವಿದ್ದು, 50 ಜನ ಪಾಲ್ಗೊಳ್ಳಲು ಮಾತ್ರ ಅನುಮತಿ. ರವಿವಾರದ ಲಾಕ್‌ಡೌನ್ ಸಂದರ್ಭ ಮೊದಲೇ ನಿಗದಿ ಯಾಗಿರುವ ವಿವಾಹಕ್ಕೆ ಮಾತ್ರ ಅನುಮತಿಯಿದೆ. ಅದೇ ರೀತಿ ಅಂತ್ಯಕ್ರಿಯೆಗೆ 20 ಮಂದಿಗೆ ಮಾತ್ರ ಅವಕಾಶ ಇರಲಿದೆ.
ಅನ್‌ಲಾಕ್ ಹಂತ-2ರ ಮಾರ್ಗ ಸೂಚಿ ಅನುಷ್ಠಾನ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
Related Articles
ಸಾರ್ವಜನಿಕ ಸ್ಥಳ, ಸಂಚಾರ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಬೆಂಗಳೂರು ಸಹಿತ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂ. ದಂಡ, ರಾಜ್ಯದ ಇತರೆಡೆ ದಂಡದ ಮೊತ್ತ 100 ರೂ. ನಿಗದಿಪಡಿಸಲಾಗಿದೆ.
Advertisement