Advertisement

ಧಾರವಾಡ : ಲಾಕ್‌ಡೌನ್‌ ಮಾರ್ಗಸೂಚಿ ಪೀಕಲಾಟ

03:13 PM May 09, 2021 | Team Udayavani |

ವರದಿ : ಶಿವಶಂಕರ ಕಂಠಿ

Advertisement

ಹುಬ್ಬಳ್ಳಿ: ರಾಜ್ಯ ಸರಕಾರವು ಮೇ 10ರಿಂದ ಹದಿನಾಲ್ಕು ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದು, ಇದರಿಂದ ಎಪಿಎಂಸಿ ಅ ಧಿಕಾರಿಗಳು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಗೊಂದಲಕ್ಕೀಡಾಗಿದ್ದಾರೆ. ಸರಕಾರ ಒಂದೆಡೆ ಲಾಕ್‌ಡೌನ್‌ ವೇಳೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದಿದೆ. ಹೀಗಾಗಿ ವ್ಯಾಪಾರಸ್ಥರು ಎಪಿಎಂಸಿಗೆ ಬರಲು ನಮಗೆ ಪಾಸ್‌ ಕೊಡಿ ಎಂದು ಎಪಿಎಂಸಿ ಅ ಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಸರಕಾರ ತನ್ನ ಮಾರ್ಗಸೂಚಿಯಲ್ಲಿ ಎಲ್ಲೂ ಎಪಿಎಂಸಿ ಚಾಲೂ ಇದೆ ಎಂದು ತಿಳಿಸಿಲ್ಲ.

ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆದರೆ ಎಪಿಎಂಸಿ ವ್ಯಾಪಾರಸ್ಥರು ಮಾರಬಹುದು ಎಂದಿಲ್ಲ. ಯಾರಿಗೂ ಪಾಸ್‌ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ದೇಶಿಸಿದೆ. ಹೀಗಾಗಿ ವ್ಯಾಪಾರಸ್ಥರು ನಮಗೆ ಯಾವ ಗುರುತಿನ ಪತ್ರ ಇರುತ್ತವೆ? ನಾವು ಹೇಗೆ ಮಾರುಕಟ್ಟೆಗೆ ಬರಬೇಕೆಂದು ಅಧಿ ಕಾರಿಗಳೊಂದಿಗೆ ತಕರಾರು ಮಾಡುತ್ತಿದ್ದಾರೆ.

ಸರಕಾರ ಇನ್ನೊಂದೆಡೆ ತಾನು ಹೊರಡಿಸಿದ ಮಾರ್ಗ ಸೂಚಿಯಲ್ಲಿ ತರಕಾರಿ ಹೊರತುಪಡಿಸಿ ಯಾವುದೇ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲ. ತಳ್ಳುಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ. ಆದರೆ ಅದು ಎಪಿಎಂಸಿಯಲ್ಲಿ ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಎಂದು ಹೇಳಿಲ್ಲ. ಅದು ಹೊರಡಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟ ನಿರ್ದೇಶನ ಕೊಟ್ಟಿಲ್ಲ. ಜನತಾ ಕರ್ಫ್ಯೂಗಿಂತಲೂ ಹೆಚ್ಚಿನ ಸವಲತ್ತುಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ನೀಡಿದೆ. ಇದರಿಂದ ಅಧಿ ಕಾರಿಗಳು ಸಹಿತ ಸರಕಾರದ ಹೊಸ ಮಾರ್ಗಸೂಚಿಯಿಂದ ಗೊಂದಲಕ್ಕೀಡಾಗಿದ್ದಾರೆ. ಇತ್ತ ವ್ಯಾಪಾರಸ್ಥರು ಸಹಿತ 14 ದಿನಗಳ ಕಾಲ ತಾವೇನು ಮಾಡಬೇಕೆಂಬ ಸಂಕಷ್ಟದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next