Advertisement

ಗೋಡಂಬಿ ಮಾರುಕಟ್ಟೆ ಕುಸಿತದಿಂದ ರೈತ ಕಂಗಾಲು

05:58 PM May 02, 2020 | Suhan S |

ಖಾನಾಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಾಲೂಕಿನ ಗೋಡಂಬಿ (ಕಾಜು) ಬೆಳೆ ಸಂಕಷ್ಟಕ್ಕೆ ಸಿಲುಕಿದೆ. ಲಾಕ್‌ ಡೌನ್‌ದಿಂದ ಕಾಜು ಬೆಳೆ ಬೆಲೆ ಕೂಡ ಕುಸಿದಿದ್ದು, ರೈತ ಕಂಗಾಲಾಗಿದ್ದಾನೆ. ತಾಲೂಕಿನಲ್ಲಿ 3 ಸಾವಿರ ಹೆಕ್ಟೇರ್‌ ಕಾಜು ಬೆಳೆ ಇದ್ದು, ಸರಾಸರಿ 40 ಸಾವಿರ ಟನ್‌ ಕಾಜು ಸಂಗ್ರಹವಾಗುತ್ತದೆ. ಇದರ ಪ್ರಮುಖ ಮಾರುಕಟ್ಟೆ ಸ್ಥಳೀಯ ಮತ್ತು ಹೊರ ರಾಜ್ಯಗಳೇ ಇದ್ದು, ಸಾಗಾಣಿಕೆಗೆ ಸದ್ಯಕ್ಕೆ ಮಾರ್ಗವೇ ಇಲ್ಲದಂತಾಗಿದೆ. ಕಳೆದ ಎರಡು ವರ್ಷದ ಹಿಂದೆ 150 ರೂ. ನಷ್ಟು ಇದ್ದ ಕಾಜು ದರ ಇದೀಗ ಕೇವಲ 60 ರೂ. ಗೆ ಕುಸಿದಿದೆ.

Advertisement

ತಾಲೂಕಿನ ಜಾಂಬೋಟಿ, ಉಚಾವಡೆ, ನಿಲಾವಡೆ, ಬೆ„ಲೂರು, ಅಬ್ಟಾನಟ್ಟಿ ಭಾಗದಲ್ಲಿ ಹೆಚ್ಚಾಗಿ ಗೋಡಂಬಿ ಬೆಳೆಯಲಾಗುತ್ತದೆ. ಇನ್ನು ಮಾಡಿಗುಂಜಿ ಮತ್ತು ಬೀಡಿ ಭಾಗದಲ್ಲಿ ಕೂಡ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಇದೆ. ಇದಕ್ಕೆ ಮಂಗಳೂರು, ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆಯಾಗಿವೆ. ಸ್ಥಳೀಯವಾಗಿ 11 ಕಾರ್ಖಾನೆಗಳು ಕಾಜು ಸಂಸ್ಕರಣೆ ಮಾಡುತ್ತಿದ್ದರೂ ಅಗತ್ಯ ಕಚ್ಚಾ ಸಾಮಗ್ರಿ ಇಲ್ಲದೇ ಮುಚ್ಚಿವೆ. ಮತ್ತೆ ಇವುಗಳನ್ನು ಆರಂಭಿಸಲು ತೋಟಗಾರಿಕೆ ಇಲಾಖೆ ಪ್ರಯತ್ನಿಸುತ್ತಿದೆ. ಆದರೆ ಅಗತ್ಯ ಕಚ್ಚಾ ವಸ್ತು ಹೊರ ರಾಜ್ಯಗಳಿಂದ ಬರಬೇಕಿರುವುದರಿಂದ ಅವರೂ ಅಸಹಾಯಕರಾಗಿದ್ದಾರೆ. ಜಾಂಬೋಟಿ ಮತ್ತು ಪಾರಿಶ್ವಾಡ ಭಾಗದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಸದ್ಯ ಕಾಜು ಕೇಳುವವರು ಇಲ್ಲ. ಸದ್ಯ ಹೋಟೆಲ್‌,ಐಸ್‌ಕ್ರೀಮ ತಯಾರಿಕಾ ಘಟಕಗಳು ಮತ್ತು ಬೇಕರಿಗಳು ಬಂದಾಗಿದ್ದರಿಂದ ಮಾರುಕಟ್ಟೆ ಸಹಜವಾಗಿಯೆ ಕುಸಿದಿದೆ. ಕಾಜು ನಂಬಿದ 2 ಸಾವಿರ ಜನರ ಬದುಕು ಅತಂತ್ರ ಸ್ಥಿತಿಯಾಗಿದೆ.  ರೈತರು ಕಾಜು ಬೆಳೆಗೆ ಯೋಗ್ಯ ದರ ಬರಬೇಕಾದರೆ ಸ್ವಲ್ಪ ದಿನ ಕಾಯ ಬೇಕಷ್ಟೆ.

ಕಾಜುಗೆ ಸದ್ಯ ಮಾರುಕಟ್ಟೆಯಲ್ಲಿ ದರ ಇಲ್ಲ. ಅದಕ್ಕೆ ರೈತರಿಗೆ ಸಂಗ್ರಹಿಸಿ ಇಡಲು ತಿಳಿಸಿದ್ದು, ನಾಲ್ಕು ತಿಂಗಳು ಇಟ್ಟರೂ ಅದು ಕೆಡುವುದಿಲ್ಲ. ವ್ಯವಹಾರ ಆರಂಭವಾದ ನಂತರ ಇದಕ್ಕೆ ಮಾರುಕಟ್ಟೆ ಸಿಗಬಹುದು. -ಶಮಂತ ಕೆ.ಎನ್‌., ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ-ಖಾನಾಪುರ

Advertisement

Udayavani is now on Telegram. Click here to join our channel and stay updated with the latest news.

Next