Advertisement

ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡಿ: ಬಣಕಾರ್‌

09:52 PM May 21, 2021 | Team Udayavani |

ಜಗಳೂರು: ಆಶಾ ಕಾರ್ಯಕರ್ತೆಯರು ಪಟ್ಟಣಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿನ ಮನೆಮನೆಗೆ ಭೇಟಿ ಮಾಡಿ ಕೊರೋನ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿ ಮಾಡಬೇಕು.ಜತೆಗೆ ಸೋಂಕು ತಗುಲಿರುವ ಖಚಿತ ಮಾರ್ಗವನ್ನು ಪತ್ತೆ ಮಾಡಬೇಕೆಂದು ಪಪಂ ಮುಖ್ಯಾಧಿಕಾರಿ ರಾಜುಡಿ. ಬಣಕಾರ್‌ ಸೂಚಿಸಿದರು.

Advertisement

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಸಿಬ್ಬಂ ದಿಗಳ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಧಿಕಾರಿಗಳ ಆದೇಶದಂತೆ ಕೊರೊನಾ ಸೋಂಕುತಡೆಯಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.ಈಗಾಗಲೇ ಸೋಂಕು ನಿವಾರಕ ದ್ರಾವಣ ಸಿಂಪಡಿಸುವಕಾರ್ಯ ನಡೆಯುತ್ತಿದೆ.

ಹೋಂ ಐಸೋಲೇಷನ್‌ನಲ್ಲಿರುವಂತಹ ಸೋಂಕಿತರ ದಿನನಿತ್ಯದ ಆರೋಗ್ಯಹಾಗೂ ಮನೆಯಲ್ಲಿ ವಾಸ ಮಾಡಲು ಇರುವಮೂಲ ಸೌಲಭ್ಯಗಳನ್ನು ಪರಿಶೀಲಿಸಲಾಗುತ್ತಿದೆ.ಮನೆಯಲ್ಲಿ ಪ್ರತ್ಯೇಕ ಶೌಚಾಲಯ, ಕೊಠಡಿಇಲ್ಲದಿದ್ದರೆ ಅಂಥವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಿಕೊಡಿ ಎಂದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಸಿಬ್ಬಂದಿ ಯೊಂದಿಗೆ ಪ್ರತಿ ಮನೆಗೆ ಭೇಟಿ ನೀಡಿಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತುರ್ತುಪರಿಸ್ಥಿತಿಯ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿಪಟ್ಟಣದಲ್ಲಿ ಸೋಂಕು ನಿವಾರಿಸಲು ಶ್ರಮಿಸಬೇಕೆಂದುತಿಳಿಸಿದರು. ಆರೋಗ್ಯ ನಿರೀಕ್ಷಕ ಕಿಫಾಯತ್‌,ಕಂದಾಯ ನಿರೀಕ್ಷಕ ಸಂತೋಷ್‌ ಸೇರಿದಂತೆ ಆಶಾಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next