Advertisement

ಚಿಕ್ಕಮಗಳೂರು: ಬಾರ್‌ ಮುಂದೆ ಹೆಚ್ಚಾದ ಅಪಘಾತ; ಬಾರ್‌ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

06:46 PM Aug 13, 2022 | Team Udayavani |

ಚಿಕ್ಕಮಗಳೂರು: ಬಾರ್‌ ಮುಂದೆ ಅಪಘಾತ ಹೆಚ್ಚಾಗುತ್ತಿದೆ. ಕೂಡಲೇ ಬಾರ್‌ ಸ್ಥಳಾಂತರ ಮಾಡಲು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಮೀಪದ ಭಕ್ತರಹಳ್ಳಿಯಲ್ಲಿ ನಡೆದಿದೆ.

Advertisement

ಬಾರ್‌ ಓಪನ್‌ ಆದ ಒಂದೇ ವರ್ಷದಲ್ಲಿ ಬಾರ್ ಮುಂದೆಯೇ ಏಳಕ್ಕೂ ಹೆಚ್ಚು ಜನ ಅಪಘಾತದಿಂದ ಸಾವನ್ನಪ್ಪಿದ್ದಾರೆ.  ಎರಡು ದಿನದ ಹಿಂದೆಯಷ್ಟೇ ಬಾರ್ ನಿಂದ ಹೊರ ಬಂದ ಇಬ್ಬರು ಯುವಕರಿಗೆ‌, ಬಾರ್‌ ಮುಂದೆಯೇ ಟಿಪ್ಪರ್‌ ಲಾರಿಯೊಂದು ಢಿಕ್ಕಿ ಹೊಡೆದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆ ಸ್ಥಳೀಯರನ್ನು ರೊಚ್ಚಿಗೇಳುವಂತೆ ಮಾಡಿದೆ. ತಕ್ಷಣ ಬಾರ್‌ ಬಂದ್‌ ಮಾಡಬೇಕೆಂದು ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ. ಈ ವೇಳೆ, ಬಾರ್ ಮಾಲೀಕರು, ಸ್ಥಳಿಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ.

ಇದನ್ನೂ ಓದಿ: ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ: ತನ್ನದೇ ಪಡಿತರ ಚೀಟಿ ರದ್ದಿಗೆ ಮೊರೆ ಹೋದ ಪತಿ!

ಸ್ಥಳಕ್ಕೆ ಅಬಕಾರಿ ಇಲಾಖೆ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪ್ರತಿಭಟನಾನಿರತರನ್ನು ಸಮಾಧಾನ ಮಾಡಿದ್ದಾರೆ. ಮುಂದಿನ 10 ದಿನಗಳವರೆಗೆ ಬಾರ್ ಓಪನ್ ಮಾಡದಂತೆ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

10 ದಿನಗಳ ಒಳಗೆ ಬಾರನ್ನು ಸ್ಥಳಾಂತರಿಸುವುದಾಗಿ ಸ್ಥಳಿಯರಿಗೆ ಭರವಸೆ ನೀಡಿದ್ದಾರೆ. ಸ್ಥಳಿಯರು ಕೂಡ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 10 ದಿನಗಳಲ್ಲಿ ಬಾರ್ ಕ್ಲೋಸ್ ಆಗಬೇಕು ಅಥವ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಬಾರ್ ಮತ್ತೆ ಓಪನ್ ಆದರೆ ಹೋರಾಟದ ರೂಪುರೇಷೆಯನ್ನು ಬದಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next