Advertisement

ರಸ್ತೆ ಗುಂಡಿಯಲ್ಲಿ ಶೆಟ್ಟರ ಭಾವಚಿತ್ರವಿಟ್ಟು ಪ್ರತಿಭಟನೆ

04:58 PM Sep 28, 2020 | Suhan S |

ಹುಬ್ಬಳ್ಳಿ: ತಮ್ಮ ಕಾಲೋನಿಯ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಪಾಲಿಕೆ ಸದಸ್ಯ ಮಹೇಶ ಬುರ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ಭಾವಚಿತ್ರಗಳನ್ನು ಗುಂಡಿಯಲ್ಲಿ ಇಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು.

Advertisement

ವಿದ್ಯಾನಗರದ ವಿದ್ಯಾವನ ಕಾಲೋನಿಯ ಹಿತವರ್ಧಕ ಸಂಘದ ವತಿಯಿಂದ ಸ್ಥಳೀಯರು ತಮ್ಮ ಕಾಲೋನಿಯ ರಸ್ತೆ ಗುಂಡಿಗಳ ಸುತ್ತಲೂ ರಂಗೋಲಿ ಬಿಡಿಸಿ ಗುಂಡಿಯಲ್ಲಿ ಹಾಗೂ ಕಸ ಹಾಕಿರುವ ತಿಪ್ಪೆಯಲ್ಲಿ ಇಬ್ಬರ ಭಾವಚಿತ್ರಗಳನ್ನಿಟ್ಟು ವಿನೂತನವಾಗಿ ಪ್ರತಿಭಟಿಸಿದರು. ಮೂರ್‍ನಾಲ್ಕು ವರ್ಷಗಳಿಂದ ರಸ್ತೆ ಹಾಗೂ ಒಳಚರಂಡಿಗಾಗಿ ಮನವಿ ಸಲ್ಲಿಸಿದರೂ ಕಾಲೋನಿಯ ಅಭಿವೃದ್ಧಿ ಮರೆತಿದ್ದು, ಜನಪ್ರತಿನಿಧಿಗಳನ್ನು ಎಚ್ಚರಿಸುವ ಕಾರಣದಿಂದ ಪ್ರತಿಭಟನೆ ಮಾಡಲಾಗಿದೆ ಎಂದು ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಸಂತೋಷ ಪವಾರ ಮಾತನಾಡಿ, ಮೂರ್‍ನಾಲ್ಕು ವರ್ಷಗಳಿಂದ ರಸ್ತೆ ಹಾಗೂ ಒಳಚರಂಡಿ ದುರಸ್ತಿ ಕುರಿತು ಜಗದೀಶ ಶೆಟ್ಟರ ಹಾಗೂ ಮಹೇಶ ಬುರ್ಲಿ ಅವರ ಗಮನಕ್ಕೆ ತರಲಾಗಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಕುರಿತು ತಿಳಿಸಿದರೂ ನಮಗೆ ಸಂಬಂಧವಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಕಾಲೋನಿಯ ಮಹಿಳೆಯರು ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳಿಗೆ ರಂಗೋಲಿ ಹಾಕಿದರು. ಗುಂಡಿಯಲ್ಲಿ ಅವರಿಬ್ಬರ ಭಾವಚಿತ್ರಗಳನ್ನು ನೆಟ್ಟು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿನಯ ಜಾದವ, ಶ್ರೀನಾಥ ಶಾನಭಾಗ, ರಾಘವ ಶೆಟ್ಟಿ, ವಿನೋದ ಕಾಟವೆ, ಪೀÅತಂ ಶೆಟ್ಟಿ, ವಿಜಯ ಕಾಟವೆ, ಪ್ರಶಾಂತ ಚಿತಾರೆ, ಲಕ್ಷ್ಮೀ ಮಹೇಂದ್ರಕರ, ರೂಪಾ ಪವಾರ, ಜಯ ಜಾದವ, ವಿನೋದಾ ಶೆಟ್ಟಿ ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next