Advertisement

ಹುಲಿ ಉಪಟಳಕ್ಕೆ  ಕಡಿವಾಣ ಹಾಕಿ

04:20 PM Feb 05, 2023 | Team Udayavani |

ಎಚ್‌.ಡಿ.ಕೋಟೆ: ಸುಮಾರು 15 ದಿನಗಳ ಹಿಂದೆ ಆದಿವಾಸಿ ಯುವಕನೊಬ್ಬನನ್ನು ಕೊಂದಿರುವುದೇ ಅಲ್ಲದೆ ಹಾಡಿಯಲ್ಲಿ ರಾಸುಗಳನ್ನು ಬಲಿ ಪಡೆಯುತ್ತಿರುವ ನರಭಕ್ಷಕ ಹುಲಿಯನ್ನುಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿ ಆದಿವಾಸಿಗರು ಬಳ್ಳೆ ಅರಣ್ಯ ಇಲಾಖೆ ಕಚೇರಿ ಎದುರಿನಲ್ಲಿ 2 ದಿನಗಳ ಹಿಂದಿನಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ವಿಷಯ ತಿಳಿಯುತ್ತಿದ್ದಂತೆಯೇ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳುಹಾಗೂ ತಾಲೂಕು ಗಿರಿಜನ ಅಭಿವೃದ್ಧಿ ಇಲಾಖೆಅಧಿಕಾರಿಗಳು ಆಗಮಿಸಿ ಹುಲಿ ಸೆರೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆಹಿಂಪಡೆಯುವಂತೆ ಮನವಿ ಮಾಡಿಕೊಂಡರೂಆದಿವಾಸಿ ಗರು ಹುಲಿ ಸ್ಥಳಾಂತರಿಸುವ ತನಕಪ್ರತಿಭಟನೆ ಕೈಬಿಡುವ ಮಾತೇ ಇಲ್ಲ ಎಂದುಪಟ್ಟು ಹಿಡಿದು ಕುಳಿತು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ.

ಏನದು ಘಟನೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯ ಬಳ್ಳೆ ಅರಣ್ಯದಲ್ಲಿ 15 ದಿನಗಳ ಹಿಂದೆ ಅರಣ್ಯಇಲಾಖೆ ಸಮೀಪದಲ್ಲಿಯೇ ಹುಲಿಯೊಂದು ಆದಿವಾಸಿ ಯುವಕ ಮಂಜು (17) ಎಂಬುವವನ್ನು ಬಲಿ ತೆಗೆದುಕೊಂಡಿತ್ತು. ಆಸಂದರ್ಭದಲ್ಲಿ ರೊಚ್ಚಿಗೆದ್ದ ಬಳ್ಳೆ ಹಾಡಿಯ ಆದಿವಾಸಿಗರು ಮತ್ತು ಆದಿವಾಸಿ ಮುಖಂಡರುಅರಣ್ಯ ಇಲಾಖೆ ಎದುರಿನಲ್ಲೇ ಮೈಸೂರುಮಾನಂದವಾಡಿ ರಸ್ತೆ ತಡೆ ನಡೆಸಿ ಹುಲಿಮನುಷ್ಯನನ್ನು ಕೊಂದು ತಿಂದಿರುವುದರಿಂದಅದನ್ನು ಸ್ಥಳಾಂತರಿಸುವಂತೆ ಪ್ರತಿಭಟನೆ ನಡೆಸಿದ್ದರು.

ಮಧ್ಯ ಪ್ರವೇಶಿಸಿದ ವಿವಿಧ ಇಲಾಖೆಗಳಅಧಿಕಾರಿಗಳು ಹುಲಿಯನ್ನು ಸ್ಥಳಾಂತರಿಸುವಭರವಸೆ ನೀಡಿದ ಬಳಿಕಷ್ಟೇ ಪ್ರತಿಭಟನೆಕೈಬಿಡಲಾಗಿತ್ತು. ಮುಂದುವರಿದು ಅದೇ ಹುಲಿಹಾಡಿಯಲ್ಲಿ ಇಲ್ಲಿಯ ತನಕ 4 ಹಸುಗಳನ್ನುಕೊಂದು ತಿಂದಿದೆ. ಇದರಿಂದ ಭಯಬೀತರಾದಹಾಡಿಯ ಮಂದಿ ನಮ್ಮ ಜೀವಕ್ಕೂ ರಕ್ಷಣೆ ಇಲ್ಲ, ಕೂಡಲೆ ನರಭಕ್ಷ ಹುಲಿಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದುಶುಕ್ರವಾರದಿಂದ ಅರಣ್ಯ ಇಲಾಖೆ ಎದುರಿನಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಶುಕ್ರವಾರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಹಿರಿಯ ಅಧಿಕಾರಿಗಳು ಮತ್ತು ತಾಲೂಕುಸಮಾಜ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿನಾರಾಯಣ ಸ್ವಾಮಿ ಹುಲಿ ಸೆರೆಗೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡರೂಮನವಿಗೆ ಕ್ಯಾರೆ ಅನ್ನದ ಆದಿವಾಸಿಗರು ಇಡೀ ರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಕಳೆದು ಶನಿವಾರಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ. ಹುಲಿಸೆರೆ ಹಿಡಿದು ಸ್ಥಳಾಂತರಿಸುವ ತನಕ ಪ್ರತಿಭಟನೆಕೈಬಿಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Advertisement

ಆದಿವಾಸಿ ಮುಖಂಡರಾದ ರಮೇಶ,ಮಾಸ್ತಿ, ರಾಮು, ಆನೆಮಾಳ ಅಯ್ಯಪ್ಪ, ಹರೀಶ,ಅಂಬಿಕಾ, ಜಯ, ಗಂಗೆ, ಮಂಜುಳಾ, ರವಿ,ಕುಮಾರಿ, ದೇವಿ, ಶಾಂತ, ಬಿಂದು ಸುಶ್ಮಿತ,ಸುಶೀಲ, ಅಪ್ಪು, ಸಣ್ಣಪ್ಪ, ಅನಿಲ್‌ ಕುಮಾರ್‌, ಮಾರ, ಚಿಕ್ಕಣ್ಣ ಪ್ರತಿಭಟನೆ ನಡೆಯಿತು.

ನರಭಕ್ಷಕ ಹುಲಿಯಾದರೆ ಖಂಡಿತ ಕ್ರಮ :

ಮಂಜು ಮೇಲೆ ದಾಳಿ ನಡೆಸಿ ಸಾಯಿಸಿದ ಹುಲಿ ಚಲನವಲನ ಗಮನಿಸಲು ಸ್ಥಳದಲ್ಲಿ ಸಿ.ಸಿಕ್ಯಾಮೆರಾಗಳನ್ನು ಅಳವಡಿಸಿದ್ದರೂ ಹುಲಿಯ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ.ಹುಲಿ ಇರುವುದು ಖಾತರಿ ಪಟ್ಟರೆ ಸೆರೆ ಹಿಡಿದು ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಹುಲಿ ಮನುಷ್ಯನನ್ನು ಭಕ್ಷಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟರೆ ಹುಲಿ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನೀಡಿದರೂ ಇದಕ್ಕೆ ಒಪ್ಪದ ಆದಿವಾಸಿಗರು 2ನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next