ಪಣಜಿ: ಗೋವಾ ರಾಜ್ಯ ಪ್ರವಾಸಿ ಸೀಜನ್ ಮುಕ್ತಾಯಗೊಂಡ ನಂತರ ಇದೀಗ ದೇಶೀಯ ಪ್ರವಾಸಿಗರು ಮಳೆಗಾಲದ ಸಂದರ್ಭದಲ್ಲಿ ಆನಂದ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸುತ್ತಿದ್ದಾರೆ. ಗೋವಾದ ಪ್ರವಾಸಿ ತಾಣಗಳಲ್ಲಿ ಸದ್ಯ ದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.
ಪ್ರತಿ ವರ್ಷ ಅಕ್ಟೋಬರ್ ತಿಂಗಳಿಂದ ಏಪ್ರಿಲ್ ತಿಂಗಳ ವರೆಗೆ ಗೋವಾ ಪ್ರವಾಸಿ ಸೀಜನ್ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ದೇಶಿಯ ಪ್ರವಾಸೀ ಸೀಜನ್ ಆರಂಭಗೊಳ್ಳುತ್ತದೆ. ಮಳೆಗಾಲದ ಸಂದರ್ಭದಲ್ಲಿ ಹಲವು ಸ್ಥಳಗಳಲ್ಲಿ ಸೃಷ್ಟಿಯಾಗುವ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದರಿಂದಾಗಿ ಗೋವಾ ರಾಜ್ಯವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ.
ಸದ್ಯ ದೇಶಿಯ ಪ್ರವಾಸಿಗರು ಗೋವಾದ ಕಲಂಗುಟ್, ಮೀರಾಮಾರ್ ಸೇರಿದಂತೆ ಪ್ರಮುಖ ಬೀಚ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ದೇಶೀಯ ಪ್ರವಾಸಿಗರು ಬೀಚ್ ಮತ್ತು ಜಲಪಾತ ವೀಕ್ಷಣೆಗೆ ತೆರಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ಇದನ್ನೂ ಓದಿ : ಕುರುಗೋಡು: ಕೇಂದ್ರ ಸರಕಾರದ ಇಡಿ, ಪಠ್ಯ ಮರು ಪರಿಷ್ಕರಣಾ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ