ದೇವನಹಳ್ಳಿ: ರಾಜಕೀಯ ಪಕ್ಷಗಳಿಗೆಪ್ರತಿಷ್ಠೆಯಾಗಿದ್ದ ಹಾಗೂ ನಾಯರ ಅಸ್ತಿತ್ವ ಗಟ್ಟಿಮಾಡಿಕೊಳ್ಳಲು ನೆರವಾಗಿದ್ದ ಗ್ರಾಪಂ ಚುನಾವಣೆಗೆ ತೆರೆ ಬಿದ್ದಿದ್ದು, ಜಿಲ್ಲೆಯಲ್ಲಿ ಯಾವ ಗ್ರಾಪಂನಲ್ಲಿ ಯಾರ ಬೆಂಬಲಿತರು ಮೇಲುಗೈ ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಹಳ್ಳಿ ಮಟ್ಟದಲ್ಲಿ ನಡೆಯುತ್ತಿದೆ.
ಗ್ರಾಮದ ಹೋಟೇಲ್‌ಗಳು, ಅಂಗಡಿ ಮುಗ್ಗಟ್ಟುಗಳ ಹತ್ತಿರ ಚುನಾವಣೆ ಮುಗಿದಮರುದಿನವೇ ನಮ್ಮ ಮತಗಟ್ಟೆಯಲ್ಲಿಇಷ್ಟು-ಅಷ್ಟು ಶೇಕಡವಾರು ಮತದಾನವಾಗಿದೆ. ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುವುದುಕುತೂಹಲ ಮೂಡಿಸಿದೆ. ನಮ್ಮ ಬೆಂಬಲಿತ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬುವ ಲೆಕ್ಕಾಚಾರಗಳು ಶುರುವಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಹಳ್ಳಿಯಲ್ಲಿ ನಮ್ಮಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಯಾವಮತಗಟ್ಟೆಯಲ್ಲಿ ಎಷ್ಟು ಮತಗಳ ಅಂತರದಿಂದಗೆಲುವು ಸಾಧಿಸಲಿದ್ದಾರೆ ಎಂಬುವಲೆಕ್ಕಾಚಾರವನ್ನು ಬೆಂಬಲಿತ ಅಭ್ಯರ್ಥಿಗಳಮುಖಂಡರುಗಳು ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ಗೆಲುವು-ಸೋಲಿನ ಲೆಕ್ಕಾಚಾರ ಮತ್ತು ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ.
ಚುನಾವಣೆ ಆಯಾ ಕ್ಷೇತ್ರದ ಸ್ಥಳೀಯ ನಾಯಕರು ತಮ್ಮ ರಾಜಕೀಯ ನೆಲೆಯನ್ನುಗಟ್ಟಿಗೊಳ್ಳಲು ಮಹತ್ವದ ಚುನಾವಣೆ ಇದಾಗಿತ್ತು.ಚಳಿಗಾಳಿ ಎನ್ನದೆ, ಕಳೆದ ಒಂದು ವಾರದಿಂದ ಹಳ್ಳಿಹಳ್ಳಿ ಸುತ್ತಿ, ಪ್ರಚಾರ ಮಾಡಿ, ಚುನಾವಣೆಮುಗಿದು ಹೋಗಿದೆ. ಕ್ಷೇತ್ರದೊಳಗೆ ಅಸ್ತಿತ್ವದಉಳಿವಿನೊಂದಿಗೆ ವರ್ಚಸ್ಸುಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಹಳ್ಳಿ ಫೈಟ್ ಮೇಲ್ನೋಟಕ್ಕೆ ಪಕ್ಷರಹಿತವಾಗಿದ್ದರೂ, ಅಖಾಡದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ಒಂದೊಂದು ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಆಗಿದ್ದವರು. ಹೀಗಾಗಿ ಚುನಾವಣೆಯಲ್ಲಿ ಆ ವ್ಯಾಪ್ತಿಯ ಸ್ಥಳೀಯ ರಾಜಕೀಯ ನಾಯಕರು ತಮ್ಮ ವರ್ಚಸ್ಸುವೃದ್ಧಿಸಿಕೊಳ್ಳಲು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ದುಡಿದಿದ್ದಾರೆ. ಅದು ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂಬುವುದು ಫಲಿತಾಂಶದಲ್ಲಿ ಗೊತ್ತಾಗಲಿದೆ.
ಬಿಜೆಪಿ ಖಾತೆ ತೆರೆದು ಕಮಲ ಅರಳಿಸಲು ಶತಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸ್ವಪ್ರತಿಷ್ಠೆಯ ಕಣವಾಗಿರುವುದು ಕಂಡುಬರುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ ಗ್ರಾಪಂ ಯಾರ ಹಿಡಿತಕ್ಕೆ ಹೋಗಲಿದೆ ಎಂಬುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಇಂದು ಮಧ್ಯರಾತ್ರಿಯಿಂದ ಜಿಲ್ಲೆಯಲ್ಲಿ ಮದ್ಯ ನಿಷೇಧ :
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರಮತ್ತು ದೇವನಹಳ್ಳಿ ತಾಲೂಕುಗಳ ಗ್ರಾಪಂಚುನಾವಣೆಯ ಮತ ಎಣಿಕೆ ಕಾರ್ಯ 2020ರಡಿ.30ರಂದು ನಡೆಯಲಿರುವ ಹಿನ್ನೆಲೆ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಮಧ್ಯರಾತ್ರಿಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಲು ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.
ಶಾಂತ ಮತ್ತು ಮುಕ್ತವಾಗಿ ಮತ ಎಣಿಕೆ ಕಾರ್ಯ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಸಲುವಾಗಿ ಕರ್ನಾಟಕ ಅಬಕಾರಿಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ-10(ಬಿ)ರನ್ವಯ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತುಪಂಚಾಯತ್ ರಾಜ್(ತಿದ್ದುಪಡಿ) ಅಧಿನಿಯಮ 2020ರ ಪ್ರಕರಣ 3078ಎಸಿ(ಸಿ) ರಂತೆ ಬೆಂ.ಗ್ರಾಮಾಂತರ ಜಿಲ್ಲೆಯಾದ್ಯಂತ ಚಿಲ್ಲರೆ ಮದ್ಯದಅಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು,ಸಗಟು ಮದ್ಯದ ಅಂಗಡಿಗಳು, ಕ್ಲಬ್‌ಗಳು, ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ಗಳು, ಪಬ್‌ಗಳು, ವೈನ್ ಟ್ಯಾವರಿನ್‌ಗಳು, ವೈನ್ ಬೋಟಿಕ್‌ಗಳು ಇತ್ಯಾದಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.
-ಎಸ್.ಮಹೇಶ್