– ಅವಧಿ ಠೇವಣಿಗಳಾದ ಆರ್.ಡಿ., ಎಫ್.ಡಿ ಹಾಗೂ ನಗದು ಸರ್ಟಿಫಿಕೇಟುಗಳ ಮೇಲೆ ಯಾವಾಗಲೂ ಸಾಲ ಪಡೆಯುವ ಹಕ್ಕು ಠೇವಣಿದಾರರಿಗೆ ಇರುತ್ತದೆ. ಠೇವಣಿ ಮೇಲಿನ ಸಾಲದ ವಿವರಣೆ ಹೀಗಿದೆ.
– ಠೇವಣಿಯ ಮೊತ್ತದ ಶೇಕಡಾ 90ರಷ್ಟನ್ನು ಸಾಲವಾಗಿ ಪಡೆಯಬಹುದು. ನಗದು ಸರ್ಟಿಫಿಕೇಟುಗಳಾದಲ್ಲಿ, ಠೇವಣಿ ಇಟ್ಟ ತಾರೀಖೀನಿಂದ ಸಾಲ ಪಡೆಯುವ ತಾರೀಖೀನ ತನಕ ಆಗಿರುವ ಬಡ್ಡಿಯನ್ನು ಸೇರಿಸಿ ಶೇ.90ರಷ್ಟನ್ನು ಸಾಲವಾಗಿ ಪಡೆಯಬಹುದು.
– ಠೇವಣಿ ಸಾಲದ ಬಡ್ಡಿದರ, ಠೇವಣಿಯ ಮೇಲಿನ ಬಡ್ಡಿದರಕ್ಕಿಂತ ಶೇಕಡಾ ಒಂದು ಅಥವಾ ಎರಡು ಹೆಚ್ಚಿಗೆ ಆಯಾಯ ಬ್ಯಾಂಕುಗಳು ನಿರ್ಧರಿಸಿದಂತಿರುತ್ತದೆ.
– ಈ ಸಾಲಕ್ಕೆ ಕಂತುಗಳು ಇರುವುದಿಲ್ಲ. ಅವಧಿ ಮುಗಿಯುವ ಮುನ್ನ ಎಷ್ಟಾದರಷ್ಟು ಹಣವನ್ನು ಸಾಲಕ್ಕೆ ಜಮಾ ಮಾಡಬಹುದು. ಅವಧಿ ಮುಗಿಯುವಾಗ ಠೇವಣಿ ಹಣದಿಂದ ಸಾಲ ಮತ್ತು ಬಡ್ಡಿಯನ್ನು ಭರಿಸಿಕೊಂಡು ಉಳಿದ ಹಣವನ್ನು ಠೇವಣಿದಾರರಿಗೆ ಕೊಡುತ್ತಾರೆ. ಅಥವಾ ಠೇವಣಿದಾರರ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.
– ಠೇವಣಿ ಮೇಲೆ ಸಾಲ ಪಡೆಯುವಾಗ, ಠೇವಣಿ ರಶೀದಿಗಳನ್ನು ವಾಪಾಸು ಪಡೆಯುವಾಗ. ನಿಮ್ಮ ಠೇವಣಿಯ ಮೇಲೆ ಬ್ಯಾಂಕಿನವರು ಗುರುತಿಸಿದ ಭೋಜ(Lie) ರದ್ದು ಪಡಿಸಿರುವುದನ್ನು ಖಚಿತಪಡಿಸಿಕೊಳ್ಳಿ.
– ಈ ಸಾಲಕ್ಕೆ ಜಾಮೀನು ಕೇಳುವಂತಿಲ್ಲ.
– ಠೇವಣಿಗಳ ಮೇಲೆ ಓವರ್ ಡ್ರಾಫ್ಟ್ ಸವಲತ್ತು ಕೂಡಾ ಪಡೆಯಬಹುದು.