Advertisement

ರೈತರ ಮನೆ ಬಾಗಿಲಿಗೆ ಸಾಲ ಮನ್ನಾ ಯೋಜನೆ

11:56 PM Jul 03, 2019 | Team Udayavani |

ಸುಬ್ರಹ್ಮಣ್ಯ: ರಾಜ್ಯ ಸರಕಾರ ರೈತರ ಸಾಲ ಮನ್ನಾ ಯೋಜನೆ ಉಭಯ ಜಿಲ್ಲೆಗಳ ಹಲವು ಮಂದಿ ಅರ್ಹ ರೈತರಿಗೆ ಇನ್ನೂ ದೊರಕಿಲ್ಲ. ದೊರಕದೆ ಇರಲು ಕಾರಣವಾದ ಅಂಶಗಳ ವಿವರ ಪಡೆದು ಸಾಲ ಸೌಲಭ್ಯವನ್ನು ಅರ್ಹ ರೈತರಿಗೆ ತಲುಪಿಸುವ ಉದ್ದೇಶದಿಂದ ರೈತರ ಮನೆಬಾಗಿಲಿಗೆ ಅಭಿಯಾನ ರಾಜ್ಯದಲ್ಲಿ ಆರಂಭಗೊಂಡಿದ್ದು, ಅದರಂತೆ ಜಿಲ್ಲೆಯಲ್ಲೂ ಅಭಿಯಾನ ನಡೆಯುತ್ತಲಿದೆ.

Advertisement

ರೈತರ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಸ್ಥೆಗಳಿಂದ ರೈತರಿಗೆ ವಿತರಿಸಲಾದ ಅಲ್ಪಾವಧಿ ಸಾಲದ ಪೈಕಿ ಒಂದು ಕುಟುಂಬಕ್ಕೆ 1 ಲಕ್ಷ ರೂ.ವರೆಗೆ ಸಾಲ ಮನ್ನಾ ಯೋಜನೆ ಅನುಷ್ಠಾನ ಕುರಿತಂತೆ ಜೂ. 24ರಂದು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು. ಸಭೆಯಲ್ಲಿ ಅರ್ಹ ರೈತರಿಗೆ ಸಾಲ ಸೌಲಭ್ಯ ಸಿಗದೆ ಇರುವ ವಿಚಾರವಾಗಿ ಚರ್ಚೆ ನಡೆದಿದೆ. ಅರ್ಹ ಎಲ್ಲ ರೈತರಿಗೆ ಯೋಜನೆಯ ಲಾಭ ದೊರಕುಂವತಾಗಲೂ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪರಿಶೀಲನ ಸಮಿತಿ ರಚಿಸುವಂತೆ ಸೂಚನೆ ಹೊರಡಿಸಲಾಗಿತ್ತು.

ಸಮಿತಿಯಿಂದ ಭೇಟಿ ಕಾರ್ಯ

ಜಿಲ್ಲಾ ಮತ್ತು ತಾಲೂಕು ಸಮಿತಿ ರೈತರ ಮನೆಗಳಿಗೆ ತೆರಳುವ ಅಭಿಯಾನ ಆರಂಭಿ ಸಿದೆ. ಸಾಲ ಮನ್ನಾ ಆಗದೆ ಇರುವ ರೈತರ ವಿವರಗಳನ್ನು ಪಡೆದು ಆರ್ಹ ರೈತ ಕುಟುಂಬಕ್ಕೆ ಸಾಲ ಮನ್ನಾದ ಪ್ರಯೋಜನವನ್ನು ದೊರಕಿ ಸುವುದು. ಸಾಲ ಸೌಲಭ್ಯ ಪಡೆಯಲು ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ತಂಡ ರಚಿಸಲಿದೆ. ಬಳಿಕ ಜಂಟಿ ನಿರ್ಬಂಧಕರು ಪ್ರಕರಣಗಳ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ತಾ| ಸಮಿತಿ ಸಾಲ ಮನ್ನಾ ಯೋಜನೆಗೆ ಒಳಪಡುವ ಪ್ರತಿ ರೈತನ ಮನೆಗಳಿಗೆ ಭೇಟಿ ನೀಡಿ ಸಾಲಗಾರ ರೈತರ ಆಧಾರ್‌, ಪಡಿತರ ಚೀಟಿ ತಾಳೆಯಾಗದೆ ಇದ್ದು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿರುವ ಕುರಿತು ಪರಿಶೀಲನೆ ನಡೆಸಲಿದೆ.

Advertisement

ಸಾಲ ಪಡೆಯಲು ನ್ಯೂನ್ಯತೆಗಳ ಬಗ್ಗೆ ತಂಡ ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಲಿದೆ. ಅದನ್ನು ಸರಿಪಡಿಸಲು ಮತ್ತು ಸರಿಪಡಿಸಲು ಸಾಧ್ಯವಾಗದೆ ಇದ್ದ ಅಂಶಗಳಿದ್ದಲ್ಲಿ ಕಾರಣಗಳನ್ನು ಒಳಗೊಂಡ ವರದಿಯನ್ನು ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ಸಹಕಾರ ಸಂಘಗಳ ಅಪರ ನಿಬಂಧಕರ ಗಮನಕ್ಕೆ ತರಲಿದೆ.

ತಾಲೂಕು ಸಮಿತಿಯ ತಂಡದಲ್ಲಿ ಆಯಾ ತಾಲೂಕಿನ ಉಪವಿಭಾಗೀಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಉಪವಿಭಾಗೀಯ ನೋಡಲ್ ಅಧಿಕಾರಿಯಾಗಿರುತ್ತಾರೆ. ತಾಲೂಕಿನ ಒಬ್ಬ ಅಧಿಕಾರಿ, ಡಿಸಿಸಿ ಬ್ಯಾಂಕ್‌ ಮ್ಯಾನೇಜರ್‌, ಸೂಪರ್‌ವೈಸರ್‌ಗಳನ್ನೊಳಗೊಂಡ ತಾಲೂಕು ತಂಡವು ಪರಿಶೀಲನೆ ಮಾಡಿ ಸಲ್ಲಿಸಿದ ಮಾಹಿತಿಯಲ್ಲಿ ಶೇ. 10ರಷ್ಟು ಸಹಕಾರ ಸಂಘಗಳಿಗೆ ಸಹಾಯಕ ನಿಬಂಧಕರು ಹಾಗೂ ಶೇ. 10ರಷ್ಟು ದ.ಕ. ಜಿಲ್ಲಾ ಕೇಂದ್ರ ಸಹಕಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಖುದ್ದಾಗಿ ಪರಿಶೀಲನೆ ಮಾಡಿ ರೈತರನ್ನು ಭೇಟಿಯಾಗಿ ಎಲ್ಲ ಮಾಹಿತಿಯನ್ನು ಕ್ರೋಢಿಕರಿಸಿ ದೃಢೀಕರಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕಿದೆ.

ರಜೆಯಲ್ಲೂ ಕಾರ್ಯನಿರ್ವಹಣೆ
ಅಭಿಯಾನಕ್ಕೆ ರಚಿತ‌ವಾದ ಸಮಿತಿಗಳು ಪರಿಶೀಲನೆ ಕಾರ್ಯ ಮುಗಿಯುವವರೆಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿ ರವಿವಾರದಂದು ಬರುವ ಸಾರ್ವತ್ರಿಕ ರಜೆಗಳಲ್ಲಿಯೂ ಸಹಿತ ಕಾರ್ಯನಿರ್ವಹಿಸುವಂತೆ ಮೈಸೂರು ಪ್ರಾಂತ ನಿಬಂಧಕರ ಸೂಚನೆಯಿದೆ.

ಉಭಯ ಜಿಲ್ಲೆಯ 930 ಮನೆಗೆ ಭೇಟಿ

ದ.ಕ. ಜಿಲ್ಲೆಯಲ್ಲಿ 67,624 ಮಂದಿ, ಉಡುಪಿ ಜಿಲ್ಲೆಯಲ್ಲಿ 24,236 ಮಂದಿ ಸೇರಿ ಒಟ್ಟು 91,856 ಮಂದಿ ರೈತರು ಉಭಯ ಜಿಲ್ಲೆಯಲ್ಲಿದ್ದಾರೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 25,598 ರೈತರು 181 ಕೋಟಿ ಮೊತ್ತದ ಹಾಗೂ ಉಡುಪಿ ಜಿಲ್ಲೆಯ 10,322 ರೈತರು 69 ಕೋಟಿ ರೂ. ಮೊತ್ತದಷ್ಟು ಸಾಲ ಮಂಜೂರಾತಿ ಪಡೆದುಕೊಂಡಿದ್ದಾರೆ. ಅಭಿಯಾನದಲ್ಲಿ ಉಭಯ ಜಿಲ್ಲೆಗಳ 930 ಮಂದಿ ರೈತ ಕುಟುಂಬಗಳನ್ನು ಭೇಟಯಾಗಿ ಪರಿಶೀಲಿಸಲಿದೆ.

ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯದಲ್ಲಿ ರವಿವಾರ ರೈತರ ಮನೆಗಳಿಗೆ ಭೇಟಿ ಅಭಿಯಾನ ನಡೆಯಿತು. ಸಹಕಾರ ಸಂಘಗಳ ಉಪನಿಬಂಧಕ ಡಾ| ಸುರೇಶ್‌ ಗೌಡ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ದೇವರಾಜ್‌ ಕೆ.ಎಸ್‌., ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್‌ ಸಿಂಗ್‌, ಸುಬ್ರಹ್ಮಣ್ಯ ಐನಕಿದು ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ರುದ್ರಪಾದ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ಮನೋಜ್‌, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್‌ ಕೆ.ಎಸ್‌. ಭಾಗವಹಿಸಿದ್ದರು.

ಜು. 1ರಿಂದ ರಾಜ್ಯದಲ್ಲಿ ರೈತರ ಮನೆಗಳಿಗೆ ಭೇಟಿ ನೀಡುವ ಅಭಿಯಾನ ಆರಂಭವಾಗಿದ್ದು ಮೈಸೂರು ಮತ್ತು ಚಾಮರಾಜನಗರದದಲ್ಲಿ ಜು. 1ರಂದು, ಹಾಸನ ಜಿಲ್ಲೆಯಲ್ಲಿ ಜು. 2ರಂದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜು. 3ರಂದು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಜು. 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 5, ಕೊಡಗು ಜಿಲ್ಲೆಯಲ್ಲಿ ಜು. 6 ಮತ್ತು ಮಂಡ್ಯ ಜಿಲ್ಲೆಯಲ್ಲಿ ಜು. 8ರಂದು ತಂಡ ರೈತರ ಮನೆ ಭೇಟಿ ನಡೆಸಲಿದೆ.

ಭೇಟಿಗೆ ದಿನಾಂಕವೂ ನಿಗದಿ
ಜು. 1ರಿಂದ ರಾಜ್ಯದಲ್ಲಿ ರೈತರ ಮನೆಗಳಿಗೆ ಭೇಟಿ ನೀಡುವ ಅಭಿಯಾನ ಆರಂಭವಾಗಿದ್ದು ಮೈಸೂರು ಮತ್ತು ಚಾಮರಾಜನಗರದದಲ್ಲಿ ಜು. 1ರಂದು, ಹಾಸನ ಜಿಲ್ಲೆಯಲ್ಲಿ ಜು. 2ರಂದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜು. 3ರಂದು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಜು. 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 5, ಕೊಡಗು ಜಿಲ್ಲೆಯಲ್ಲಿ ಜು. 6 ಮತ್ತು ಮಂಡ್ಯ ಜಿಲ್ಲೆಯಲ್ಲಿ ಜು. 8ರಂದು ತಂಡ ರೈತರ ಮನೆ ಭೇಟಿ ನಡೆಸಲಿದೆ.

ಎಲ್ಲರಿಗೂ ತಲುಪಲಿಸಾಲ ಮನ್ನಾದ ಲಾಭ ಪಡೆಯಲು ಕೆಲ ರೈತರಲ್ಲಿ ದಾಖಲೆ ಗಳಲ್ಲಿ ವ್ಯತ್ಯಾಸವಿದೆ. ಅದನ್ನು ಪತ್ತೆ ಹಚ್ಚುವ ಕೆಲಸ ಅಭಿಯಾನದ ಮೂಲಕ ನಡೆಯುತ್ತಿದೆ. ಎಲ್ಲ ಅರ್ಹ ರೈತರಿಗೂ ಸಾಲಮನ್ನಾ ಸೌಲಭ್ಯ ದೊರಕಲು ಈ ಅಭಿಯಾನ ನಡೆಯುತ್ತಿದೆ.
ಶಿವಲಿಂಗಯ್ಯ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next