ಸಿರುಗುಪ್ಪ: ಸಾಲಮನ್ನಾ ಯೋಜನೆಗೆ ಸಂಬಂಧಿ ಸಿದ ಗೊಂದಲಗಳು ಈಗಲೂ ಮುಂದುವರಿದಿದ್ದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರೈತರ ಖಾತೆಗಳಿಗೆ ಜಮೆಯಾಗಿದ್ದ ಸಾಲಮನ್ನಾ ಯೋಜನೆಯ ಹಣ ವಾಪಸ್ ಪಡೆಯಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಸೇರಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಬೆಳೆ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಿದೆ. ಅಲ್ಲದೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಮೂಲಕ ಸಾಲಮನ್ನಾಕ್ಕೆ ನಿರ್ಧರಿಸಲಾಗಿತ್ತು.
2019ರ ಜನವರಿಯಲ್ಲಿ ಮೊದಲ ಕಂತಿನ ರೂಪದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 50 ಸಾವಿರ ರೂ. ಜಮಾ ಮಾಡಲಾಗಿತ್ತು. ಲೋಕಸಭಾ ಚುನಾವಣೆ ವೇಳೆ 2ನೇ ಕಂತಿನ ರೂಪದಲ್ಲಿ 49,999 ರೂ. ಜಮಾ ಮಾಡಲಾಗಿತ್ತು. ಒಂದು ಲಕ್ಷ ರೂ.ವರೆಗಿನ ಸಾಲಮನ್ನಾ ಆಗಿದ್ದಕ್ಕೆ ರೈತರು ಸಂತಸಗೊಂಡಿದ್ದರು.
ಆದರೆ ಈ ಸಂತಸ ಮಂಜಿನಂತೆ ಕರಗಿದ್ದು, ರೈತರ ಖಾತೆಗಳಿಗೆ ಜಮೆ ಆಗಿದ್ದ ಹಣವನ್ನು ಸರ್ಕಾರ ದಿಢೀರ್ ವಾಪಸ್ ಪಡೆದಿದೆ. ತಾಲೂಕಿನ ಕರೂರು ಗ್ರಾಮದ ಎಂ.ಬಸವರಾಜ ಎನ್ನುವವರು ಎಚ್. ಹೊಸಳ್ಳಿಯ ರಾಷೀಕೃತ ಬ್ಯಾಂಕ್‌ನ ಶಾಖೆಯೊಂದರಲ್ಲಿ ಬೆಳೆಸಾಲ ಪಡೆದಿದ್ದರು. ರೈತರ ಸಾಲಮನ್ನಾ ಯೋಜನೆಯಡಿ ಬಸವರಾಜ ಖಾತೆಗೆ ಜನವರಿಯಲ್ಲಿ 50 ಸಾವಿರ ರೂ. ಮತ್ತು 2019 ಏ.17ರಂದು 49,999 ರೂ. ಬೆಳೆ ಸಾಲದ ಹಣ ಜಮಾ ಆಗಿದೆ.
ಮೇ 2ರಂದು 49,999 ರೂ. ಮತ್ತು 6 ರಂದು 50 ಸಾವಿರ ರೂ.ಗಳನ್ನು ಕ್ರಮವಾಗಿ ಹಿಂಪಡೆಯಲಾಗಿದೆ. ಈ ಬಗ್ಗೆ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಎಂಟ್ರಿ ಮಾಡಿಸಲು ತೆರಳಿದಾಗ ಇದು ಗೊತ್ತಾಗಿದೆ. ಈ ಬಗ್ಗೆ ಬ್ಯಾಂಕ್ ಅಧಿ ಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲದಂತಾಗಿದೆ ಎಂದು ರೈತ ಎಂ.ಬಸವರಾಜ ತಿಳಿಸಿದ್ದಾರೆ.