Advertisement

60 ವರ್ಷ ಮೇಲ್ಪಟ್ಟ ರೈತರಿಗೂ ಸಾಲ ಸೌಲಭ್ಯ

04:29 PM Sep 25, 2022 | Team Udayavani |

ಬರಗೂರು: 60 ವರ್ಷ ಮೇಲ್ಪಟ್ಟ ರೈತರಿಗೆ ಸಾಲ ಸೌಲಭ್ಯ ನೀಡಬಾರದೆಂಬ ಸರ್ಕಾರದ ಆದೇಶವಿದ್ದರೂ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಅವರ ಸಹಕಾರ ಮತ್ತು ರೈತರ ಮೇಲಿನ ಅಭಿಮಾನದಿಂದಾಗಿಕಾನೂನು ಕಟ್ಟಳೆಗಳನ್ನು ಪರಿಗಣಿಸಿ, ಸಾಲ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್‌ನಿರ್ದೇಶಕ, ಸಂಘದ ಅಧ್ಯಕ್ಷ ಜಿ.ಎನ್‌. ಮೂರ್ತಿ ಭರವಸೆ ನೀಡಿದರು.

Advertisement

ಶಿರಾ ತಾಲೂಕಿನ ಬರಗೂರಿನ ಆಂಜನೇಯ ಸ್ವಾಮಿ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಪಿಎಸಿಸಿಯಿಂದ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಮ್ಮ ಸಂಘದಲ್ಲಿ ರೈತರು ಸಾಲ ಸೌಲಭ್ಯ ಪಡೆಯಲು ಅಲೆಯುವ ಅಗತ್ಯವಿಲ್ಲ. ಕಚೇರಿ ಸಿಬ್ಬಂದಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದರೆ ಸಾಕು. ಇತ್ತೀಚೆಗೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಸಾಲ ಮನ್ನಾ ಆದ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವೇ ತಿಂಗಳಿಗಳಲ್ಲಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.

ನಾಲ್ಕೂವರೆ ಕೋಟಿ ರೂ. ಸಾಲ: ಜಿಲ್ಲೆಯಲ್ಲಿ ಒಟ್ಟು 234 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿವೆ. ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ 700 ಕೋಟಿ ರೂ. ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಪಹಣಿ ಇರುವಂತಹ ಎಲ್ಲಾ ರೈತರಿಗೂ ಸಾಲ ಸೌಲಭ್ಯ ನೀಡುವ ಸಹಕಾರ ಸಂಘ ಎಂದರೆ ಅದು ಬರಗೂರು ಪಿಎಸಿಸಿ. 1,280 ರೈತರಿಗೆ 3.75 ಕೋಟಿ ರೂ. ಸಾಲ ಕೊಟ್ಟಿದ್ದೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಂದೊಂದು ಬಾರಿ ರೈತರ ಸಾಲ ಆಗಿದ್ದು, ನಂತರ ಸಂಘದಿಂದ ನಾಲ್ಕೂವರೆ ಕೋಟಿ ರೂ. ಅನ್ನು ರೈತರಿಗೆ ನೀಡಿದ್ದೇವೆ ಎಂದರು.

ಇಷ್ಟೊಂದು ಸಾಲ ನೀಡಿರುವುದು ಸರ್ಕಾರದ ಹಣದಿಂದಲ್ಲ. ಜಿಲ್ಲಾ ಸಹಕಾರ ಬ್ಯಾಂಕ್‌, ರೈತರಿಂದ ಸಂಗ್ರಹವಾದ ಡಿಪಾಸಿಟ್‌ನಿಂದ. ಸರ್ಕಾರ ಮಾಡದ ಕೆಲಸವನ್ನು ನಮ್ಮ ಜಿಲ್ಲಾ ಸಹಕಾರ ಬ್ಯಾಂಕ್‌ ಮಾಡುತ್ತಿದೆ ಎಂದು ತಿಳಿಸಿದರು.

ಲಾಭದಾಯಕ ಹಂತಕ್ಕೆ ತಪುಪಿದೆ: ವಿಎಸ್‌ ಎಸ್‌ಎನ್‌ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, 2015ರಲ್ಲಿ ನಮ್ಮ ಸಂಘ ಬಹಳಷ್ಟು ನಷ್ಟದಲ್ಲಿತ್ತು. ನಂತರ ಅಭಿವೃದ್ಧಿ ಕಾರ್ಯಗಳ ಮೂಲಕ, ರೈತರಿಗೆ ಸಾಲ ಸೌಲಭ್ಯ ನೀಡಿ, ಅದರಿಂದ ಸರ್ಕಾರದಿಂದ ಬಂದಂತಹ ಸಬ್ಸಿಡಿ ಹಣವನ್ನು ಕ್ರೋಡೀಕರಿಸಿದ ಪರಿಣಾಮ, ಈ ಹಿಂದೆ ಇದ್ದ 24 ಲಕ್ಷ ರೂ. ಸಾಲ ತೀರಿಸಿ ನಮ್ಮ ಸಹಕಾರ ಸಂಘ ಲಾಭದಾಯಕ ಹಂತಕ್ಕೆ ತಪುಪಿದೆ ಎಂದು ಹೇಳಿದರು.

Advertisement

ಬಡ್ಡಿ ರಹಿತ ಸಾಲ ಪಡೆದು ನೆಮ್ಮದಿ ಜೀವನ: ಸಂಘದ ನಿರ್ದೇಶಕ ಡಿ.ಎನ್‌.ಪರಮೇಶ್‌ ಗೌಡ ಮಾತನಾಡಿ, ಹಲವು ಬ್ಯಾಂಕ್‌ಗಳಲ್ಲಿ ಬಡ್ಡಿ ಮೂಲಕ ರೈತರು ಸಾಲ ಪಡೆಯುತ್ತಿದ್ದಾರೆ. ಆದರೆ, ಜಿಲ್ಲಾ ಸಹಕಾರ ಬ್ಯಾಂಕಲ್ಲಿ ರೈತರು ಬಡ್ಡಿ ರಹಿತ ಸಾಲ ಪಡೆದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ, ರಾಜೇಂದ್ರ ರಾಜಣ್ಣ ಅವರ ಸಹಕಾರದಿಂದ ಸಾಧ್ಯವಾಗಿದೆ ಎಂದು ವಿವರಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಈ ವೇಳೆ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಹಕಾರ ಸಂಘದ ಉಪಾಧ್ಯಕ್ಷ ಬಿ.ಸಿ.ಸತೀಶ್‌, ಡಿಸಿಸಿ ಬ್ಯಾಂಕ್‌ ಬರಗೂರು ಶಾಖಾವ್ಯವಸ್ಥಾಪಕ ಗುರುಪ್ರಕಾಶ್‌, ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ಜಯರಾಮೇಗೌಡ, ಮದ್ದೇಗೌಡ, ಪರಮೇಶ್‌ಗೌಡ, ನಂಜೇಗೌಡ, ನಾಗರಾಜು, ನಿರ್ಮಲಾ, ಶೈಲಜಾ, ದೊಡ್ಡ ಬೋರಪ್ಪ, ರಾಮಣ್ಣ, ಕೃಷ್ಣಮೂರ್ತಿ, ಕೃಷ್ಣಪ್ಪ, ಸಹಕಾರ ಸಂಘದ ಸಿಇಒ ಆರ್‌.ತಿಮ್ಮರಾಜು, ಗುಮಾಸ್ತ ಮಹಂತೇಶ್‌, ಸಹಾಯಕ ರಾಜಣ್ಣ,ಗಡಿನಾಡ ತೋಟಗಾರಿಕೆ ಕಂಪನಿ ಅಧ್ಯಕ್ಷ ಡಾ.ಚಂದ್ರಶೇಖರ್‌, ಸಿಇಒ ಶಿವಣ್ಣ, ರೈತ ಸಂಘದಅಧ್ಯಕ್ಷ ಲಕ್ಷ್ಮಣಗೌಡ, ರೈತ ಮುಖಂಡ ಮುಕುಂದಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next